ಮಣಿಪುರ ಚುನಾವಣಾ ಹಿಂಸಾಚಾರದಲ್ಲಿ ಓರ್ವ ಮೃತ್ಯು

ಇಂಫಾಲ: ಮಣಿಪುರದ ಕರೋಂಗ್ ಕ್ಷೇತ್ರದಲ್ಲಿ ಇಂದು ಮತದಾನದ ವೇಳೆ ಹಿಂಸಾಚಾರ ನಡೆದಾಗ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮಣಿಪುರದ 10 ಜಿಲ್ಲೆಗಳ 22 ಕ್ಷೇತ್ರಗಳಲ್ಲಿ 92 ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಇಂದು ಮತದಾನ ನಡೆಯುತ್ತಿದೆ.
ಶನಿವಾರ ಬೆಳಗ್ಗೆ 11ರವರೆಗೆ ಶೇ.28.20ರಷ್ಟು ಮತದಾನವಾಗಿದ್ದು, 2017ಕ್ಕೆ ಹೋಲಿಸಿದರೆ ಶೇ.16.80ರಷ್ಟು ಕಡಿಮೆಯಾಗಿದೆ ಎಂದು ವರದಿಯಾಗಿದೆ.
Next Story





