ಪದ್ಮರಾಜ ಆರ್. ಉಳ್ಳಾಲ ದರ್ಗಾ ಭೇಟಿ

ಉಳ್ಳಾಲ: ಉಳ್ಳಾಲ ದರ್ಗಾ ಉರೂಸ್ ಪ್ರಯುಕ್ತ ಶುಕ್ರವಾರ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಹಾಗೂ ಗುರು ಬೆಳದಿಂಗಳು ಸೇವಾ ಸಂಸ್ಥೆ ಅಧ್ಯಕ್ಷ ಪದ್ಮರಾಜ ಆರ್. ಭೇಟಿ ನೀಡಿ ಶುಭಹಾರೈಸಿದರು.
ಅವರಿಗೆ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ರಾಜೇಶ್ ಸುವರ್ಣ, ಭವಿತ್ ಬಂಗೇರ, ಫಾರೂಕ್ ಉಳ್ಳಾಲ್, ಅಹ್ಮದ್ ಬಾವ ಕೊಟ್ಟಾರ, ಅಹ್ಮದ್ ಬಾವ ಕೋಡಿ, ಅಯ್ಯೂಬ್ ಮಂಚಿಲ ಉಪಸ್ಥಿತರಿದ್ದರು.
Next Story