ಉಳ್ಳಾಲ ಉರೂಸ್: ಖಾಝಿ ತ್ವಾಖಾ ಉಸ್ತಾದ್ ಭೇಟಿ

ಉಳ್ಳಾಲ, ಮಾ.5: ಉಳ್ಳಾಲ ಉರೂಸ್ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ನೆರೆದವರನ್ನುದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು.
ಇದೇವೇಳೆ ಉಳ್ಳಾಲ ದರ್ಗಾ ಆಡಳಿತ ಸಮಿತಿಗೆ ನೀಡಿದ ಸಮರ್ಥ ಸಲಹೆ, ಮಾರ್ಗದರ್ಶನಕ್ಕಾಗಿ ಶೈಖುನಾ ತ್ವಾಖಾ ಉಸ್ತಾದ್ ರನ್ನು ದರ್ಗಾ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್, ಪ್ರಧಾನ ಕಾರ್ಯದರ್ಶಿ ತ್ವಾಹಾ ಹಾಜಿ, ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್, ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ ಶಾಲು ಹೊದಿಸಿ ಸನ್ಮಾನಿಸಿದರು.
ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ಮಾತನಾಡಿ ಶುಭ ಕೋರಿದರು.
ಈ ವೇಳೆ ಶೈಖುನಾ ಉಸ್ಮಾನ್ ಫೈಝಿ, ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ಹನೀಫ್ ಹಾಜಿ, ಫಕೀರಬ್ಬ ಮಾಸ್ಟರ್, ಇಬ್ರಾಹೀಂ ಕೊಣಾಜೆ, ನಾಸಿರ್ ಸಾಮಣಿಗೆ, ಕೆ.ಎಸ್.ಮೊಯ್ದಿನ್, ದರ್ಗಾ ಸಮಿತಿಯ ಜೆ. ಅಬ್ದುಲ್ ಹಮೀದ್, ಸುಪ್ರೀಂ ಕಮಿಟಿಯ ಕೆ.ಎನ್.ಮುಹಮ್ಮದ್, ಹಮೀದ್ ಕೋಡಿ, ಅಬ್ದುಲ್ ರಹಿಮಾನ್, ಹನೀಫ್ ಮತ್ತಿತರರು ಉಪಸ್ಥಿತರಿದ್ದರು.