Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಜನಾಂದೋಲನಗಳ ಮಹಾಮೈತ್ರಿ ಇಂದಿನ ಅಗತ್ಯ

ಜನಾಂದೋಲನಗಳ ಮಹಾಮೈತ್ರಿ ಇಂದಿನ ಅಗತ್ಯ

ದೇವನೂರ ಮಹಾದೇವದೇವನೂರ ಮಹಾದೇವ4 March 2022 12:05 AM IST
share

 ಭಾಗ-1

ಹೆಸರೇ ಹೇಳುವಂತೆ ಜನಾಂದೋಲನಗಳ ಮಹಾಮೈತ್ರಿಯು ಸಂಘಟನೆಯಲ್ಲ. ಬದಲಾಗಿ ಜನಪರ ಹೋರಾಟದ ಸಂಘಟನೆಗಳ ಒಂದು ಒಕ್ಕೂಟ. ಜನ ಸಮುದಾಯದ ದುಃಖ ದುಮ್ಮಾನಗಳಿಗೆ ಸ್ಪಂದಿಸುವ ಒಂದು ವೇದಿಕೆ. ಪ್ರೀತಿ, ಸಹನೆ, ಸಹಬಾಳ್ವೆ, ಸಮಾನತೆ, ನ್ಯಾಯಕ್ಕಾಗಿ ತುಡಿಯುವ ಯಾರೇ ಜನಾಂದೋಲನ ಮಹಾಮೈತ್ರಿಯಲ್ಲಿ ಸಹಭಾಗಿಗಳಾಗಬಹುದು. ನಿಮ್ಮ ಸಮಸ್ಯೆಗೆ ಬೇರೆಯವರೂ ಬೇರೆಯವರ ಸಮಸ್ಯೆಗೆ ನೀವೂ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಇದು. ಜೊತೆಗೂಡಿ ನಡೆಯುವ ನಡೆ ಇದು.

ಈಗಾಗಲೇ ಜನಾಂದೋಲನ ಮಹಾಮೈತ್ರಿಯಲ್ಲಿ ರೈತ ಸಂಘಟನೆಗಳು, ಜನ ಸಂಗ್ರಾಮ ಪರಿಷತ್, ದಲಿತ ಸಂಘಟನೆಗಳು, ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವ ಸಂಘಟನೆ (AIDYO) ಘಟಕಗಳು, ಗ್ರಾಮೀಣ ಕೂಲಿಕಾರರ ಸಂಘ, ಕರ್ನಾಟಕ ಜನಶಕ್ತಿ, ಗ್ರಾಮ ಸ್ವರಾಜ್ ಅಭಿಯಾನ, ಮಾನವ ಬಂಧುತ್ವ ವೇದಿಕೆ, ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ, ನೌಕರ ಸಂಘಗಳು, ಕಾರ್ಮಿಕ ಸಂಘಟನೆಗಳು, ಮಹಿಳಾ ಸಂಘಟನೆಗಳು ಹಾಗೂ ಪ್ರಗತಿಪರ ಹೋರಾಟಗಾರರು ಜೊತೆಗೂಡಿದ್ದಾರೆ. ಬನ್ನಿ, ನೀವೂ ಜೊತೆಗೂಡಿ, ಒಟ್ಟಾಗಿ ಹೆಜ್ಜೆ ಹಾಕೋಣ. ‘ಕಡ್ಡಿಯನ್ನು ಮುರಿಯಬಹುದು; ಕಟ್ಟನ್ನಲ್ಲ’ ಎಂಬ ಗಾದೆಯಂತೆ ಒಗ್ಗಟ್ಟು ಇಂದು ಎಂದಿಗಿಂತ ಹೆಚ್ಚು ಅಗತ್ಯವಿದೆ.

ನಿಜ, ಒಗ್ಗಟ್ಟು ಇಂದು ಎಂದಿಗಿಂತ ಹೆಚ್ಚು ಅಗತ್ಯವಿದೆ. ತುಂಬಾನೆ ಅಗತ್ಯವಿದೆ. ಯಾಕೆಂದರೆ, ಇಂದು ದುಡಿದು ತಿನ್ನುವವರ ಬದುಕು ದಿಕ್ಕೆಟ್ಟು ಹೋಗಿದೆ. ಯಾಕೆಂದರೆ, ದೇಶದಲ್ಲಿ ನಿರುದ್ಯೋಗದ ಪ್ರಮಾಣ ರಣಭೀಕರವಾಗಿದೆ. ಕೇವಲ ಒಂದು ವರ್ಷದಲ್ಲೇ 2021ರಲ್ಲಿ ಮೂರು ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ಸುದ್ದಿ ಇದೆ. ಇಂತಹ ಭೀಕರ ನಿರುದ್ಯೋಗವು ಕಳೆದ 50 ವರ್ಷಗಳಿಂದಂತೂ ಇರಲಿಲ್ಲ. ಯಾಕೆ ಹೀಗೆ? ಇದಕ್ಕೆಲ್ಲ ಆಳುವ ಸರಕಾರದ ನೀತಿ ನಿಯಮ ಆದ್ಯತೆಗಳೇ ಕಾರಣ ಎನ್ನಲಾಗಿದೆ. ಯಾಕೆಂದರೆ ಹೆಚ್ಚು ಉದ್ಯೋಗ ಸೃಷ್ಟಿಸುತ್ತಿದ್ದ ಗುಡಿ ಕೈಗಾರಿಕೆಗಳು, ಸಣ್ಣ ಮಧ್ಯಮ ಕೈಗಾರಿಕೆಗಳು ಸರಕಾರದ ಉತ್ತೇಜನವಿಲ್ಲದೆ ಮುಚ್ಚಿ ಹೋಗುತ್ತಿವೆ. ಅಂದಂದಿಗೆ ದುಡಿದು ತಿನ್ನುವ ಜನರ ಬದುಕಿಗೆ ಆಸರೆಯಾದ ನರೇಗಾ ಯೋಜನೆಗೆ ಹಣ ಹಂಚಿಕೆಯನ್ನು ಈ ಸಲದ ಬಜೆಟ್‌ನಲ್ಲಿ 98 ಸಾವಿರ ಕೋಟಿ ರೂಪಾಯಿಗಳಿಂದ 73 ಸಾವಿರ ಕೋಟಿ ರೂಪಾಯಿಗಳಿಗೆ ಇಳಿಸಲಾಗಿದೆ. ಸರಕಾರವು ದುಡಿದು ತಿನ್ನುವ ಜನರ ಹೊಟ್ಟೆಗೂ ಮಣ್ಣು ಹಾಕಿದೆ. ಬದಲಾಗಿ ಇಂದು ಆಳ್ವಿಕೆ ನಡೆಸುತ್ತಿರುವ ಸರಕಾರವು ಶತಕೋಟಿ ಸಂಪತ್ತಿನವರ ಸೇವೆಗೆ ಟೊಂಕಕಟ್ಟಿ ನಿಂತಿದೆ. ಸರಕಾರ ಇರುವುದು ಜನರಿಗಾಗಿ ಅಲ್ಲ; ಬದಲಾಗಿ ಅಂಬಾನಿ, ಅದಾನಿ ಮುಂತಾದ ಬಂಡವಾಳಶಾಹಿ ಶತಕೋಟಿ ಸಂಪತ್ತು ಉಳ್ಳವರಿಗಾಗಿ ಎಂಬಂತಾಗಿ ಬಿಟ್ಟಿದೆ. ಇಲ್ಲದಿದ್ದರೆ, ಕೊರೋನ ದುರಂತ ಕಾಲದಲ್ಲಿ ಭಾರತದಲ್ಲಿ ಬಹುಜನರು ಜೀವ ಉಳಿಸಿಕೊಳ್ಳಲು ಆದಾಯವಿಲ್ಲದೆ ಒದ್ದಾಡುತ್ತ ಜನರ ಬದುಕು ಹೈರಾಣವಾಗಿ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕಾರ್ಪೊರೇಟ್ ಬಂಡವಾಳಶಾಹಿ ಕಂಪೆನಿಗಳ ಆದಾಯ ಹೆಚ್ಚಾಗಲು ಹೇಗೆ ಸಾಧ್ಯ? ಆದರೆ ಸಾಧ್ಯವಾಗಿದೆ.

ಯಾಕೆಂದರೆ, ಕೇಂದ್ರ ಸರಕಾರವು ಸಾರ್ವಜನಿಕ ಸಂಪತ್ತುಗಳಲ್ಲಿ ನವರತ್ನ ಕಂಪೆನಿಗಳೆನಿಸಿಕೊಂಡ ಬಿ.ಇ.ಎಂ.ಎಲ್., ಬಿ.ಇ.ಎಲ್, ಬಿ.ಎಚ್.ಇ.ಎಲ್., ಜೀವ ವಿಮಾ (ಎಲ್ಲೈಸಿ) ಮುಂತಾದ ಪೂರ್ವಿಕರು ಮಾಡಿಟ್ಟಿದ್ದ, ಸಾರ್ವಜನಿಕ ಸಂಪತ್ತನ್ನೂ ಕೂಡ ಕಾರ್ಪೊರೇಟ್ ಕಂಪೆನಿಗಳಿಗೆ ವಹಿಸಿಕೊಡುತ್ತಾ ಅಥವಾ ನಗಣ್ಯ ಬೆಲೆಗೆ ಮಾರುತ್ತ ಭಾರತವನ್ನು ದಿವಾಳಿ ಎಬ್ಬಿಸುತ್ತಿದೆ. ‘‘ಜವರಾಯ ಬಂದಾರೆ ಬರಗೈಲಿ ಬರಲಿಲ್ಲಾ, ಕುಡುಗೋಲು ಕೈಲಿ ಹಿಡಿದು ಬಂದ, ಒಳೊಳ್ಳೆ ಮರವ ಕಡಿಯೂತ ಬಂದಾ’’ ಎಂಬಂತೆ ರೈಲ್ವೆ, ಬಂದರು, ವಿಮಾನ ಯಾನ, ವಿಶಾಖಪಟ್ಟಣಂ ಸ್ಟೀಲ್ ಹೀಗೆ ಪಟ್ಟಿಮಾಡಿಕೊಂಡು ಒಂದೊಂದಾಗಿ ಒಂದೊಂದಾಗಿ ಒಳ್ಳೊಳ್ಳೆ ಸಾರ್ವಜನಿಕ ಸಂಪತ್ತಿನ ಕ್ಷೇತ್ರಗಳನ್ನು ಕಾರ್ಪೊರೇಟ್ ಕಂಪೆನಿಗಳ ವಶಕ್ಕೆ ನೀಡುತ್ತಾ, ಸಾರ್ವಜನಿಕ ಸಂಪತ್ತಿನ ಪ್ರಾಣ ತೆಗೆಯುತ್ತಿದೆ. ಸರಕಾರವು ಕಾರ್ಪೊರೇಟ್ ಕಂಪೆನಿಗಳಿಗೆ ಭೂಮಿ, ಜಲ, ವಿದ್ಯುತ್‌ನಲ್ಲೂ ರಿಯಾಯಿತಿ ನೀಡುತ್ತಲಿದೆ. ಇದಲ್ಲದೆ ಕಾರ್ಪೊರೇಟ್ ಕಂಪೆನಿಗಳಿಗೆ ವಿವೇಚನಾ ರಹಿತವಾಗಿ ಲಕ್ಷಾಂತರ ಕೋಟಿ ರೂ. ಬ್ಯಾಂಕ್ ಸಾಲ ನೀಡಿ, ಅವರು ಹಿಂದಿರುಗಿಸಲಾಗದ ಸಾಲವನ್ನು ಎನ್.ಪಿ.ಎ. (ಚಾಲ್ತಿಯಲ್ಲಿ ಇಲ್ಲದ ಸಂಪತ್ತು) ಎಂದು ಪರಿಗಣಿಸಿ ಬ್ಯಾಂಕ್ ವ್ಯವಹಾರದ ಲೆಕ್ಕಾಚಾರದಿಂದಲೇ ಅದನ್ನು ಪ್ರತ್ಯೇಕವಾಗಿಟ್ಟು ಇದನ್ನು ಮುಂದೊಂದು ದಿನ ‘ವಸೂಲಿಯಾಗಬೇಕಾದ ಸಾಲ’ ಎಂದು ಹೇಳಲಾಗುತ್ತಿದೆ. ಉದಾಹರಣೆಗೆ, ಪ್ರಧಾನಿ ಮೋದಿಯವರು ತಮ್ಮ ಆಳ್ವಿಕೆ ಕಾಲಾವಧಿಯಲ್ಲೇ ಶತಕೋಟಿ ಸಂಪತ್ತಿನ ಕಂಪೆನಿಗಳಿಗೆ ರೂ. 10 ಲಕ್ಷ ಕೋಟಿಗೂ ಹೆಚ್ಚು Write-off ಮಾಡಿ ದಾಖಲೆ ನಿರ್ಮಿಸಿದ್ದಾರೆ. ಮುಂದೆ ವಸೂಲಿಯಾಗಬೇಕೆನ್ನುವ ಈ ಸಾಲ ಯಾವಾಗ ಹಿಂದಿರುಗಿ ಬರುತ್ತದೆ? ಆ ದೇವರಿಗೇ ಗೊತ್ತು!

ಈ ಮೇಲ್ಕಂಡ ವ್ಯವಹಾರದಲ್ಲಿ Transperency(ಪಾರದರ್ಶಕತೆ) ಮತ್ತು Accountability(ಲೆಕ್ಕದ ಹೊಣೆಗಾರಿಕೆ) ಎರಡೂ ಇಲ್ಲ. ಜನ ಸಾಮಾನ್ಯರ ಠೇವಣಿ ಇಟ್ಟ ಹಣದಲ್ಲಿ ನಡೆಯುವ ಈ ಸಾಲದ ವ್ಯವಹಾರವನ್ನು ಜನರಿಂದ ಮುಚ್ಚಿಡಲಾಗಿದೆ. ಕಾರ್ಪೊರೇಟ್ ಕಂಪೆನಿಗಳು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಈ ದೇಶದ ಚುಕ್ಕಾಣಿ ಹಿಡಿದವರು ಕೂಡಿಕೊಂಡು ಇದನ್ನೊಂದು ಭೂಗತ ಲೋಕದ ಚಟುವಟಿಕೆಯಂತೆ ನಡೆಸುತ್ತಿದ್ದಾರೆ. ಹೀಗೆಲ್ಲಾ ಗ್ಟಜಿಠಿಛಿಟ್ಛ್ಛ ಮಾಡಿದ ಸಾಲದ ಹಣದಲ್ಲಿ ಕಾಲುಭಾಗವಾದರೂ ಕಂಪೆನಿಗಳಿಂದ ವಸೂಲಿಯಾದ ಉದಾಹರಣೆ ಇಲ್ಲ. ಕಾನೂನಿನ ಅಡಿಯಲ್ಲೇ ಎಲ್ಲವೂ ಗೋಲ್‌ಮಾಲ್ ಆಗುತ್ತಿದೆ. ಇದರ ರಹಸ್ಯ ಭೇದಿಸಬೇಕಾಗಿದೆ. ಕಾರ್ಪೊರೇಟ್ ಕಂಪೆನಿಗಳು ವಿದೇಶಗಳಲ್ಲಿರುವ ತಮ್ಮದೇ ಬೇನಾಮಿ ಕಂಪೆನಿಗಳಿಗೆ ಈ ಹಣವನ್ನು ವರ್ಗಾಯಿಸಿಕೊಂಡು ಜನರನ್ನು, ದೇಶವನ್ನು ವಂಚಿಸುತ್ತಿವೆ. ಇದಲ್ಲವೆ ದೇಶದ್ರೋಹ? ಸಾಮಾನ್ಯ ಜನತೆಗೂ ಈ ಭೂಗತ ಲೋಕದ ಲೆಕ್ಕಾಚಾರ ತಿಳಿಯಬೇಕಾಗಿದೆ. ತಿಳಿಯಬೇಕಾದ ಹಕ್ಕೂ ಕೂಡ ಇದೆ. ಹಾಗೆ ನೋಡಿ, ಶತಕೋಟಿ ಬಂಡವಾಳಶಾಹಿ ಸಂಪತ್ತು ಉಳ್ಳವರಿಗೆ ಕೇವಲ ಶೇ.2ರಷ್ಟು ಹೆಚ್ಚು ತೆರಿಗೆ ಹಾಕಿದರೂ ಅದರಲ್ಲಿ ಭಾರತದ ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ ವ್ಯವಸ್ಥೆ ಸುಧಾರಿಸಬಹುದೆಂದು ತಿಳಿದವರು ಅಭಿಪ್ರಾಯ ಪಡುತ್ತಾರೆ. ಆದರೆ ಈ ಸಲದ ಬಜೆಟ್‌ನಲ್ಲಿ ಕಾರ್ಪೊರೇಟ್ ಸರ್ಚ್ ಚಾರ್ಜ್ ತೆರಿಗೆಯನ್ನು ಶೇ.12ರಿಂದ ಶೇ. 7ಕ್ಕೆ ಇಳಿಸಲಾಗಿದೆ. ಹೀಗೆಲ್ಲಾ ಜರುಗುತ್ತಿರುವಾಗ ಬಂಡವಾಳಶಾಹಿ ಸಂಪತ್ತು ಹೆಚ್ಚದೆ ಇನ್ನೇನು ಆಗುತ್ತದೆ? ಇಂದು ಹುಚ್ಚರ ಸಂತೆಯಲ್ಲಿ ಉಂಡವನೇ ಜಾಣ ಎಂಬಂತಾಗಿದೆ.

ಈ ವಿನಾಶಕಾರಿ ಸರಕಾರವು ವಿವೇಚನೆ ಇಲ್ಲದೆ ನೋಟ್ ಬ್ಯಾನ್ ಅವಾಂತರ ಮಾಡಿ ಆಮೇಲೆ ಅವಿವೇಕದ ಜಿಎಸ್‌ಟಿ ತಂದು ಜನಜೀವನವನ್ನು ದಿಕ್ಕೆಡಿಸಿ ರಾಜ್ಯ ಸರಕಾರಗಳನ್ನೂ ದೈನೇಸಿ ಮಾಡಿದೆ. ಭಾರತದಲ್ಲಿ ಒಕ್ಕೂಟ ವ್ಯವಸ್ಥೆ ಕಿತ್ತುಕೊಂಡು ಹೋಗುತ್ತಿದೆ. ಇಷ್ಟೆಲ್ಲಾ ಆಗುತ್ತ ಹೀಗೆಲ್ಲಾ ಆಗುತ್ತ ಭಾರತ ಎತ್ತ ಸಾಗುತ್ತಿದೆ? ಭಾರತದ ಮಧ್ಯಮ ವರ್ಗವು ಬಡವರಾಗುತ್ತಿದ್ದಾರೆ. ಇನ್ನು ಬಡವರು? ಬಡವರು ಹಸಿವಿನ ದವಡೆಗೆ ನೂಕಲ್ಪಡುತ್ತಿದ್ದಾರೆ. ಭಾರತಮಾತೆಯ ಹೊಟ್ಟೆಗೆ ಹಿಟ್ಟಿಲ್ಲ; ಜುಟ್ಟಿಗೆ ಮಲ್ಲಿಗೆ ಹೂ- ಇದು ಇಂದಿನ ಭಾರತದ ಧಾರುಣ ಚಿತ್ರ. ಹೇಳಿ, ಈಗ ನಾವು ಏನು ಮಾಡಬೇಕು? ಮೊದಲು ಎಲ್ಲರೂ ಜೊತೆಯಾಗಬೇಕು. ಕೂಡಿ ಎಲ್ಲರೂ ಗಟ್ಟಿಧ್ವನಿಯಲ್ಲಿ ಒಟ್ಟಾಗಿ ಹೇಳಬೇಕು- ‘‘ಇಷ್ಟು ಸಾಕು, ಇದಾಗಬಾರದು, ಇದಾಗಬಾರದು.’’

share
ದೇವನೂರ ಮಹಾದೇವ
ದೇವನೂರ ಮಹಾದೇವ
Next Story
X