ಯೆನೆಪೋಯ ಟೆಕ್ನಾಲಜಿ ಇನ್ಕ್ಯೂಬೇಟರ್ ಉದ್ಘಾಟನೆ

ಉಳ್ಳಾಲ: ಯೆನೆಪೋಯ ಟೆಕ್ನಾಲಜಿ ಇನ್ಕ್ಯೂಬೇಟರ್ ಇದರ ಉದ್ಘಾಟನಾ ಸಮಾರಂಭ ಗುರುವಾರ ದೇರಳಕಟ್ಟೆಯ ಯೆನೆಪೋಯ ವಿವಿ ಆವರಣದಲ್ಲಿ ನಡೆಯಿತು.
ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಉದ್ಘಾಟಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಯೆನೆಪೋಯ ಎತ್ತರಕ್ಕೆ ಬೆಳೆದಿದೆ. ಮೆಡಿಕಲ್, ಡೆಂಟಲ್ ಕಾಲೇಜು ಶಿಕ್ಷಣ ದಿಂದ ಬದಲಾವಣೆ ಕಾಣಲು ಸಾಧ್ಯ ಆಗಿದೆ. ವೈದ್ಯಕೀಯ ವ್ಯವಸ್ಥೆ ಯಲ್ಲಿ ದೇಶದಲ್ಲಿ ಎರಡನೇ ಸ್ಥಾನ ಯೆನೆಪೋಯಕ್ಕಿದೆ ಎಂದು ಹೇಳಿದರು.
ಕಾಲೇಜು ಬದಲಾವಣೆ ಕಾಣಬೇಕಾದರೆ ಯೋಜನೆ ಗಳ ಸಹಿತ ಐಡಿಯಾ ಕೂಡಾ ಇರಬೇಕು. ಸಣ್ಣ ಯೋಜನೆ ಅಥವಾ ಬದಲಾವಣೆ ತರಲು ಹೋದರೆ ಅದಕ್ಕೆ 108 ನಿಯಮಗಳು ಇರುತ್ತವೆ. ಎಲ್ಲವನ್ನೂ ಮೆಟ್ಟಿ ನಿಂತು ತಂತ್ರಜ್ಞಾನ ರೂಪಿಸಲಾಗುತ್ತಿದೆ. ಕೆಲವು ಸಮಯದ ಬಳಿಕ ಔಷಧಿ ತಯಾರಿಸುವ ವ್ಯವಸ್ಥೆ ಕೂಡಾ ಮಾಡಬಹುದು. ಯನೆಪೋಯದ ವ್ಯವಸ್ಥೆ ಆ ರೀತಿ ಇದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ಯೆನೆಪೋಯ ಟೆಕ್ನಾಲಜಿ ಇನ್ಕ್ಯೂಬೇಟರ್ ಸೆಕ್ಷನ್ 8 ನೇ ಸಂಸ್ಥೆ ಯಾಗಿ ನೋಂದಾಯಿತ ಗೊಂಡಿದ್ದು, ಒಂದು ಲಾಭಾಪೇಕ್ಷಾ ರಹಿತ ಸಂಸ್ಥೆ ಯಾಗಿದೆ. ಆರೋಗ್ಯ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸ್ರಜನ ಶೀಲಾ ಆವಿಷ್ಕಾರ ಮತ್ತು ಉದ್ಯಮ ಶೀಲತೆ ಯನ್ನು ಪ್ರೇರೇಪಿಸುವ ಮಹತ್ವಾಕಾಂಕ್ಷೆಯನ್ನು ಈ ಸಂಸ್ಥೆ ಹೊಂದಿದೆ. ಯೆನೆಪೋಯ ಶಿಕ್ಷಣ ಜೊತೆ ಆರೋಗ್ಯ ಕಡೆ ಒತ್ತು ನೀಡುತ್ತದೆ. ಇದಕ್ಕೆ ಸರ್ಕಾರ ದಿಂದ ಸಹಕಾರ ನೀಡಲು ತಯಾರಿ ಇದ್ದೇವೆ. ಅಭಿವೃದ್ಧಿ ಹಾಗೂ ಸಾಧನೆ ಯಲ್ಲಿ ದೇಶದಲ್ಲಿ ಎರಡನೇ ಸ್ಥಾನ ಯೆನೆಪೋಯ ಪಡೆದುಕೊಂಡಿದೆ ಎಂದು ಸಚಿವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕುಲಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ, ಉಪ ಕುಲಾಧಿಪತಿ ವಿಜಯ ಕುಮಾರ್, ಯೆನೆಪೊಯ ಸಹ ಕುಲಾಧಿಪತಿ ಫರ್ಹಾದ್, ಸಿಂಡಿಕೇಟ್ ಸದಸ್ಯ ಇಫ್ತಿಕಾರ್, ರಿಜಿಸ್ಟ್ರಾರ್ ಗಂಗಾಧರ ಸೋಮಯಾಜಿ, ಮೈಸೂರು ಇಲೆಕ್ಟ್ರಿಕಲ್ ಪ್ರೈವೇಟ್ ಲಿಮಿಟೆಡ್ ನಿಗಮದ ಅಧ್ಯಕ್ಷ ಸಂತೋಷ್ ಬೋಳಿಯಾರ್ , ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಮತ್ತಿತರರು ಉಪಸ್ಥಿತರಿದ್ದರು.