Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸ್ವದೇಶಕ್ಕೆ ಮರಳಿದ ವಿದ್ಯಾರ್ಥಿಗಳಿಗೆ ...

ಸ್ವದೇಶಕ್ಕೆ ಮರಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಹಾರ ಸಿಗಲಿ

ವಾರ್ತಾಭಾರತಿವಾರ್ತಾಭಾರತಿ4 March 2022 12:05 AM IST
share
ಸ್ವದೇಶಕ್ಕೆ ಮರಳಿದ ವಿದ್ಯಾರ್ಥಿಗಳಿಗೆ   ಶೈಕ್ಷಣಿಕ ಪರಿಹಾರ ಸಿಗಲಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸ

 ತಮ್ಮ ಭಗ್ನ ಕನಸುಗಳನ್ನು ಹೊತ್ತುಕೊಂಡು ನೂರಾರು ವಿದ್ಯಾರ್ಥಿಗಳು ಯುದ್ಧ ಪೀಡಿತ ದೇಶದಿಂದ ಸ್ವದೇಶಕ್ಕೆ ಮರಳಿದ್ದಾರೆ. ಯುದ್ಧದಿಂದ ನಾಶವಾಗುತ್ತಿರುವುದು ಉಕ್ರೇನ್ ಅಷ್ಟೇ ಅಲ್ಲ, ನಮ್ಮ ನೆಲದ ವಿದ್ಯಾರ್ಥಿಗಳ ಭವಿಷ್ಯದ ಕನಸುಗಳು ಕೂಡ. ಭಾರತಕ್ಕೆ ಬಂದ ಬಳಿಕವೂ ಅವರ ಆಕ್ರೋಶ, ನೋವು, ತಣ್ಣಗಾದಂತಿಲ್ಲ. ಅವರ ಮಾತಿನಲ್ಲಿ ‘ಭಾರತ ನಮ್ಮನ್ನು ವಂಚಿಸಿದೆ’ ಎನ್ನುವ ನೋವು ಎದ್ದು ಕಾಣುತ್ತಿದೆ. ತಮ್ಮನ್ನು ರಕ್ಷಿಸಿದ ‘ಭಾರತದ ಕಾರ್ಯಾಚರಣೆ’ಯ ಬಗ್ಗೆ ತೃಪ್ತಿಕರವಾಗಿ ಮಾತನಾಡಿಲ್ಲ. ಬಹುತೇಕ ವಿದ್ಯಾರ್ಥಿಗಳು ಉಕ್ರೇನ್‌ನ ರಾಯಭಾರ ಕಚೇರಿಯ ವೈಫಲ್ಯಗಳನ್ನು, ಎಡವಟ್ಟುಗಳನ್ನು ಎತ್ತಿ ಆಡುತ್ತಿದ್ದರು. ಈಗಾಗಲೇ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಕರೆಸಿಕೊಂಡಿದ್ದೇವೆ ಎಂದು ಭಾರತ ಹೇಳುತ್ತಿದೆಯಾದರೂ, ಇನ್ನೂ ಸಾವಿರಾರು ವಿದ್ಯಾರ್ಥಿಗಳು ಯುದ್ಧಪೀಡಿತ ಅಪಾಯಕಾರಿ ಸ್ಥಳಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ವೀಡಿಯೊ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಭಾರತದ ಜೊತೆಗಿನ ಮಾತುಕತೆಯಲ್ಲಿ ‘‘ವಿದ್ಯಾರ್ಥಿಗಳನ್ನು ಉಕ್ರೇನ್ ಒತ್ತೆಯಾಳಾಗಿ ಬಳಸಿಕೊಳ್ಳುತ್ತಿದೆ’’ ಎಂದು ರಶ್ಯ ಆರೋಪಿಸಿದೆ. ಆದರೆ ಭಾರತ ಮಾತ್ರ ಇದನ್ನು ನಿರಾಕರಿಸಿದ್ದು, ವಿದ್ಯಾರ್ಥಿಗಳೆಲ್ಲ ಕ್ಷೇಮವಾಗಿರುವ ಪ್ರದೇಶದಲ್ಲಿದ್ದಾರೆ ಎಂದು ಹೇಳಿದೆ. ಉಕ್ರೇನ್ ವಿದ್ಯಾರ್ಥಿಗಳನ್ನು ಬಳಸಿಕೊಂಡರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ರಶ್ಯದ ದಾಳಿಯಿಂದ ಈ ವಿದೇಶಿ ವಿದ್ಯಾರ್ಥಿಗಳು ಮೃತಪಟ್ಟರೆ, ಅದು ಜಗತ್ತಿನಾದ್ಯಂತ ಭಾರೀ ಸುದ್ದಿಯಾಗುತ್ತದೆ. ರಶ್ಯಾ ಯುದ್ಧಾಪರಾಧಿಯಾಗಿ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ. ಆದುದರಿಂದ, ಅಪಾಯದಲ್ಲಿರುವ ವಿದ್ಯಾರ್ಥಿಗಳನ್ನು ರಕ್ಷಿಸಲು ಉಕ್ರೇನ್ ಸರಕಾರ ವಿಶೇಷ ಆಸ್ಥೆಯನ್ನು ವಹಿಸುವ ಸಾಧ್ಯತೆಗಳಿಲ್ಲ. ಇರಲಿ. ಎಲ್ಲ ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳುತ್ತಾರೆ ಎಂದೇ ಭಾವಿಸೋಣ. ಅಲ್ಲಿಗೆ ಪ್ರಕರಣ ಸುಖಾಂತ್ಯವಾಗುತ್ತದೆಯೇ?

 ಅಷ್ಟೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿನ್ನೆಲೆಯನ್ನು ಸರಕಾರವೊಮ್ಮೆ ಗಮನಿಸಲಿ. ಅವರಲ್ಲಿ ಬಹುತೇಕರು ಎಸೆಸೆಲ್ಸಿ, ಪಿಯುಸಿಯಲ್ಲಿ ಅತ್ಯಧಿಕ ಅಂಕಗಳನ್ನು , ರ್ಯಾಂಕ್‌ಗಳನ್ನು ಪಡೆದವರು. ದಿಕ್ಕು ದೆಸೆಯಿಲ್ಲದ ಊರಿಗೆ ಅವರು ವಿದ್ಯೆ ಕಲಿಯಲು ಹೋಗಿದ್ದಾರೆ ಎಂದರೆ, ವೈದ್ಯಕೀಯ ಶಿಕ್ಷಣವನ್ನು ತನ್ನದಾಗಿಸುವ ಒಂದೇ ಒಂದು ಕಾರಣದಿಂದ. ಭಾರತ ಆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶ ಗಳನ್ನು ನೀಡಿದ್ದರೆ, ಪಟೇಲ್, ಶಂಕರಾಚಾರ್ಯ, ಶಿವಾಜಿ ಮೊದಲಾದ ಪ್ರತಿಮೆಗಳಿಗೆ, ಮಂದಿರಗಳಿಗೆ ಚೆಲ್ಲಿದ ಸಾವಿರಾರು ಕೋಟಿ ರೂಪಾಯಿಯನ್ನು ಈ ವಿದ್ಯಾರ್ಥಿಗಳಿಗಾಗಿ ವ್ಯಯ ಮಾಡಿದ್ದರೆ, ಅವರ ಕನಸೂ ಈಡೇರುತ್ತಿತ್ತು. ನಮ್ಮ ಯುವಕರು ಭವಿಷ್ಯದ ಸಂಪತ್ತಾಗಿ ರೂಪುಗೊಳ್ಳುತ್ತಿದ್ದರು. ನೀಟ್ ಜಾರಿಗೊಂಡ ಬಳಿಕ ಗ್ರಾಮೀಣ ಪ್ರದೇಶದ ಪ್ರತಿಭಾವಂತರು, ಮಧ್ಯಮ ವರ್ಗದ ಪ್ರತಿಭಾವಂತರು ಈ ಆಯ್ಕೆ ತಂತ್ರದಲ್ಲಿ ವಂಚನೆಗೀಡಾದರು. ಭಾರತ ತನಗೆ ವಂಚಿಸಿತು ಎನ್ನುವ ಭಾವನೆಯನ್ನು ಇಟ್ಟುಕೊಂಡು ಹೆಚ್ಚಿನ ಕಲಿಕೆಗಾಗಿ ಅವರು ಉಕ್ರೇನ್‌ನಂತಹ ದೇಶಗಳಿಗೆ ತೆರಳಿದರು. ಉಕ್ರೇನ್ ಮೇಲೆ ನಡೆದ ಯುದ್ಧದಲ್ಲಿ ಧ್ವಂಸಗೊಂಡಿರುವುದು ಉಕ್ರೇನ್ ನಗರಗಳು ಮಾತ್ರವಲ್ಲ, ಇವರ ಕನಸಿನ ಮಹಲುಗಳೂ ಅದರ ಜೊತೆ ಜೊತೆಗೇ ಉರುಳಿದವು. ಹೆಚ್ಚಿನ ಕಲಿಕೆಗಾಗಿ ವಿದೇಶಕ್ಕೆ ತೆರಳಿದ ದೇಶದ ಮಕ್ಕಳನ್ನು ಯಾವ ಅಪಾಯವೂ ಇಲ್ಲದೆ ಕಣ್ಣಲ್ಲಿ ಕಣ್ಣಿಟ್ಟು ಕಾಯುವುದು ದೇಶವನ್ನಾಳುವವರ ಕರ್ತವ್ಯ. ಯಾಕೆಂದರೆ ನಾಳೆ ಕಳಿತು ನಮ್ಮದೇ ದೇಶಕ್ಕೆ ಅವರು ಆಸರೆಯಾಗುವವರು. ಯುದ್ಧ ಇನ್ನೇನು ಘೋಷಣೆಯಾಗುತ್ತದೆ ಎನ್ನುವ ಸುಳಿವು ಭಾರತಕ್ಕೆ ಸಿಕ್ಕಿದಾಕ್ಷಣ ಅವರನ್ನು ಆದ್ಯತೆಯ ಮೇಲೆ ಸ್ವದೇಶಕ್ಕೆ ಕರೆತರುವ ಕೆಲಸ ಮಾಡಬೇಕಾಗಿತ್ತು. ರಾಯಭಾರ ಕಚೇರಿಯ ವೈಫಲ್ಯದಿಂದಾಗಿ ಯುದ್ಧ ಘೋಷಣೆಯಾದ ಬಳಿಕವೂ ಅವರು ಅಲ್ಲೇ ಉಳಿಯುವಂತಾಯಿತು. ಆ ಬಳಿಕ ಅವರನ್ನು ರಕ್ಷಿಸುವುದು ಅಷ್ಟು ಸುಲಭದ ಕೆಲಸವೇನೂ ಅಲ್ಲ. ಸದ್ಯಕ್ಕೆ ಈ ದೇಶವನ್ನು ಪರೋಕ್ಷವಾಗಿ ಅನಿಲ್ ಅಂಬಾನಿ, ಅದಾನಿಗಳು ಆಳುತ್ತಿರುವುದರಿಂದ, ರಶ್ಯ, ಉಕ್ರೇನ್‌ನಂತಹ ದೇಶಗಳ ರಾಜತಾಂತ್ರಿಕ ವ್ಯಕ್ತಿಗಳ ಜೊತೆಗೆ ಪರಿಣಾಮಕಾರಿ ಮಾತುಕತೆ ನಡೆಸುವ ಮುತ್ಸದ್ದಿಗಳು ವಿದೇಶಾಂಗ ಇಲಾಖೆಯಲ್ಲೂ ಇದ್ದಂತಿಲ್ಲ. ವಿದೇಶಾಂಗ ಸಚಿವರು ಇದ್ದಾರೆಯೋ ಇಲ್ಲವೋ ಎಂದು ದೇಶ ಗೊಂದಲದಲ್ಲಿದೆ. ಕೊನೆಯ ಕ್ಷಣದ ಸರಕಾರದ ಪ್ರಯತ್ನ ಸಂಪೂರ್ಣ ಯಶಸ್ವಿಯಾಗಲಿ ಎಂದು ಭಾರತೀಯರು ಒಂದಾಗಿ ಪ್ರಾರ್ಥಿಸುತ್ತಿದ್ದಾರೆ. ಆಪರೇಷನ್ ಗಂಗಾ ಯಾವ ಕಾರಣಕ್ಕೂ ವಿದ್ಯಾರ್ಥಿಗಳ ರಕ್ತದಿಂದ ಮಲಿನವಾಗದಿರಲಿ.

 ಭಾರತಕ್ಕೆ ಬಂದ ಬಳಿಕ ಅವರಿಗಾದ ಅನ್ಯಾಯಕ್ಕೆ ಸರಕಾರ ಯಾವ ರೀತಿಯ ಪರಿಹಾರವನ್ನು ನೀಡಲಿದೆ ಎನ್ನುವುದು ನಮ್ಮ ಮುಖ್ಯ ಪ್ರಶ್ನೆಯಾಗಬೇಕು. ಉಕ್ರೇನ್‌ಗೆ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೋಗಿದ್ದ ವಿದ್ಯಾರ್ಥಿಗಳು ನಿಜಕ್ಕೂ ಶ್ರೀಮಂತವರ್ಗದವರೇ ಆಗಿದ್ದರೆ, ಇಲ್ಲಿ ಪೇಮೆಂಟ್ ಸೀಟ್‌ಗಳನ್ನು ಪಡೆದು ಕಲಿಕೆ ಮುಂದುವರಿಸುತ್ತಿದ್ದರು. ಅದು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ, ಕಡಿಮೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಬಹುದು ಎನ್ನುವ ಒಂದೇ ಕಾರಣಕ್ಕಾಗಿ ಸಾಲಸೋಲ ಮಾಡಿ ಅವರು ಉಕ್ರೇನ್‌ಗೆ ತೆರಳಿದ್ದಾರೆ. ಇದೀಗ ಲಕ್ಷಾಂತರ ರೂಪಾಯಿ ವ್ಯರ್ಥವಾಗಿದೆ. ಮತ್ತೆ ಅಲ್ಲಿಗೆ ವಾಪಸಾಗಿ ಶಿಕ್ಷಣವನ್ನು ಮುಂದುವರಿಸುವ ಯಾವ ಸಾಧ್ಯತೆಗಳೂ ಅವರ ಮುಂದಿಲ್ಲ. ಎಲ್ಲವನ್ನು ಶುರುವಿನಿಂದಲೇ ಆರಂಭಿಸಬೇಕು. ಸಾಲಸೋಲ ಮಾಡಿದವರೆಲ್ಲ ಆ ಸಾಲವನ್ನು ಹೇಗೆ ಪಾವತಿ ಮಾಡಬೇಕು? ವಿದ್ಯಾರ್ಥಿಗಳಿಗೆ ಆಗಿರುವ ಆಘಾತ, ಆರ್ಥಿಕ ನಷ್ಟ, ಮಾನಸಿಕ ದೌರ್ಜನ್ಯಗಳ ಮೂಲವೇ ಸರಕಾರದ ನಿರ್ಧಾರಗಳು. ಕನಿಷ್ಠ ರಾಜ್ಯ ಸರಕಾರ, ಕರ್ನಾಟಕದ ವಿದ್ಯಾರ್ಥಿಗಳ ಮೇಲೆಯಾದರೂ ಕಾಳಜಿ ವಹಿಸಿ ಅವರ ನೆರವಿಗೆ ಮುಂದಾಗಬೇಕು. ನೀಟ್‌ನ ಬಲೆಯಿಂದ ನಮ್ಮ ವಿದ್ಯಾರ್ಥಿಗಳನ್ನು ಪಾರು ಮಾಡಲು ಇದು ಸದವಕಾಶ. ಹಾಗೆಯೇ ಉಕ್ರೇನ್‌ನಿಂದ ಮರಳಿದ ಎಲ್ಲ ವಿದ್ಯಾರ್ಥಿಗಳಿಗೂ ಪರಿಹಾರವಾಗಿ ಭಾರತದಲ್ಲೇ ಕಲಿಯುವ ಅವಕಾಶವನ್ನು ‘ವಿಶೇಷ ಪ್ರಕರಣವೆಂದು’ ಭಾವಿಸಿ ನೀಡಬೇಕು. ಹಾಗೆಯೇ ಅವರಿಗಾದ ಆರ್ಥಿಕ ನಷ್ಟವನ್ನು ಸರಕಾರವೇ ಭರಿಸಬೇಕು. ಕ್ರಿಮಿನಲ್ ಚಟುವಟಕೆಗಳನ್ನು ನಡೆಸಿ ದುಷ್ಕರ್ಮಿಗಳಿಂದ ಹತ್ಯೇಗೀಡಾದ ಹರ್ಷನಿಗೆ ಸಚಿವರು, ಶಾಸಕರು ಲಕ್ಷಾಂತರ ರೂಪಾಯಿ ಪರಿಹಾರ ನೀಡಬಲ್ಲರಾದರೆ, ನಮ್ಮ ಭವಿಷ್ಯವಾಗಿರುವ, ದೇಶದ ಸಂಪತ್ತಾಗಲಿರುವ ಈ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪರಿಹಾರ ನೀಡಲು ಇರುವ ಅಡ್ಡಿಯಾದರೂ ಏನು?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X