ಉರೂಸ್ ಕಾರ್ಯಕ್ರಮ; ಉಳ್ಳಾಲ, ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಹೊರೆ ಕಾಣಿಕೆ

ಉಳ್ಳಾಲ : ಉಳ್ಳಾಲ ದರ್ಗಾ ಉರೂಸ್ ಕಾರ್ಯಕ್ರಮಕ್ಕೆ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವರವರ ನೇತೃತ್ವದಲ್ಲಿ ಅಕ್ಕಿ-ತುಪ್ಪ ಸಹಿತ ಹಲವು ಆಹಾರ ಸಾಮಗ್ರಿಗಳನ್ನೊಳಗೊಂಡ ಬೃಹತ್ ಮಟ್ಟದ ಹೊರೆ ಕಾಣಿಕೆ ಸಂದಲನ್ನು ಉಳ್ಳಾಲ ದರ್ಗಾ ಕ್ಕೆ ಸಮರ್ಪಿಸಲಾಯಿತು.
ಉಳ್ಳಾಲದ ತಾಜ್ ಮಹಲ್ ಬಳಿಯಿಂದ ಹೊರಟ ಸಂದಲ್ ಮೆರವಣಿಗೆ ಉಳ್ಳಾಲದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಉಳ್ಳಾಲ ದರ್ಗಾ ಸಮೀಪಿಸಿತು.
ದರ್ಗಾ ಮುಖ್ಯ ದ್ವಾರದಲ್ಲಿ ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಉಪಾಧ್ಯಕ್ಷ ಯು.ಕೆ.ಮೋನು, ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್ ಕಾಂಗ್ರೆಸ್ ನೇತೃತ್ವದ ಸಂದಲ್ ಮೆರವಣಿಗೆಯಲ್ಲಿದ್ದ ಪ್ರಮುಖ ನಾಯಕರನ್ನು ಬರಮಾಡಿ ಸ್ವಾಗತಿಸಿದರು. ಆ ಬಳಿಕ ನಡೆದ ಸಾರ್ವಜನಿಕ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸದಾಶಿವ ಉಳ್ಳಾಲ್ ಮತ್ತು ಪ್ರಶಾಂತ್ ಕಾಜವರನ್ನು ಉಳ್ಳಾಲ ದರ್ಗಾ ವತಿಯಿಂದ ಸನ್ಮಾಸಲಾಯಿತು.
ಸನ್ಮಾನಕ್ಕುತ್ತರವಾಗಿ ಮಾತನಾಡಿದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ರುಗಳು ಉಳ್ಳಾಲ ಉರೂಸ್ ಬಗ್ಗೆ ಹಾಗೂ ಅಬ್ದುಲ್ ರಶೀದ್ ಹಾಜಿ ನೇತೃತ್ವದ ಆಡಳಿತ ಸಮಿತಿಯನ್ನು ಶ್ಲಾಘಿಸಿ ಮಾತನಾಡಿದರು.
ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಚಂದ್ರಹಾಸ ಕರ್ಕೆರ, ಮಹ್ಮದ್ ಮೋನು ಮಲಾರ್, ಎನ್.ಎಸ್ .ಕರೀಂ, ಜಲೀಲ್ ಮೋಂಟುಗೊಳಿ, ಸೌಕತ್ ಅಲಿ ಕೊಣಾಜೆ, ಅಚ್ಯುತ ಗಟ್ಟಿ, ಉಳ್ಳಾಲ ನಗರ ಸಭೆ ಅಧ್ಯಕ್ಷೆ.ಚಿತ್ರ ಕಲಾ, ಮೈನಾರಿಟಿ ಕಾಂಗ್ರೆಸ್ ಅಧ್ಯಕ್ಷ ಅಲ್ವಿನ್ ಡಿಸೋಜ, ಇಸ್ಮಾಯಿಲ್ ಮಂಜನಾಡಿ, ನಝರ್ ಪಟ್ಟೋರಿ, ಸಪ್ನಾ ಹರೀಶ್, ವೀಣಾ ಡಿಸೋಜಾ, ಫಾರೂಕ್ ಫರಂಗಿಪೇಟೆ, ದೀಪಕ್ ಪಿಲಾರ್, ಮುಸ್ತಫ ಅಬ್ದುಲ್ಲ, ಚಂದ್ರಿಕಾ ರೈ, ಜಬ್ಬಾರ್ ಬೋಳಿಯಾರ್, ಸತ್ತಾರ್ ಬೆಳ್ಮ, ಝಕರಿಯಾ ಮಲಾರ್, ನಾಶೀರ್,ರೆಹಮಾನ್ ಕೋಡಿಜಾಲ್, ಟಿ.ಎಸ್ ಅಬ್ದುಲ್ಲ, ಟಿಎಸ್ ಅಬೂಬಕ್ಕರ್, ಪುದು ಪಂಚಾಯತ್ ಅಧ್ಯಕ್ಷ ರಮ್ಲಾನ್, ಇಂತಿಯಾಝ್ ಫರಂಗಿಪೇಟೆ, ಕೌನ್ಸಿಲರ್ ಗಳಾದ ಬಾಝಿಲ್ ಡಿಸೋಜಾ, ಅಶ್ರಫ್ ಇಬ್ರಾಹಿಂ, ರವೃಫ್ ಬೆಳ್ಮ, ಬಾವ ಕೆಸಿರೋಡ್ ಉಪಸ್ಥಿತರಿದ್ದರು.
ಫಾರೂಕ್ ಉಳ್ಳಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಯ್ಯೂಬ್ ಮಂಚಿಲ ವಂದಿಸಿದರು.






.jpeg)




