ಉಕ್ರೇನ್‌ನ ಸುಮಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಹೊಸ ಭರವಸೆ ನೀಡಿದ ಭಾರತೀಯ ರಾಯಭಾರ ಕಚೇರಿ

ಹೊಸದಿಲ್ಲಿ: ಈಶಾನ್ಯ ಉಕ್ರೇನ್‌ನ ಸುಮಿಯಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳ ಹತಾಶ ವೀಡಿಯೊ ಮನವಿಗಳ ನಂತರ ಇಂದು ಪ್ರತಿಕ್ರಿಯಿಸಿರುವ ಯುದ್ಧ ಪೀಡಿತ ದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿ ವಿದ್ಯಾರ್ಥಿಗಳನ್ನು ಸುಭದ್ರತೆ, ಸುರಕ್ಷಿತವಾಗಿ ಸ್ಥಳಾಂತರಿಸಲು "ಸಾಧ್ಯವಿರುವ ಎಲ್ಲಾ ಕಾರ್ಯವಿಧಾನಗಳನ್ನು" ಅನ್ವೇಷಿಸುತ್ತಿದೆ ಎಂದು ಹೇಳಿದೆ.
ಅಂತರರಾಷ್ಟ್ರೀಯ ಮಾನವೀಯ ಸಂಸ್ಥೆ ರೆಡ್‌ಕ್ರಾಸ್ ಸೇರಿದಂತೆ ಎಲ್ಲಾ ಸಂವಾದಕರೊಂದಿಗೆ ಸ್ಥಳಾಂತರಿಸುವ ಮತ್ತು ನಿರ್ಗಮನ ಮಾರ್ಗಗಳನ್ನು ಗುರುತಿಸುವ ಬಗ್ಗೆ ಚರ್ಚಿಸಲಾಗಿದೆ ಎಂದು ಇಂದು ಬೆಳಗ್ಗೆ ಮಾಡಿರುವ ಟ್ವೀಟ್‌ನಲ್ಲಿ ರಾಯಭಾರ ಕಚೇರಿ ತಿಳಿಸಿದೆ.
"ಸುಮಿಯಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಸುರಕ್ಷಿತವಾಗಿ ಮತ್ತು ಸಕಲ ಭದ್ರತೆಯೊಂದಿಗೆ ಸ್ಥಳಾಂತರಿಸಲು ಸಾಧ್ಯವಿರುವ ಎಲ್ಲಾ ಕಾರ್ಯವಿಧಾನಗಳನ್ನು ಅನ್ವೇಷಿಸಲಾಗುತ್ತಿದೆ. ರೆಡ್ ಕ್ರಾಸ್ ಸೇರಿದಂತೆ ಎಲ್ಲಾ ಸಂವಾದಕರೊಂದಿಗೆ ನಿರ್ಗಮನ ಮಾರ್ಗಗಳ ಗುರುತಿಸುವಿಕೆಯನ್ನು ಚರ್ಚಿಸಲಾಗಿದೆ. ನಮ್ಮ ಎಲ್ಲಾ ನಾಗರಿಕರನ್ನು ಸ್ಥಳಾಂತರಿಸುವವರೆಗೆ ನಿಯಂತ್ರಣ ಕೊಠಡಿಯು ಸಕ್ರಿಯವಾಗಿರುತ್ತದೆ. ಸುರಕ್ಷಿತವಾಗಿರಿ, ದೃಢವಾಗಿರಿ" ಎಂದು ಅದು ಹೇಳಿದೆ.
ಸುಮಿಯಲ್ಲಿ 700 ಮತ್ತು ಖಾರ್ಕಿವ್‌ನಲ್ಲಿ 300 ಸಹಿತ ಕನಿಷ್ಠ 1,000 ಭಾರತೀಯರು ಇನ್ನೂ ಪೂರ್ವ ಉಕ್ರೇನ್‌ನ ಸಂಘರ್ಷ ವಲಯಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಕೇಂದರ ಸರಕಾರ ಶುಕ್ರವಾರ ಹೇಳಿದೆ. ಅವರನ್ನು ಸ್ಥಳಾಂತರಿಸಲು ಬಸ್‌ಗಳನ್ನು ವ್ಯವಸ್ಥೆ ಮಾಡುವುದು ಇದೀಗ ದೊಡ್ಡ ಸವಾಲಾಗಿದೆ ಎಂದು ಹೇಳಿದೆ.







