ಮಾ.7ರಿಂದ ಬಿಜೆಎಮ್ ಇರ್ವತ್ತೂರು ಪದವುನಲ್ಲಿ ಸ್ವಲಾತ್ ವಾರ್ಷಿಕ, ಸನ್ಮಾನ ಕಾರ್ಯಕ್ರಮ

ಇರ್ವತ್ತೂರು: ಬಂಟ್ವಾಳ ತಾಲೂಕಿನ ಇರ್ವತ್ತೂರು ಪದವಿನ ಬದ್ರಿಯಾ ಜುಮ್ಮಾ ಮಸೀದಿ ಜಮಾಅತ್ ಕಮೀಟಿ ಮತ್ತು ಬದ್ರಿಯಾ ಯಂಗ್ ಮೆನ್ಸ್ ಅಸೋಶಿಯೇಶನ್ ಇದರ ಜಂಟಿ ಆಶ್ರಯದಲ್ಲಿ ಪ್ರತಿ ವರ್ಷದಂತೆ ನಡೆಯುವ ಸ್ವಲಾತ್ ವಾರ್ಷಿಕ ಪ್ರಯುಕ್ತ ಮರ್ಯೂಂ ತಾಜುಲ್ ಉಲಮಾ ಮತ್ತು ಶಂಶುಲ್ ಉಲಮಾ ವೇದಿಕೆಯಲ್ಲಿ ಮಾರ್ಚ್ 7ರಂದು ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಸಾಧಕರಾದ ಡಾ.ರಾಮಕೃಷ್ಣ ಎಸ್, ಡಾ.ನಿಯಾಝ್ ಪಣಕಜೆ, ಶಿಕ್ಷಕರಾದ ಸುನಿಲ್ ಸಿಕ್ವೇರಾ, ಮೇಸ್ಕಾಂ ಪವರ್ ಮ್ಯಾನ್ ಗಳಾದ ಸಂತೋಷ್ ಬಿರಾದರ್ ಮತ್ತು ವಿಜಯ ಕುಮಾರ್ ಮತ್ತು ಅಂಗವೈಕಲ್ಯವನ್ನು ಮೆಟ್ಟಿ ನಿಂತ ಸಾಧಕ ಅಹ್ಮದ್ ಕಬೀರ್ ಕಂಚಿನೋಡಿ ಇವರುಗಳನ್ನು ಸನ್ಮಾನಿಸಲಿದ್ದು ಮತ್ತು ರಫೀಕ್ ಮಾಸ್ಟರ್, ಪ್ರೊ. ಡಾ.ಮುಸ್ತಫಾ ಬಸ್ತಿಕೋಡಿ ಉಪನ್ಯಾಸ ನೀಡಲಿದ್ದಾರೆ.
ಮಾರ್ಚ್ 8ರಂದು ಹನೀಫ್ ನಿಝಾಮಿ ಮೊಗ್ರಾಲ್, ಕಾಸರಗೋಡು ಇವರಿಂದ ಮತ ಪ್ರಭಾಷಣ ನಡೆಯಲಿದ್ದು, ಮಾರ್ಚ್ 9 ರಂದು ಅನ್ವರ್ ಹಫ್ವಾ ತಂಡದಿಂದ ಖವಾಲಿ ಮತ್ತು ಸಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಲ್ ರವರ ನೇತೃತ್ವದಲ್ಲಿ, ಹಝ್ರತ್ ಡಾ.ಮುಹಮ್ಮದ್ ಫಾಝಿಲ್ ರಿಝ್ವಿ ಕಾವಳಕಟ್ಟೆ ಇವರ ದುಆ ದೂಂದಿಗೆ , ಇರ್ಶಾದ್ ದಾರಿಮಿ ಅಲ್ ಜಝರಿ ಮಿತ್ತಬೈಲ್ ಇವರು ಉದ್ಘಾಟಿಸಿ, ಬಿಜೆಎಂ ಇರ್ವತ್ತೂರು ಇದರ ಖತೀಬ್ ಉಮರ್ ಮದನಿ ಅಧ್ಯಕ್ಷತೆಯಲ್ಲಿ ವಾರ್ಷಿಕ ಸ್ವಲಾತ್ ಕಾರ್ಯಕ್ರಮ ನಡೆಯಲಿದೆ ಎಂದು ಬದ್ರಿಯಾ ಜುಮ್ಮಾ ಮಸೀದಿ ಜಮಾಅತ್ ಕಮಿಟಿಯ ಎಸ್.ಪಿ.ರಫೀಕ್ ಮತ್ತು ಪ್ರಧಾನ ಕಾರ್ಯದರ್ಶಿ ಮುನೀರ್ ಇರ್ವತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.