ಉಳ್ಳಾಲ ದರ್ಗಾಕ್ಕೆ ಬಿಲ್ಲವ ನಾಯಕರ ಭೇಟಿ

ಉಳ್ಳಾಲ: ಉಳ್ಳಾಲ ಉರೂಸಿನ ಸಂದರ್ಭದಲ್ಲಿ ದರ್ಗಾಕ್ಕೆ ಭೇಟಿ ನೀಡಿದ ಉಳ್ಳಾಲದ ಬಿಲ್ಲವ ಸಮಾಜದ ಮುಖಂಡರು ಉಳ್ಳಾಲ ಉರೂಸಿನ ಯಶಸ್ವಿ ನಿರ್ವಹಣೆಗಾಗಿ ಮತ್ತು ನಾಡಿನ ಸೌಹಾರ್ದಕ್ಕೆ ಮೊದಲ ಆದ್ಯತೆ ನೀಡುವ ಉಳ್ಳಾಲ ದರ್ಗಾ ಪರಂಪರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ರವರು ಉಳ್ಳಾಲ ಬಿಲ್ಲವ ಸಮಾಜದ ಅಧ್ಯಕ್ಷ ರಾಮಪೂಜಾರಿ ಪರಿಯತ್ತೂರುರನ್ನು ಶಾಲು ಹೊದಿಸಿ ಸನ್ಮಾನಿಸಿ, ದರ್ಗಾದ ಪ್ರಸಾದವನ್ನು ಬಿಲ್ಲವ ಸಮಾಜದ ಗಣ್ಯರಿಗೆ ನೀಡಿ ಗೌರವಿಸಿದರು.
ಬಿಲ್ಲವ ಮುಖಂಡರಾದ ಸತೀಶ್ ಉಳ್ಳಾಲ್, ಬಿಲ್ಲವ ಟ್ರಸ್ಟ್ ಗೌರವ ಅಧ್ಯಕ್ಷ ಗೋಪಾಲ್ ಕೃಷ್ಣ ಸೋಮೇಶ್ವರ್, ಮಾಜಿ ಅಧ್ಯಕ್ಷ ಬಾಳಪ್ಪ ಪೂಜಾರಿ ಬಿಲ್ಲವ ಅಧ್ಯಕ್ಷರ ಜೊತೆಯಲ್ಲಿ ಆಗಮಿಸಿದ್ದರು. ಉಳ್ಳಾಲ ದರ್ಗಾ ಉಪಾಧ್ಯಕ್ಷ ಯು.ಕೆ.ಮೋನು, ಪ್ರ.ಕಾರ್ಯದರ್ಶಿ ತ್ವಾಹ ಹಾಜಿ, ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್, ಸುಪ್ರೀಂ ಕಮಿಟಿ ಕೆ.ಎನ್‌ಮುಹಮ್ಮದ್ ಉಪಸ್ಥಿತರಿದ್ದರು
Next Story