ವಿಶ್ವಸಂಸ್ಥೆಯ ನಿರ್ಣಯ ಬೆಂಬಲಿಸದ ದೇಶಗಳ ವಿರುದ್ಧ ಉಕ್ರೇನ್ ಆಕ್ರೋಶ

PHOTO COURTESY :TWITTER
ವಿಶ್ವಸಂಸ್ಥೆ: ಉಕ್ರೇನ್ ಮೇಲೆ ರಷ್ಯಾ ನಡೆಸಿದ ಆಕ್ರಮಣವನ್ನು ಖಂಡಿಸುವ ನಿರ್ಣಯವನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸಿದ ಬಳಿಕ ನಡೆದ ಮತದಾನದಿಂದ ದೂರ ಉಳಿದ ಅಥವಾ ನಿರ್ಣಯದ ವಿರುದ್ಧ ಮತಚಲಾಯಿಸಿದ ದೇಶಗಳ ವಿರುದ್ಧ ಉಕ್ರೇನ್ ರಾಯಭಾರಿ ಹರಿಹಾಯ್ದಿದ್ದಾರೆ.
ಏನನ್ನೂ ಮಾಡದ ಬೆರಳೆಣಿಕೆಯಷ್ಟು ಮಂದಿ ನಮ್ಮ ಸುತ್ತ ಅಥವಾ ನಮ್ಮೊಂದಿಗೇ ಇದ್ದಾರೆ ಎಂಬುದು ಇನ್ನೂ ನಾಚಿಕೆಗೇಡಿನ ವಿಷಯವಾಗಿದೆ. ಈಗಲೇ ಕಾರ್ಯನಿರ್ವಹಿಸಿ. ಇಲ್ಲದಿದ್ದರೆ ಉಕ್ರೇನ್ಗೆ ಮಾತ್ರವಲ್ಲ, ನಿಮಗೆಲ್ಲರಿಗೂ ತಡವಾಗಬಹುದು ಎಂದು ವಿಶ್ವಸಂಸ್ಥೆಗೆ ಉಕ್ರೇನ್ ರಾಯಭಾರಿ ಸೆರ್ಗೈ ಕಿಸ್ಲಿಟ್ಸ್ಯಾ ಹೇಳಿದ್ದಾರೆ.
2 ಬಾರಿ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ ಮತ್ತು ಒಂದು ಬಾರಿ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ರಷ್ಯಾವನ್ನು ಖಂಡಿಸುವ ನಿರ್ಣಯದ ಮೇಲಿನ ಮತದಾನದಿಂದ ಭಾರತ ಸಹಿತ 35 ದೇಶಗಳು ದೂರ ಉಳಿದರೆ, 5 ದೇಶಗಳು ನಿರ್ಣಯವನ್ನು ವಿರೋಧಿಸಿದ್ದವು. 193 ಸದಸ್ಯ ದೇಶಗಳಲ್ಲಿ 141 ದೇಶಗಳು ನಿರ್ಣಯದ ಪರ ಮತ ಚಲಾಯಿಸಿವೆ.
Next Story





