ಉಡುಪಿ: ಎಂಜಿಎಂ ಕಾಲೇಜು ಪರಿಸರದಲ್ಲಿ ಚಿಟ್ಟೆ ಪಾರ್ಕ್

ಉಡುಪಿ, ಮಾ.5: ಉಡುಪಿಯ ಮಹಾತ್ಮಾ ಗಾಂಧಿ ಸ್ಮಾರಕ ಕಾಲೇಜು ಪರಿಸರದಲ್ಲಿ ಚಿಟ್ಟೆ ಪಾರ್ಕ್ ನಿರ್ಮಾಣದ ಸಲುವಾಗಿ ಎಂಜಿಎಂ ಕಾಲೇಜು ಹಾಗೂ ಮಣಿಪಾಲ್ ಪಕ್ಷಿ ವಿಹಾರ ಮತ್ತು ಸಂರಕ್ಷಣಾ ಟ್ರಸ್ಟ್(ಎಂಬಿಎಸಿ) ನಡುವೆ ಮಹತ್ವಪೂರ್ಣ ಒಡಂಬಡಿಕೆಗೆ (ಎಂಓಯು) ಸಹಿ ಹಾಕಲಾಯಿತು.
ಈ ಯೋಜನೆಗೆ ಒಂದು ಲಕ್ಷ ರೂ. ಧನಸಹಾಯ ನೀಡಲು ಇಶಾ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕರಾದ ಡಾ. ಪ್ರಭಾಕರ ಶಾಸ್ತ್ರಿ, ಅವರ ಪತ್ನಿ ಸವಿತಾರ ನೆನಪಿನಲ್ಲಿ ಕಾಲೇಜಿಗೆ ನೀಡಲು ಒಪ್ಪಿದ್ದಾರೆ. ಇದರ ಮೊದಲ ಕಂತಿನ ಚೆಕ್‌ನ್ನು ಇಂದು ಕಾಲೇಜಿನ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾಂಶುಪಾಲ್ ಡಾ. ದೇವಿದಾಸ್ ಎಸ್. ನಾಯ್ಕ, ಈ ಯೋಜನೆ ಸಾಧ್ಯವಿದ್ದಷ್ಟು ಬೇಗ ಕಾರ್ಯರೂಪಕ್ಕೆ ಬರಲು ಕಾಲೇಜಿನ ವತಿಯಿಂದ ಸಂಪೂರ್ಣ ಸಹಕಾರವನ್ನು ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ತೇಜಸ್ವಿ, ಡಾ.ವೃಂದಾ, ಉಷಾರಾಣಿ, ಡಾ.ವಿಶ್ವನಾಥ್ ಪೈ, ಡಾ.ಮನೀತಾ ಹಾಗೂ ಯಶಸ್ವಿನಿ ಉಪಸ್ಥಿತರಿದ್ದರು.
Next Story