Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕಪ್ಪುಸಮುದ್ರದಲ್ಲಿ ತಡೆ: 21 ಭಾರತೀಯ...

ಕಪ್ಪುಸಮುದ್ರದಲ್ಲಿ ತಡೆ: 21 ಭಾರತೀಯ ನಾವಿಕರು ಅತಂತ್ರ

ವಾರ್ತಾಭಾರತಿವಾರ್ತಾಭಾರತಿ5 March 2022 8:33 AM IST
share
ಕಪ್ಪುಸಮುದ್ರದಲ್ಲಿ ತಡೆ: 21 ಭಾರತೀಯ ನಾವಿಕರು ಅತಂತ್ರ

ಮುಂಬೈ: ರಷ್ಯಾ- ಉಕ್ರೇನ್ ಯುದ್ಧದಿಂದ ಸಂತ್ರಸ್ತರಾದ ಭಾರತೀಯರಲ್ಲಿ ಕೇವಲ ವಿದ್ಯಾರ್ಥಿಗಳು ಮಾತ್ರ ಸೇರಿಲ್ಲ. ಮಾರ್ಷೆಲ್ಸ್ ದ್ವೀಪದ ಧ್ವಜ ಹೊಂದಿರುವ ವ್ಯಾಪಾರಿ ಹಡಗಿನ 21 ಮಂದಿ ಭಾರತೀಯ ನಾವಿಕರು ದಕ್ಷಿಣ ಉಕ್ರೇನ್‌ನ ಮೈಕೊಲೆವ್ ಬಂದರಿನಿಂದ ಸುರಕ್ಷಿತವಾಗಿ ಹೊರಬರಲು ಕಾಯುತ್ತಿದ್ದಾರೆ. ಹಡಗಿನ ಸಿಬ್ಬಂದಿ, ರಷ್ಯನ್ ದಾಳಿ ಆರಂಭವಾದ ಫೆಬ್ರುವರಿ 25ರಿಂದಲೂ ಹಡಗಿನಲ್ಲೇ ಕಾಲ ಕಳೆಯುತ್ತಿದ್ದಾರೆ. ಬಂದರಿನಲ್ಲಿ ಕೆಲಸ ಸ್ಥಗಿತಗೊಂಡು ಲಂಗರು ಹಾಕಿರುವ ಹಡಗುಗಳ ಪೈಕಿ ಇದು ಕೂಡಾ ಒಂದಾಗಿದೆ. ರಷ್ಯನ್ ಪಡೆಗಳು ಇದೀಗ ಕಪ್ಪುಸಮುದ್ರ ಕರಾವಳಿಯ ಪ್ರಮುಖ ಸರಕು ಸಾಗಾಣಿಕಾ ತಾಣವಾದ ಈ ಬಂದರು ನಗರದತ್ತ ಮುನ್ನುಗ್ಗುತ್ತಿದ್ದಾರೆ.

ಮೈಕೊಲೇವ್‌ನಲ್ಲಿ ಹಲವು ಹಡಗುಗಳು ತಮ್ಮ ಮಾಸ್ಟ್ ಅನ್ನು ಇಳಿಸಿ, ತಮ್ಮ ರಾಷ್ಟ್ರೀಯತೆಯನ್ನು ಗುರುತು ಪತ್ತೆಯಾಗದಂತೆ ಎಚ್ಚರಿಕೆ ವಹಿಸಿವೆ. ಹೀಗೆ ಅತಂತ್ರವಾಗಿರುವ 21 ನಾವಿಕರ ಪೈಕಿ ನಾಲ್ಕು ಮಂದಿ ಮುಂಬೈನವರು. ಹಡಗಿನ ಮಾಲೀಕರು ಹಾಗೂ ಸಾಗಾಣಿಕೆ ಬೆಂಬಲ ಮತ್ತು ದಿನಸಿ ಒದಗಿಸುವ ಸ್ಥಳೀಯ ಏಜೆಂಟರ ಸೂಚನೆಯಂತೆ ಹಲವು ದಿನಗಳಿಂದ ಹಡಗಿನಲ್ಲೇ ಉಳಿದಿರುವುದಾಗಿ ಈ ಪೈಕಿ ಒಬ್ಬರು ವಿವರಿಸಿದ್ದಾರೆ. ಈ ಹಡಗಿಗೆ ಸಿಬ್ಬಂದಿಯನ್ನು ಪೂರೈಸಿರುವ ಮುಂಬೈನ ವಿ.ಆರ್. ಮೆರಿಟೈಮ್‌ನ ಪ್ರಧಾನ ಕಾರ್ಯದರ್ಶಿಯವರು ಭಾರತದ ರಾಜತಾಂತ್ರಿಕ ಸಿಬ್ಬಂದಿ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಡಗು ಫೆಬ್ರುವರಿ 22ರಂದು ಮೆಕ್ಕೆಜೋಳ ಲೋಡ್ ಮಾಡುವ ಸಲುವಾಗಿ ಮೈಕೊಲೈವ್‌ನಲ್ಲಿ ಲಂಗರು ಹಾಕಿದ್ದು, ಫೆಬ್ರುವರಿ 25ರಂದು ಹೊರಡಬೇಕಿತ್ತು. ಆದರೆ ದಾಳಿಯ ಪರಿಣಾಮವಾಗಿ ಕಪ್ಪು ಸಮುದ್ರದಲ್ಲಿ ತಡೆ ಒಡ್ಡಿರುವುದರಿಂದ ಹೊರಡಲು ಸಾಧ್ಯವಾಗಿರಲಿಲ್ಲ. ಸದ್ಯಕ್ಕೆ ಆಹಾರದ ಕೊರತೆ ಇಲ್ಲ. ಆರಂಭದಲ್ಲಿ ನೀರಿನ ಸಮಸ್ಯೆ ಇದ್ದರೂ ಇದೀಗ ಬಗೆಹರಿಸಲಾಗಿದೆ ಎಂದು ಹಡಗಿನ ಸಿಬ್ಬಂದಿಯೊಬ್ಬರು ವಿವರಿಸಿದ್ದಾರೆ. ಪಡಿತರ ಮೂಲಕ ನಮಗೆ ನೀರು ಪೂರೈಸಲಾಗುತ್ತಿದೆ. ಹಲವು ಇತರ ಹಡಗುಗಳು ಕೂಡಾ ಸಿಲುಕಿಕೊಂಡಿವೆ. ಶೆಲ್ಲಿಂಗ್ ಸದ್ದು ನಮಗೆ ಕೇಲಿಸುತ್ತಿದೆ. ಇದು ಭಯದ ಸನ್ನಿವೇಶ. ಆದರೆ ಬೇರೆ ಆಯ್ಕೆ ಇಲ್ಲ. ಬಂದರಿನಿಂದ ಹೊರಗೆ ಹೋಗುವುದು ಸುರಕ್ಷಿತವಲ್ಲ. ರಸ್ತೆ ಮೂಲಕ ಪ್ರಯಾಣವೂ ಸಾಧ್ಯವಿಲ್ಲ. ಬಂದರು ಕಾರ್ಯಾಚರಣೆ ಆರಂಭವಾದ ಬಳಿಕ ನಾವು ಸುರಕ್ಷಿತವಾಗಿ ಹೊರಬರುತ್ತೇವೆ ಎಂಬ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X