ಮಧುವನ ಮಸೀದಿ ಪದಾಧಿಕಾರಿಗಳ ಆಯ್ಕೆ

ಕಲಂದರ್ ಬ್ಯಾರಿ
ಬ್ರಹ್ಮಾವರ, ಮಾ.4: ಮಧುವನ ಉಮಾರುಬ್ನುಲ್ ಖತಾಬ್ ಜುಮ್ಮಾ ಮಸೀದಿಯ ವಾರ್ಷಿಕ ಮಹಾಸಭೆಯು ಫೆ.27ರಂದು ಮಾಜಿ ಅಧ್ಯಕ್ಷ ಹಾಜಬ್ಬ ಸಾಹೇಬ್ ಅಧ್ಯಕ್ಷತೆಯಲ್ಲಿ ನಡೆಯಿತು.
2022-23 ಸಾಲಿಗೆ ಅಧ್ಯಕ್ಷರಾಗಿ ಕಲಂದರ್ ಬ್ಯಾರಿ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು. ಉಪಾಧ್ಯಕ್ಷರಾಗಿ ರಹಮತ್ ಮುಬಾರಕ್, ಕಾರ್ಯ ದರ್ಶಿಯಾಗಿ ಇಲ್ಯಾಸ್ ಪಕ್ರುದೀನ್, ಜೊತೆ ಕಾರ್ಯದರ್ಶಿಯಾಗಿ ಎಂ.ಕೆ. ಮುಹಮದ್, ಖಂಜಾಚಿಯಾಗಿ ಅಬ್ದುಲ್ ಅಮೀರ್ ಅವರನ್ನು ಸರ್ವಾನುಮದಿಂದ ಆರಿಸಲಾಯಿತು.
ಜಿ.ಮೊಯ್ದೀನ್, ಮುಹಮದ್ ಎಂ.ಜಿ.ಸಿ., ಮೂಸಾ ಬದ್ರಿಯಾ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು. ಮಾಜಿ ಕಾರ್ಯದರ್ಶಿ ಹಕೀಂ ಸಾಹೇಬ್ ವಂದಿಸಿದರು.
Next Story