ಡಬಲ್ ಎಂಜಿನ್ ಬಜೆಟ್ ಅಲ್ಲ, ಇದು ಡಬಲ್ ದೋಖಾ ಬಜೆಟ್: ಶಾಸಕ ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಕಲಬುರಗಿ: ಸಿಎಂ ಬಸವರಾಜ್ ಬೊಮ್ಮಾಯಿ ಮಂಡಿಸಿದ ಬಜೆಟ್ ನ್ನು ಡಬಲ್ ಎಂಜಿನ್ ಬಜೆಟ್ ಅಲ್ಲ ಇದು ಡಬಲ್ ದೋಖಾ ಬಜೆಟ್ ಎಂದು ಮಾಜಿ ಸಚಿವರಾದ, ಶಾಸಕ , ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು ಬಿಜೆಪಿಯವರು ನವ ಕರ್ನಾಟಕ ನಿರ್ಮಿಸುತ್ತೇವೆ ಎಂದಿದ್ದರು. ಇವರ ಯೋಗ್ಯತೆಗೆ ಕರ್ನಾಟಕದಲ್ಲಿ ಈಗಾಗಲೇ ಇರುವುದನ್ನು ಉಳಿಸಿಕೊಂಡು ಹೋದರೆ ಸಾಕಾಗಿದೆ. ಕರ್ನಾಟಕವನ್ನು ಸಾಲದಲ್ಲಿ ಮುಳುಗಿಸಿದ್ದಾರೆ ಎಂದು ಟೀಕಿಸಿದ್ದಾರೆ.
ಇದೊಂದು ' ಎಕೋನಮಿ ರಿಕವರಿ ಬಜೆಟ್' ಅಲ್ಲ. ಇದು ' ಎಲೆಕ್ಷನ್ ಸರ್ವೈವಲ್ ಬಜೆಟ್ ' ಎಂದು ಲೇವಡಿ ಮಾಡಿರುವ ಶಾಸಕರು. " ರಾಜ್ಯದ ಆರ್ಥಿಕ ಪುನಶ್ಛೇತನಕ್ಕೆ ಸಹಕಾರಿಯಾಗುವಂತಹ, ರೈತರಿಗೆ, ಯುವಕರಿಗೆ, ಮಹಿಳೆಯರಿಗೆ ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಯಾವುದೇ ಅಂಶ ಈ ಬಜೆಟ್ ಹೊಂದಿಲ್ಲ" ಎಂದಿದ್ದಾರೆ.
ಬಿಜೆಪಿಯವರು ನಾವು "ನವ ಕರ್ನಾಟಕ ನಿರ್ಮಿಸುತ್ತೇವೆ" ಎಂದಿದ್ದರು.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) March 4, 2022
ಇವರ ಯೋಗ್ಯತೆಗೆ ಕರ್ನಾಟಕದಲ್ಲಿ ಈಗಾಗಲೇ ಇರುವುದನ್ನು ಉಳಿಸಿಕೊಂಡು ಹೋದರೆ ಸಾಕಾಗಿದೆ. ಕನಾಟಕವನ್ನು ಸಾಲದಲ್ಲಿ ಮುಳಗಿಸಿದ್ದಾರೆ.
ಇದು ಡಬಲ್ ಇಂಜಿನ್ ಬಜೆಟ್ ಅಲ್ಲಾ, ಇದು ಡಬಲ್ ಧೋಕಾ ಬಜೆಟ್ ಆಗಿದೆ! #BogusBudget https://t.co/DhZQYAso3Q







