ವಿರಾಜಪೇಟೆ : ಆಟೋ, ಬೈಕ್ ಡಿಕ್ಕಿ ; ಬೈಕ್ ಸವಾರ ಮೃತ್ಯು

ಮಡಿಕೇರಿ ಮಾ.5 : ಆಟೋ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಚಾಲಕ ಮೃತಪಟ್ಟಿರುವ ಘಟನೆ ವಿರಾಜಪೇಟೆ ಪಟ್ಟಣದ ವಿನಾಯಕ ನಗರ ತಿರುವಿನಲ್ಲಿ ನಡೆದಿದೆ.
ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಕಾವಾಡಿ ಗ್ರಾಮದ ನಿವಾಸಿ ಕೆ.ಎಸ್.ರಾಜ ಪೆಮ್ಮಯ್ಯ (58) ಮೃತ ದುರ್ದೈವಿ. ಪಟ್ಟಣದಿಂದ ದಿನಸಿ ಖರೀದಿಸಿ ಮನೆಗೆ ಮರಳುತ್ತಿದ್ದಾಗ ಅಮ್ಮತ್ತಿಯಿಂದ ವಿರಾಜಪೇಟೆಗೆ ಆಗಮಿಸುತಿದ್ದ ಅಟೋ ನಡುವೆ ಡಿಕ್ಕಿ ಸಂಭವಿಸಿದೆ.
ಆಟೋ ರಿಕ್ಷಾ ಕೂಡ ಮಗುಚಿಕೊಂಡ ಪರಿಣಾಮ ಆಟೋ ಚಾಲಕ ಟಿ.ಟಿ.ರಾಜನ್ ಅವರ ತಲೆಗೂ ಗಂಭೀರ ಗಾಯವಾಗಿದ್ದು, ವಿರಾಜಪೇಟೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿರಾಜಪೇಟೆ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.
Next Story