ಬಿಬಿಸಿ ಸೇರಿದಂತೆ ಹಲವು ಸುದ್ದಿ ವೆಬ್‌ಸೈಟ್‌ಗಳಿಗೆ ರಷ್ಯಾ ನಿರ್ಬಂಧ: ವರದಿ

ಮಾಸ್ಕೋ: ಫೇಸ್‌ಬುಕ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳನ್ನು, ಬಿಬಿಸಿ ಸೇರಿದಂತೆ ಹಲವು ಸುದ್ದಿ ವೆಬ್‌ಸೈಟ್‌ಗಳನ್ನು ರಷ್ಯಾದಲ್ಲಿ ನಿರ್ಬಂಧಿಸಲಾಗಿದೆ ಎಂದು ಹಲವು ಪತ್ರಕರ್ತರು ಹೇಳಿರುವುದಾಗಿ ವರದಿಯಾಗಿದೆ.
ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್ ಹಾಗೂ ಫೇಸ್‌ಬುಕ್ ಅನ್ನು ರಷ್ಯಾದಲ್ಲಿ ನಿರ್ಬಂಧಿಸಲಾಗಿದೆ ಎಂದು ಫೆ. 26ರಂದು NetBlocks ವರದಿ ಮಾಡಿತ್ತು. ಇದೀಗ, ಶುಕ್ರವಾರ ಬಂದ ವರದಿ ಪ್ರಕಾರ, ಸಾಮಾಜಿಕ ಮಾಧ್ಯಮಗಳಿಗಿದ್ದ ನಿರ್ಬಂಧವನ್ನು ಇನ್ನೂ ಹಲವು ವೆಬ್‌ಸೈಟ್‌ಗಳಿಗೆ ವಿಸ್ತರಿಸಲಾಗಿದೆ ಎಂದು scroll.in ವರದಿ ಮಾಡಿದೆ.
ನ್ಯೂಸ್ ವೆಬ್‌ಸೈಟ್‌ಗಳಾದ BBC, ಜರ್ಮನಿಯ Deutsche Welle ಹಾಗೂ ಲಾಟ್ವಿಯ ಮೂಲದ Meduza ಮೊದಲಾದ ವೆಬ್‌ಸೈಟ್‌ಗಳು ಭಾಗಶ ಹಾಗೂ ಇನ್ನೂ ಕೆಲವೆಡೆ ಸಂಪೂರ್ಣ ನಿರ್ಬಂಧಕ್ಕೆ ಒಳಗಾಗಿದೆ ಎಂದು ವರದಿ ತಿಳಿಸಿದೆ.
ಮಾಸ್ಕೋದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ RIA ಅನ್ನು ಉಲ್ಲೇಖಿಸಿ BBC ವರದಿ ಮಾಡಿದ್ದು, ಬಿಬಿಸಿಯ ಸೇವೆಯನ್ನು ರಷ್ಯಾದಲ್ಲಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದೆ. ಈ ನಡುವೆ, ಜರ್ಮನ್ ಸುದ್ದಿ ವೆಬ್‌ಸೈಟ್ Der Spiegel ನ ಪತ್ರಕರ್ತ, ಟ್ವಿಟರ್, ಫೇಸ್‌ಬುಕ್, ಬಿಬಿಸಿ, ಡಾಯ್ಚ್ ವೆಲ್ಲೆ ಮತ್ತು ಆಪ್ ಸ್ಟೋರ್‌ಗಳನ್ನು ರಷ್ಯಾದಲ್ಲಿ ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಮೇಲೆ ಮಿಲಿಟರಿ ಆಕ್ರಮಣ ನಡೆಸುತ್ತಿದ್ದಂತಲೇ, ಇನ್ನೊಂದೆಡೆ ಉಕ್ರೇನ್‌ನ ಕೈವ್ ಮೇಲೆ ಮಾಸ್ಕೋದ ವ್ಯಾಪಕ ಸೈಬರ್ ದಾಳಿ ನಡೆದಿರುವ ಬಗ್ಗೆ ಹಲವಾರು ವರದಿಗಳಾಗಿವೆ.
ಉಕ್ರೇನ್‌ನ ಪ್ರಮುಖ ಸೇನಾ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಪತ್ರಕರ್ತರನ್ನು ಗುರಿಯಾಗಿಸಿ ರಷ್ಯಾ ಹ್ಯಾಕಿಂಗ್ ಗುಂಪು ಸಾಮಾಜಿಕ ಮಾಧ್ಯಮ ವೆಬ್‌ಸೈಟ್ ಅನ್ನು ಬಳಸಿದೆ ಎಂದು ಫೇಸ್‌ಬುಕ್‌ನ ಮೂಲ ಕಂಪನಿಯಾದ ಮೆಟಾ ಸೋಮವಾರ ಹೇಳಿತ್ತು.
ಅದೇ ವೇಳೆ, ಉಕ್ರೇನ್ ಯುಕೆ ಹಾಗೂ ಐರೋಪ್ಯ ಒಕ್ಕೂಟ ಮತ್ತು ಅಮೇರಿಕಾದಲ್ಲೂ ರಷ್ಯಾ ಮೂಲದ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ವರದಿಯಾಗಿದೆ.
Additionally, various news sites have become partially or entirely unavailable on multiple internet providers in #Russia. The incidents come as the country's state-aligned media outlets are targeted by the international community. pic.twitter.com/2wD9OjBVMm
— NetBlocks (@netblocks) March 4, 2022







