ಉಡುಪಿ: ಅನವಿಗೆ ಕರಾಟೆಯಲ್ಲಿ ಪ್ರಶಸ್ತಿ

ಉಡುಪಿ, ಮಾ.5: ಕರ್ನಾಟಕ ರಾಜ್ಯ ಕರಾಟೆ ಸಂಸ್ಥೆ, ಭಾರತೀಯ ಮೌಎಲೆ ಶೂಟೋಕನ್ ಕರಾಟೆ ಸಂಸ್ಥೆ, ಶಿವಮೊಗ್ಗ ನಗರ ಕರಾಟೆ ಸಂಸ್ಥೆ ಇವುಗಳ ಸಹಯೋಗದೊಂದಿಗೆ ಶಿವಮೊಗ್ಗದಲ್ಲಿ ಆಯೋಜಿಸಿದ್ದ ಎರಡನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನ ಮಲ್ನಾಡ್ ಓಪನ್‌ನಲ್ಲಿ ಉಡುಪಿಯ ಅನವಿ ಪಿ ಶೆಟ್ಟಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.
ಅನವಿ ಬ್ರಹ್ಮಾವರ ಹಾರಾಡಿಯ ಜಿ.ಎಂ.ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಮತ್ತು ಉಡುಪಿ ಸಂತೆಕಟ್ಟೆಯ ಲಕ್ಷ್ಮಿ ಮತ್ತು ಪ್ರಕಾಶ್ ಶೆಟ್ಟಿ ದಂಪತಿಯ ಪುತ್ರಿಯಾಗಿದ್ದು ಪರ್ಕಳದ ಪ್ರವೀಣಾಕುಮಾರಿ ಇವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.
Next Story