ರಷ್ಯಾ ಕದನ ವಿರಾಮ ಉಲ್ಲಂಘಿಸಿದೆ: ಉಕ್ರೇನ್ ಆರೋಪ

ಮಾರಿಯುಪೋಲ್: ಅತ್ಯಂತ ಭೀಕರ ಕದನಕ್ಕೆ ಸಾಕ್ಷಿಯಾಗಿರುವ ಮಾರಿಯುಪೋಲ್ ಪಟ್ಟಣದ ನಾಗರಿಕರು ನಿರ್ಗಮಿಸಲು ಅನುವು ಮಾಡಿಕೊಡುವ ತಾತ್ಕಾಲಿಕ ಕದನ ವಿರಾಮವನ್ನು ರಷ್ಯಾ ಪಡೆಗಳು ಉಲ್ಲಂಘಿಸಿವೆ ಎಂದು ಉಕ್ರೇನ್ ಹೇಳಿದೆ.
ರಶ್ಯ ಸೇನೆ ಕದನ ವಿರಾಮಕ್ಕೆ ಬದ್ಧವಾಗಿಲ್ಲ. ಅದು ಮಾರಿವುಪೋಲ್‌ನಲ್ಲಿ ಶೆಲ್ ದಾಳಿ ನಡೆಸುವುದನ್ನು ಮುಂದುವರಿಸಿದೆ. ಇದರಿಂದ ನಾಗರಿಕರ ತೆರವು ಕಾರ್ಯಾಚರಣೆ ಮುಂದೂಡಲಾಗಿದೆ ಎಂದು ನಗರದ ಅಧಿಕಾರಿಗಳು ತಿಳಿಸಿದ್ದಾರೆ.
Next Story





