ಸುಳ್ಯದ ಗಡಿ ಗ್ರಾಮಗಳಲ್ಲಿ ತೀವ್ರಗೊಂಡ ಕಾಡಾನೆ ಹಾವಳಿ

ಸುಳ್ಯ: ತಾಲೂಕಿನ ಗಡಿ ಗ್ರಾಮದಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿದ್ದು ಕಾಡಾನೆಗಳು ರಸ್ತೆಯಲ್ಲಿಯೇ ಪ್ರತ್ಯಕ್ಷವಾಗಿ ಭೀತಿ ಹುಟ್ಟಿಸುತಿವೆ. ಮಂಡೆಕೋಲು, ಅಜ್ಜಾವರ ಗ್ರಾಮದಲ್ಲಿ ಆನೆ ಹಾವಳಿ ತೀವ್ರಗೊಂಡಿದೆ.
ಅಜ್ಜಾವರ ಗ್ರಾಮದ ಅಡ್ಪಂಗಾಯ ಭಾಗದಲ್ಲಿ ಗುರುವಾರ ರಾತ್ರಿ ಆನೆಗಳ ಹಿಂಡು ಕೃಷಿ ಹಾನಿ ಮಾಡಿದೆ. ತೆಂಗು, ಕಂಗು, ಬಾಳೆ ಸೇರಿದಂತೆ ಕೃಷಿ ಹಾನಿ ನಡೆಸಿದೆ.
ಕತ್ತಲಾಗುತ್ತಿದ್ದಂತೆ ಜನ ವಸತಿ ಪ್ರದೇಶದ ಸಮೀಪಕ್ಕೆ ಬಂದ ಆನೆಗಳ ಹಿಂಡು ಭೀತಿ ಹುಟ್ಟಿಸಿದೆ. ಜೊತೆಗೆ ತೋಟಗಳಿಗೆ ನುಗ್ಗಿ ಕೃಷಿಯನ್ನು ನಾಶ ಮಾಡಿದೆ. ಇನ್ನೊಂದೆಡೆ ದೇಲಂಪಾಡಿ ಭಾಗದಲ್ಲಿ ಕೃಷಿ ಹಾನಿ ಮಾಡುತ್ತಿದ್ದ ಆನೆಯೊಂದು ನಡು ರಸ್ತೆಯಲ್ಲಿಯೇ ಪ್ರತ್ಯಕ್ಷವಾಗಿದೆ.
Next Story





