Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಧಿಕ್ಕಾರ...ಧಿಕ್ಕಾರ...ಅಸಮಾನತೆಗೆ!

ಧಿಕ್ಕಾರ...ಧಿಕ್ಕಾರ...ಅಸಮಾನತೆಗೆ!

ವಾರ್ತಾಭಾರತಿವಾರ್ತಾಭಾರತಿ5 March 2022 12:05 AM IST
share
ಧಿಕ್ಕಾರ...ಧಿಕ್ಕಾರ...ಅಸಮಾನತೆಗೆ!

ಉಕ್ರೇನ್ ಯುದ್ಧಕಾಲದಲ್ಲಿ, ಭಾರತದ ಶೈಕ್ಷಣಿಕ ಅಸಮಾನತೆಗಳ ಕರಾಳ ರೂಪವೊಂದು ಬಯಲಿಗೆ ಬಂದಿದೆ. ಇಲ್ಲಿ ಶಿಕ್ಷಣ, ಆರೋಗ್ಯ ವ್ಯವಸ್ಥೆ ಹೇಗೆ ಹಣವುಳ್ಳವರ ಸೊತ್ತಾಗಿದೆ ಎನ್ನುವ ಕಠೋರ ವಾಸ್ತವ ಚರ್ಚೆಗೀಡಾಗುತ್ತಿದೆ. ಬಡವರನ್ನು ಪಕ್ಕಕ್ಕಿಡೋಣ. ಮಧ್ಯಮ, ಮೇಲ್ಮಧ್ಯಮ ವರ್ಗವೂ ಇಂದು ವೈದ್ಯಕೀಯ ಶಿಕ್ಷಣವನ್ನು ತಮ್ಮದಾಗಿಸಿಕೊಳ್ಳಬೇಕಾದರೆ ಉಕ್ರೇನ್ ನಂತಹ ಸಣ್ಣ ಸಣ್ಣ ದೇಶಗಳಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಈ ಸ್ಥಿತಿ ಇನ್ನಷ್ಟು ಭೀಕರವಾಗಲಿದೆ. ಇಂದಿನ ದಿನಗಳಲ್ಲಿ ಎರಡು ಭಯಾನಕ ವಾಸ್ತವಗಳು ನಮ್ಮ ಮುಂದಿವೆ. ಮೊದಲನೆಯದಾಗಿ ಭಾರತದ 98 ಮಂದಿ ಅತಿ ಶ್ರೀಮಂತರು, 55.2 ಕೋಟಿ ಭಾರತೀಯರ ಸಂಪತ್ತಿಗೆ ಸರಿಸಮಾನವಾದ ಸಂಪತ್ತನ್ನು ಹೊಂದಿದ್ದಾರೆ. ಎರಡನೆಯದಾಗಿ ನಮ್ಮ ಆಡಳಿತಗಾರರ ಸಿನಿಕತನ. ಕೇಂದ್ರ ಸರಕಾರವು ಭಾರತದ ಈ 98 ಮಂದಿ ಅತಿ ಶ್ರೀಮಂತರ ಮೇಲೆ ಕೇವಲ ಶೇ.1ರಷ್ಟು ಸಾಂಪತ್ತಿಕ ತೆರಿಗೆ (ವೆಲ್ತ್ ಟ್ಯಾಕ್ಸ್)ಯನ್ನು ವಿಧಿಸಿದ್ದರೂ, ಬಿಜೆಪಿ ಸರಕಾರದ ಪ್ರತಿಷ್ಠಿತ ರಾಷ್ಟ್ರೀಯ ಸಾರ್ವಜನಿಕ ಜೀವವಿಮೆ ಯೋಜನೆಯಾದ ‘ಆಯುಷ್ಮಾನ್ ಭಾರತ’ಕ್ಕೆ ಹೆಚ್ಚಿನ ಆರ್ಥಿಕ ನೆರವು ನೀಡಬಹುದಾಗಿತ್ತು. ಭಾರತದ ಜನಸಂಖ್ಯೆಯ ಶೇ.10ರಷ್ಟಿರುವ ಶ್ರೀಮಂತರ ಮೇಲೆ ಶೇ.1ರಷ್ಟು ಸರ್ಚಾರ್ಜ್ (ಹೆಚ್ಚುವರಿ ತೆರಿಗೆ) ವಿಧಿಸಿದಲ್ಲಿ ಶಾಲಾ ಶಿಕ್ಷಣದ ಮೇಲೆ ಅಧಿಕ ಹೂಡಿಕೆ, ಸಾರ್ವತ್ರಿಕ ಆರೋಗ್ಯ ಪಾಲನೆ, ಹೆರಿಗೆ ರಜೆ, ಸಂಬಳಸಹಿತ ರಜೆಗಳು ಹಾಗೂ ಎಲ್ಲಾ ಭಾರತೀಯರಿಗೆ ಪಿಂಚಣಿ ನೀಡಿಕೆಗೆ ಅರ್ಥಿಕ ನೆರವು ದೊರಕಿಸಿ ಕೊಡಲಿದೆ.

ಆದರೆ ಭಾರತ ಸರಕಾರದ ಪ್ರಸಕ್ತ ಮೂಲಭೂತ ಆರ್ಥಿಕ ವ್ಯವಸ್ಥೆಯು ಅಸಮಾನತೆಯನ್ನು ಮಾತ್ರವಲ್ಲದೆ, ಬಡತನವನ್ನು ಕೂಡಾ ಉತ್ತೇಜಿಸುವಂತಿದೆ. ಈಗ ನಮ್ಮ ಮುಂದಿರುವ ಪ್ರಶ್ನೆ, ಸಂಪತ್ತಿನ ಮರುಹಂಚಿಕೆ ಹಾಗೂ ಎಲ್ಲರನ್ನೂ ಒಳಗೊಂಡ ಬೆಳವಣಿಗೆಯನ್ನು ಸಾಧಿಸುವಲ್ಲಿ ಈ ಸರಕಾರವು ದಕ್ಷವಾಗಿದೆ ಎಂಬುದನ್ನು ನಮ್ಮ ಮಹಾನ್ ಭಾರತವು ಯಾಕೆ ಸಾಬೀತುಪಡಿಸುತ್ತಿಲ್ಲ? ಶತಕೋಟ್ಯಧಿಪತಿ ಉದ್ಯಮಿಗಳು ಯಾಕೆ ಸ್ವಲ್ಪ ಹೆಚ್ಚು ತೆರಿಗೆಯನ್ನು ಪಾವತಿಸಿ ಅಸಮಾನತೆ ಹಾಗೂ ಬಡತನದ ವಿರುದ್ಧ ಸರಕಾರ ನಡೆಸುತ್ತಿರುವ ಹೋರಾಟಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಿಲ್ಲ? ಶ್ರೀಮಂತ ಕಾರ್ಪೊರೇಟ್ ಆಸ್ಪತ್ರೆಗಳು, ಡಯಾಗ್ನಸ್ಟಿಕ್ ಉದ್ಯಮ ಸಂಸ್ಥೆಗಳು ತಾವು ಗಳಿಸುವ ಲಾಭದ ಅಲ್ಪಾಂಶವನ್ನು ಬಡವರಿಗಾಗಿ ಆರೋಗ್ಯ ಪಾಲನೆ ವ್ಯವಸ್ಥೆಯನ್ನು ಸೃಷ್ಟಿಸಲು ಸ್ವಯಂಪ್ರೇರಿತವಾಗಿ ಹಂಚಿಕೊಳ್ಳಬಹುದೇ? ಒಂದು ವೇಳೆ ಹಾಗೆ ಆಗದಿದ್ದಲ್ಲಿ ಸರಕಾರವೇ ತಾನಾಗಿ ತೆರಿಗೆ ಹೇರುವ ಮೂಲಕ ಹಾಗೆ ಮಾಡುವಂತೆ ಅವುಗಳನ್ನು ಬಲವಂತ ಪಡಿಸಬಹುದಾಗಿದೆ. ಆದರೆ ಸರಕಾರ ಯಾಕೆ ಹಾಗೆ ಮಾಡುತ್ತಿಲ್ಲ?

 ಕೋವಿಡ್-19 ಸಾಂಕ್ರಾಮಿಕವು ಭಾರತದಲ್ಲಿ ಬಡವಾಗಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ದುರ್ಬಲತೆಯ ಬಗ್ಗೆ ಬೆಳಕು ಚೆಲ್ಲಿದೆ. ಅಸಮಾನತೆಯ ಹೆಚ್ಚಳವು ಕೊರೋನ ವೈರಸ್ ಸಾಂಕ್ರಾಮಿಕಕ್ಕಿಂತಲೂ ಅಧಿಕ ಕೊಲ್ಲುವ ಸಾಮರ್ಥ್ಯವನ್ನು ಹೊಂದಿದೆ, ಭಾರತದಲ್ಲಿ ಕೋವಿಡ್-19 ಬಾಧಿತರಲ್ಲಿ ಹೆಚ್ಚಿನವರು ಸಾವನ್ನಪ್ಪಿರುವುದು ಸೋಂಕಿನ ಕಾರಣದಿಂದಲ್ಲ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳ ಸೌಲಭ್ಯಗಳ ಕೊರತೆಯಿಂದಾಗಿಯೇ ಅವರು ಪ್ರಾಣ ಕಳೆದುಕೊಳ್ಳಬೇಕಾಯಿತು. ಸರಕಾರಕ್ಕೆ ಕೂಡಾ ಕೋವಿಡ್-19ನಿಂದ ಸಂಭವಿಸಿದ ಸಾವುಗಳ ನಿಖರ ಸಂಖ್ಯೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ದತ್ತಾಂಶ ಸಂಗ್ರಹದಲ್ಲಿಯೂ ನಮ್ಮ ದೇಶ ತೀರಾ ಹಿಂದುಳಿದಿದೆ.

ಸಾವಿರಾರು ಮಂದಿ ಸಾವನ್ನಪ್ಪಿದ್ದ ಹಾಗೂ ತಮ್ಮ ಜೀವನೋಪಾಯದ ವೃತ್ತಿಗಳನ್ನು ಕಳೆದುಕೊಂಡಂತಹ ಕೋವಿಡ್-19 ಸಾಂಕ್ರಾಮಿಕದ ವರ್ಷದಲ್ಲಿ ದೇಶದ ಶೇ.84ರಷ್ಟು ಕುಟುಂಬಗಳ ಆದಾಯದಲ್ಲಿ ಕುಸಿತ ಕಂಡುಬಂದಿದೆ. ಆದರೆ ಇದೇ ಅವಧಿಯಲ್ಲಿ ಶತಕೋಟ್ಯಧಿಪತಿಗಳ ಸಂಖ್ಯೆ ಏರಿತು. ದಿವಾಳಿಯಾದ ಆಸ್ಪತ್ರೆಗಳು ಭಾರೀ ಲಾಭಗಳನ್ನು ಸಂಪಾದಿಸಿದವು ಹಾಗೂ ತಮ್ಮ ಸಾಲಗಳನ್ನು ತೀರಿಸಿಬಿಟ್ಟವು. ಡಯಾಗ್ನಾಸ್ಟಿಕ್ ಕೇಂದ್ರಗಳ ಅದೃಷ್ಟವೂ ಖುಲಾಯಿಸಿತ್ತು. ಭಾರತದಲ್ಲಿ ಕೋವಿಡ್-19 ತಪಾಸಣೆಗಾಗಿ ಭಾರತೀಯರು 74 ಸಾವಿರ ಕೋಟಿ ರೂ. ಖರ್ಚು ಮಾಡಿದ್ದಾರೆಂದು ಅಂದಾಜಿಸಲಾಗಿದೆ.

2022ರ ಜನವರಿಯಲ್ಲಿ ಬಿಡುಗಡೆಯಾದ ಒಕ್ಸ್‌ಫಾಮ್ ವರದಿಯ ಪ್ರಕಾರ, 2021ರಲ್ಲಿ ಭಾರತದ ನೂರು ಮಂದಿ ಅತಿ ಶ್ರೀಮಂತರ ಒಟ್ಟು ಸಂಪತ್ತಿನ ಮೊತ್ತವು 57.3 ಲಕ್ಷ ಕೋಟಿ ರೂ.ಗಳ ದಾಖಲೆ ಏರಿಕೆಯನ್ನು ಕಂಡಿತು. 2020 ಮಾರ್ಚ್ ತಿಂಗಳಿನಿಂದ ಕೋವಿಡ್-19 ಸಾಂಕ್ರಾಮಿಕವು 2021ರ ನವೆಂಬರ್ 30ರವರೆಗೆ ದೇಶದಲ್ಲಿ ರುದ್ರತಾಂಡವವಾಡಿತ್ತು. ಆದರೆ ನಮ್ಮ ದೇಶದ ಸೂಪರ್ ಶ್ರೀಮಂತರು ಮಾತ್ರ ಅದೃಷ್ಟಶಾಲಿಗಳಾಗಿದ್ದರು. ಈ ಬಿಲಿಯಾಧೀಶರ ಸಂಪತ್ತು 2020ರಲ್ಲಿ 23.14 ಲಕ್ಷ ಕೋಟಿ ರೂ.ನಿಂದ 53.16 ಲಕ್ಷ ಕೋಟಿ ರೂ.ಗೆ ಏರಿತು. 2020ರಲ್ಲಿ 4.6 ಕೋಟಿ ಮಂದಿ ಕಡುಬಡತನದ ಅಂಚಿಗೆ ಜಾರಿದ್ದಾರೆ. ಅವರು ಆ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಹೊಸತಾಗಿ ಕಡುಬಡತನದ ಅಂಚಿಗೆ ತಳ್ಳಲ್ಪಟ್ಟ ಜನಸಂಖ್ಯೆಯ ಅರ್ಧದಷ್ಟಿದ್ದಾರೆ ಎಂದು ವಿಶ್ವಸಂಸ್ಥೆ ವರದಿ ಅಂದಾಜಿಸಿದೆ.

 ಸರಕಾರವು ಕೈಬೆರಳೆಣಿಕೆಯಷ್ಟಿರುವ ಕಾರ್ಪೊರೇಟ್ ವಲಯದ ಶತಕೋಟ್ಯಧಿಪತಿಗಳನ್ನು ಅಸಮಾಧಾನಗೊಳಿಸಲು ಬಯಸಿಲ್ಲ. ಈ ಕಾರ್ಪೊರೇಟ್ ಉದ್ಯಮಿಗಳೇ ಆಡಳಿತರೂಢ ಪಕ್ಷಗಳಿಂದ ರಹಸ್ಯವಾಗಿ ಚುನಾವಣಾ ಬಾಂಡ್‌ಗಳನ್ನು ಖರೀದಿಸುತ್ತವೆ. ಕೊರೋನ ಸೋಂಕಿನ ಹಾವಳಿಯ ಸಂದರ್ಭದಲ್ಲಿಯೂ ಸರಕಾರವು ನಿರ್ದಯವಾಗಿ ತೆರಿಗೆ ಸಂಗ್ರಹಿಸುವ ತನ್ನ ಪ್ರವೃತ್ತಿಯನ್ನು ಮುಂದುವರಿಸಿತ್ತು. 2020-21ನೇ ಸಾಲಿನ ಮೊದಲ ಆರು ತಿಂಗಳುಗಳಲ್ಲಿ ತೈಲ ದರದ ಮೇಲೆ ಹೆಚ್ಚುವರಿಯಾಗಿ ಶೇ.33ರಷ್ಟು ಹೆಚ್ಚುವರಿ ತೆರಿಗೆಯನ್ನು ವಿಧಿಸಲಾಗಿದ್ದು, ಇದು ಕೋವಿಡ್ ಪೂರ್ವದ ಮಟ್ಟಕ್ಕೆ ಹೋಲಿಸಿದರೆ ಶೇ.79ರಷ್ಟು ಅಧಿಕವಾಗಿದೆ.

ದೇಶದ ಸೂಪರ್ ಶ್ರೀಮಂತರ ಬಗ್ಗೆ ಸರಕಾರ ತೋರುತ್ತಿರುವ ದಯಾಳುತನವನ್ನು ನಾವೀಗ ಹೋಲಿಕೆ ಮಾಡೋಣ. 2016ರಲ್ಲಿ ಸಂಪತ್ತಿನ ತೆರಿಗೆಯನ್ನು ರದ್ದುಪಡಿಸಲು ಅದಕ್ಕೆ ಯಾವುದೇ ಮುಜುಗರವಾಗಲಿ ಅಥವಾ ನಾಚಿಕೆಯಾಗಲಿ ಆಗಲೇ ಇಲ್ಲ. ಕಾರ್ಪೊರೇಟ್ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಇಳಿಸಲಾಯಿತು. ಹೂಡಿಕೆಗಳನ್ನು ಆಕರ್ಷಿಸಲು ಈ ಕ್ರಮವು ನೆರವಾಗಲಿದೆ ಎಂದು ಅದು ಹೇಳಿಕೊಂಡಿತ್ತು. ಆದರೆ ಭಾರತವು ಇದರಿಂದಾಗಿ 1.5 ಲಕ್ಷ ಕೋಟಿ ರೂ.ಗಳನ್ನು ಕಳೆದುಕೊಂಡಿತು ಹಾಗೂ ವಿತ್ತೀಯ ಕೊರತೆಯಲ್ಲಿ ಹೆಚ್ಚಳಕ್ಕೆ ಕಾರಣವಾಯಿತು.

ಆರೋಗ್ಯ ಹಾಗೂ ಸಾಮಾಜಿಕ ಭದ್ರತಾ ವ್ಯವಸ್ಥೆಗಳ ಕುರಿತ ಅನುದಾನದಲ್ಲಿ ಕುಸಿತವನ್ನು ಒಕ್ಸ್ ಫಾಮ್ ಸಮೀಕ್ಷಾ ಸಂಸ್ಥೆ ವಿವರಿಸಿದೆ. ‘‘2021-22ನೇ ಸಾಲಿನಲ್ಲಿ ಕೇಂದ್ರ ಸರಕಾರದ ಬಜೆಟ್‌ನಲ್ಲಿ ಆರೋಗ್ಯದ ಮೇಲಿನ ಅನುದಾನದಲ್ಲಿ ಹಿಂದಿನ ಸಾಲಿನ ಬಜೆಟ್‌ನಲ್ಲಿ ಶೇ.10ರಷ್ಟು ಅನುದಾನವನ್ನು ಕಡಿತಗೊಳಿಸಲಾಗಿದೆ. ಇದೇ ವೇಳೆ 2021-22ನೇ ಸಾಲಿನಲ್ಲಿ ಶಿಕ್ಷಣದ ಮೇಲಿನ ಅನುದಾನದಲ್ಲಿ ಕಳೆದ ವರ್ಷಕ್ಕಿಂತ ಶೇ.10ರಷ್ಟು ಹೆಚ್ಚಳವಾಗಿದೆ. ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದ ಶೇಕಡವಾರು ಪ್ರಮಾಣಕ್ಕೆ ಅನುಗುಣವಾಗಿ ಶಿಕ್ಷಣದ ಮೇಲಿನ ವೆಚ್ಚದಲ್ಲಿ ಶೇ.3ರಲ್ಲಿಯೇ ಉಳಿದುಕೊಂಡಿದೆ ಹಾಗೂ ಕಳೆದ 18 ವರ್ಷಗಳಲ್ಲಿ ಕೇವಲ ಶೇ. 0.07ರಷ್ಟು ಹೆಚ್ಚಳವಾಗಿದೆ.

ಕಾರ್ಮಿಕರಿಗಾಗಿನ ಸಾಮಾಜಿಕ ಭದ್ರತೆಯ ಕಾರ್ಯಕ್ರಮಗಳ (ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯದ ಅಧೀನದಲ್ಲಿ) ಮೇಲಿನ ವೆಚ್ಚ ಹಾಗೂ ಕೇಂದ್ರ ಸರಕಾರ ಪ್ರಾಯೋಜಿತ ರಾಷ್ಟ್ರೀಯ ಸಾಮಾಜಿಕ ನೆರವಿನ ಕಾರ್ಯಕ್ರಮ ಯೋಜನೆಯ ಮೇಲಿನ ವೆಚ್ಚವು 2021-22ನೇ ಸಾಲಿನಲ್ಲಿ ಶೇ.0.6ರಷ್ಟಿದ್ದು ತೀರಾ ಕೆಳಮಟ್ಟದಲ್ಲಿದೆ. ಇದು ಅದರ ಹಿಂದಿನ ವರ್ಷಕ್ಕಿಂತ ಶೇ.1.5ರಷ್ಟು ಕಡಿಮೆಯಾಗಿದೆ. ದೇಶದ ಶೇ.93ರಷ್ಟು ರಾಷ್ಟ್ರೀಯ ಶ್ರಮಿಕ ವರ್ಗವು ಅನೌಪಚಾರಿಕ ಉದ್ಯೋಗಗಳನ್ನು ಅವಲಂಬಿಸಿದೆ. ಅವರನ್ನು ವೇತನ ಸಹಿತ ರಜೆ, ಆರೋಗ್ಯ ವಿಮೆ, ಹೆರಿಗೆ ರಜೆ ಹಾಗೂ ಪಿಂಚಣಿ ಸೌಲಭ್ಯಗಳನ್ನು ಒದಗಿಸುವಂತಹ ಔಪಚಾರಿಕ ಉದ್ಯೋಗದ ವ್ಯಾಪ್ತಿಗೆ ತರುವಲ್ಲಿ ಅಲ್ಪಸ್ವಲ್ಪ ಯಶಸ್ಸನ್ನಷ್ಟೇ ಕಾಣಲಾಗಿದೆ. ಕೊರೋನ ಇದ್ದರೂ ಇಲ್ಲದಿದ್ದರೂ, ವ್ಯಾಪಕವಾಗಿ ಕಂಡು ಬರುತ್ತಿರುವ ಅಸಮಾನತೆ ಭವಿಷ್ಯದಲ್ಲಿ ಭಾರತಕ್ಕೆ ಇನ್ನಷ್ಟು ಹಾನಿ ಮಾಡಲಿದೆ. ಭಾರತವೆಂದರೆ ಕೇವಲ 98 ಜನರು ಮಾತ್ರವಲ್ಲ. ಈ 98 ಜನರಿಗಾಗಿ ಈ ದೇಶದ ಉಳಿದ ಕೋಟ್ಯಂತರ ಜನರ ಹಿತಾಸಕ್ತಿಯನ್ನು ಬಲಿಕೊಟ್ಟರೆ ಭಾರತ ವಿಶ್ವದ ಮುಂದೆ ತಲೆಯೆತ್ತುವುದು ಅಸಾಧ್ಯ..ಉಕ್ರೇನ್ ಯುದ್ಧದ ಸಂದರ್ಭಲ್ಲಿ ಭಾರತ ಸರಕಾರದ ವೈಫಲ್ಯವನ್ನು ಎಳೆ ವಿದ್ಯಾರ್ಥಿಗಳು ಜಗತ್ತಿನ ಮುಂದಿಡುತ್ತಿದ್ದಾರೆ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರುವುದಿಲ್ಲ ಎನ್ನುವ ಅರಿವು ಸರಕಾರಕ್ಕಿರಬೇಕು. ನಮ್ಮ ದೇಶದ ಪ್ರತಿಭಾವಂತ ಮಕ್ಕಳು ನಮ್ಮ ದೇಶದಲ್ಲೇ ಓದುವಂತಹ ಸ್ಥಿತಿ ನಿರ್ಮಾಣವಾಗಬೇಕು. ಆರೋಗ್ಯ, ಶಿಕ್ಷಣ ಎಲ್ಲರ ಹಕ್ಕಾದಾಗ ಮಾತ್ರ ದೇಶದಲ್ಲಿ ತಾಂಡವವಾಡುತ್ತಿರುವ ಅಸಮಾನತೆ ಎನ್ನುವ ವೈರಸ್ ಅನ್ನು ಗೆಲ್ಲುವುದಕ್ಕೆ ಸಾಧ್ಯ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X