ರಾಜ್ಯ ಬಜೆಟ್ 2022: ಕಾಶಿ ಯಾತ್ರಾರ್ಥಿಗಳಿಗೆ ತಲಾ 5,000 ರೂ. ಸಹಾಯಧನ
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ , ತಿರುಪತಿ, ಮಂತ್ರಾಲಯಕ್ಕೆ ಪ್ಯಾಕೇಜ್ ಟ್ರಿಪ್

ಬೆಂಗಳೂರು: 30 ಸಾವಿರ ಕಾಶಿ ಯಾತ್ರಾರ್ಥಿಗಳಿಗೆ ತಲಾ 5000 ರೂ ಸಹಾಯಧನ . ಪುಣ್ಯ ಕ್ಷೇತ್ರಗಳಿಗೆ ಕೆಎಸ್ ಟಿಡಿಸಿ ವತಿಯಿಂದ ಪ್ರವಾಸಕ್ಕೆ ವ್ಯವಸ್ಥೆ ಮಾಡಲಾಗುವುದು. ಶ್ರೀ ಶೈಲದಲ್ಲಿ 85 ಕೋಟಿ ರೂ. ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಿಸಲಾಗುವುದು ರಾಜ್ಯ ಬಜೆಟ್ ನಲ್ಲಿ ಘೋಷಿಲಾಗಿದೆ.
ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ , ಕೊಲ್ಲೂರು, ತಿರುಪತಿ, ಮಂತ್ರಾಲಯ, ಮೇಲ್ ಮರವತ್ತೂರು ಇನ್ನಿತರ ಸ್ಥಳಗಳಿಗೆ ಪ್ಯಾಕೇಜ್ ಟ್ರಿಪ್ ಸೇವೆ ಪ್ರಾರಂಭಿಸಲಾಗುವುದು ಎಂದು ಬಜೆಟ್ ನಲ್ಲಿ ಉ್ಲಲೇಖಿಸಲಾಗಿದೆ.
ಬೇಲೂರು, ಹಳೆಬೀಡು, ಸೋಮನಾಥಪುರ ಸೇರಿ ಹೊಯ್ಸಳರ ಸ್ಮಾರಕ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೆ ಕ್ರಮ. ಹಂಪಿ-ಬಾದಾಮಿ, ಐಹೊಳೆ- ಪಟ್ಟದಕಲ್ಲು-ವಿಜಯಪುರ ಪ್ರವಾಸಿ ವೃತ್ತ, ಮೈಸೂರು-ಶ್ರೀರಂಗಪಟ್ಟಣ-ಹಾನ-ಬೇಲೂರು- -ಹಳೆಬೀಡು ಪ್ರವಾಸಿ ವೃತ್ತ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ಬಜೆಟ್ ನಲ್ಲಿ ಘೋಷಿಸಿದ್ದಾರೆ.
Next Story





