ದ.ಕ.ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಹೈಕೋರ್ಟ್ ಅನುಮತಿ
ಮಂಗಳೂರು, ಮಾ.3: ದ.ಕ.ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ರಾಜ್ಯ ಹೈಕೋರ್ಟ್ ಅನುಮತಿ ನೀಡಿದೆ.
ಮಂಗಳೂರು ವಕೀಲರ ಸಂಘ (ಬಾರ್ ಕೌನ್ಸಿಲ್) ಜಿಲ್ಲಾ ಕೋರ್ಟ್ ಆವರಣದಲ್ಲಿ ಮಾ.11ರಂದು ಪಾವಂಜೆ ಮೇಳದ 3ನೇ ವರ್ಷದ ಯಕ್ಷಗಾನ ಬಯಲಾಟಕ್ಕೆ ಸಿದ್ಧತೆ ನಡೆಸಿತ್ತು. ಅದಕ್ಕಾಗಿ ಅನುಮತಿ ಕೋರಿ ಹೈಕೋರ್ಟ್‌ಗೆ ಬಾರ್ ಕೌನ್ಸಿಲ್ ಮನವಿ ಮಾಡಿದ್ದು, ಮಾ.3ರಂದು ಅನುಮತಿ ನೀಡಿ ಹೈಕೋರ್ಟ್ ನಿರ್ದೇಶನ ನೀಡಿದೆ. ಸಂಜೆ 6ರಿಂದ ರಾತ್ರಿ 10ರವರೆಗೆ ಯಕ್ಷಗಾನ ಆಯೋಜಿಸಬಹುದಾಗಿದೆ.
ಕಾರ್ಯಕ್ರಮ ಆಯೋಜನೆ ವೇಳೆ ಕೋರ್ಟ್ ಆವರಣದಲ್ಲಿ ಶುಚಿತ್ವವನ್ನು ಕಾಪಾಡಬೇಕು, ಕೋರ್ಟ್ ಆವರಣದಲ್ಲಿ ರುವ ಯಾವುದೇ ಸಾರ್ವಜನಿಕ ಸೊತ್ತುಗಳನ್ನು ಹಾಳು ಮಾಡಬಾರದು, ಯಾವುದೇ ಅನುಚಿತ ವರ್ತನೆಗಳಿಗೆ ಅವಕಾಶ ನೀಡಬಾರದು ಎಂದು ನಿರ್ದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
Next Story