ನ್ಯಾಯಾಲಯದ ಆವರಣದಲ್ಲಿ ಕೋತಿಗಳಿಗೆ ಆಹಾರ ನೀಡದಂತೆ ದಿಲ್ಲಿ ಹೈಕೋರ್ಟ್ ಸೂಚನೆ

ಹೊಸದಿಲ್ಲಿ: ನ್ಯಾಯಾಲಯದ ಆವರಣದೊಳಗೆ ಕೋತಿಗಳಿಗೆ ಆಹಾರ ನೀಡದಂತೆ ದಿಲ್ಲಿ ಉಚ್ಚ ನ್ಯಾಯಾಲಯವು ವಕೀಲರು, ಕಕ್ಷಿದಾರರು ಮತ್ತು ಸಿಬ್ಬಂದಿಗಳಿಗೆ ಸೂಚಿಸಿದೆ.
ಶುಕ್ರವಾರ ಆಡಳಿತಾತ್ಮಕ ಶಾಖೆಯು ಹೊರಡಿಸಿರುವ ಸುತ್ತೋಲೆಯಲ್ಲಿ ನ್ಯಾಯಾಲಯದ ಕಟ್ಟಡಗಳ ಮತ್ತು ಎಲ್ಲ ಬ್ಲಾಕುಗಳಲ್ಲಿಯ ಕಿಟಕಿಗಳು ತೆರೆದುಕೊಂಡಿಲ್ಲ ಅಥವಾ ಅಲ್ಲಿ ಜನರ ಉಪಸ್ಥಿತಿಯಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ಎಲ್ಲ ಸಂಬಂಧಿತ ವ್ಯಕ್ತಿಗಳಿಗೆ ಹೈಕೋರ್ಟ್ ಸೂಚಿಸಿದೆ.
ಹೈಕೋರ್ಟ್ ಫೆ.28ರಂದು ಹೊರಡಿಸಿದ್ದ ಸುತ್ತೋಲೆಯೊಂದರಲ್ಲಿ ನ್ಯಾಯಾಲಯದ ಆವರಣದಲ್ಲಿ ಕೋತಿ ಅಥವಾ ನಾಯಿಗಳಂತಹ ಬಿಡಾಡಿ ಪ್ರಾಣಿಗಳಿಗೆ ಆಹಾರವನ್ನು ನೀಡದಂತೆ ಆದೇಶಿಸಿತ್ತು.
ತನ್ನ ನಿರ್ದೇಶಗಳಿಗೆ ವ್ಯತಿರಿಕ್ತವಾಗಿ ಕೆಲವು ವಕೀಲರು, ಕಕ್ಷಿದಾರರು, ನ್ಯಾಯಾಲಯದ ಸಿಬ್ಬಂದಿ , ಪೊಲೀಸ್ ಮತ್ತು ಸಿಆರ್ಪಿಎಫ್ ಸಿಬ್ಬಂದಿಗಳೂ ಈಗಲೂ ಬಿಡಾಡಿ ಪ್ರಾಣಿಗಳಿಗೆ ಆಹಾರ ನೀಡುತ್ತಿರುವುದು ತನ್ನ ಗಮನಕ್ಕೆ ಬಂದಿದೆ ಎಂದು ಹೈಕೋರ್ಟ್ ಹೇಳಿದೆ.
Next Story





