ಪಕ್ಷಿಕೆರೆಯ ‘ರೋಹನ್ ಎಸ್ಟೇಟ್’ನಲ್ಲಿ ‘ಸೋನು ನಿಗಮ್ ಲೈವ್ ಇನ್ ಕಾನ್ಸರ್ಟ್’ ಕಾರ್ಯಕ್ರಮ
ರೋಹನ್ ಕಾರ್ಪೊರೇಶನ್ ಆಯೋಜನೆ

ಮಂಗಳೂರು, ಮಾ.5: ನಗರದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾಗಿರುವ ರೋಹನ್ ಕಾರ್ಪೊರೇಶನ್ ವತಿಯಿಂದ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯ ‘ರೋಹನ್ ಎಸ್ಟೇಟ್’ ವಸತಿ ಬಡಾವಣೆಯಲ್ಲಿ ಶನಿವಾರ ರಾತ್ರಿ ಆಯೋಜಿಸಿದ ‘ಸೋನು ನಿಗಮ್ ಲೈವ್ ಇನ್ ಕಾನ್ಸರ್ಟ್’ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಮನೆಸೂರೆಗೊಂಡರು.
ರೋಹನ್ ಕಾರ್ಪೊರೇಶನ್ ಸಂಸ್ಥೆಯು ಪಕ್ಷಿಕೆರೆಯಲ್ಲಿರುವ 32 ಎಕರೆ ಪ್ರದೇಶದಲ್ಲಿ 372 ನಿವೇಶನಗಳನ್ನು ಒಳಗೊಂಡ ‘ರೋಹನ್ ಎಸ್ಟೇಟ್’ ವಸತಿ ಬಡಾವಣೆಯನ್ನು ನಿರ್ಮಿಸಿದೆ. ಅತ್ಯಾಧುನಿಕ ಸಕಲ ಸೌಕರ್ಯಗಳೊಂದಿಗೆ ಪೂರ್ಣಗೊಂಡಿರುವ ಈ ಬಡಾವಣೆ ಹಾಗೂ ಅದರಲ್ಲಿನ ಸೌಕರ್ಯಗಳನ್ನು ಮಂಗಳೂರು ಮತ್ತು ಆಸುಪಾಸಿನ ಜನರಿಗೆ ಪರಿಚಯಿಸುವುದಕ್ಕಾಗಿ ಆಯೋಜಿಸಲಾದ ‘ಸೋನು ನಿಗಮ್ ಲೈವ್ ಇನ್ ಕಾನ್ಸರ್ಟ್’ಗೆ ಐದು ಸಾವಿರಕ್ಕೂ ಅಧಿಕ ಮಂದಿ ಸಾಕ್ಷಿಯಾದರು.
ಈ ಸಂದರ್ಭ ರೋಹನ್ ಕಾರ್ಪೊರೇಶನ್‌ನ ಮುಖ್ಯಸ್ಥ ರೋಹನ್ ಮೊಂತೆರೋ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಉಮಾನಾಥ ಕೋಟ್ಯಾನ್, ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್, ಮೆಸ್ಕಾಂ ಎಂಡಿ ಪ್ರವೀಣ್ ಕುಮಾರ್ ಮಿಶ್ರಾ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ರಾಜೀವ್ ಗಾಂಧಿ ಆರೋಗ್ಯ ವಿವಿಯ ಸಿಂಡಿಕೇಟ್ ಸದಸ್ಯ ಯು.ಟಿ.ಇಫ್ತಿಕಾರ್ ಅಲಿ, ಕ್ರೆಡೈ ಮಂಗಳೂರು ಅಧ್ಯಕ್ಷ ಪುಷ್ಪರಾಜ್ ಜೈನ್, ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಹರಿಕೃಷ್ಣ ಬಂಟ್ವಾಳ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ರೋಹನ್ ಕಾರ್ಪೊರೇಶನ್ ಮಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾಗಿದೆ. ಸುಮಾರು 20 ವರ್ಷಗಳಿಂದ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ರೋಹನ್ ಕಾರ್ಪೊರೇಶನ್ ಅತ್ಯುತ್ತಮ ದರ್ಜೆಯ ಹಲವು ರೆಸಿಡೆನ್ಸಿಯಲ್ ಮತ್ತು ಕಮರ್ಶಿಯಲ್ ಸಮುಚ್ಚಯ ಹಾಗೂ ಲೇಔಟ್‌ಗಳನ್ನು ದೇಶ ವಿದೇಶದಲ್ಲಿರುವ ಮಂಗಳೂರಿನ ಜನತೆಗೆ ನೀಡಿದೆ. ಅಲ್ಲದೆ ಇನ್ನೂ ಹಲವು ವಸತಿ, ವಾಣಿಜ್ಯ ಯೋಜನೆಗಳು ಮತ್ತು ಬಡಾವಣೆಗಳು ನಿರ್ಮಾಣ ಹಂತದಲ್ಲಿವೆ. ಪಕ್ಷಿಕೆರೆಯಲ್ಲಿ 3 ಮತ್ತು ಅದಕ್ಕಿಂತ ಹೆಚ್ಚಿನ ಸೆಂಟ್ಸ್‌ಗಳಲ್ಲಿ ನಿವೇಶನಗಳು ದೊರೆಯುತ್ತಿವೆ. ಈಗಾಗಲೇ 200ಕ್ಕೂ ಅಧಿಕ ಸೈಟ್‌ಗಳು ಮಾರಾಟವಾಗಿವೆ. ಮತ್ತಷ್ಟು ಜನರಿಗೆ ಈ ಬಡಾವಣೆಯನ್ನು ಪರಿಚಯಿಸಲು ಶನಿವಾರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಂಬೈನಿಂದ ಸೋನು ನಿಗಮ್ ಅವರ ವೃತ್ತಿಪರ ಸಂಗೀತ ತಂಡ ಆಗಮಿಸಿತ್ತು. ಈ ಮೆಗಾ ಶೋ ಸಂಪೂರ್ಣ ಉಚಿತವಾಗಿತ್ತು.









