ಜಮ್ಮು: ಶಂಕಿತ ಪಾಕ್ ಡ್ರೋನ್ನತ್ತ ಗುಂಡು ಹಾರಿಸಿದ ಬಿಎಸ್ಎಫ್
ಬಿಎಸ್ಎಫ್
ಶ್ರೀನಗರ,ಮಾ.6: ಪತ್ರಕರ್ತ ಫಹಾದ್ ಶಾ ಅವರು ಶನಿವಾರ ಪ್ರತ್ಯೇಕ ಪ್ರಕರಣದಲ್ಲಿ ಶೋಪಿಯಾನ್ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡ ಬೆನ್ನಲ್ಲೇ ಮೂರನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಶ್ರೀನಗರ ಪೊಲೀಸರು ಬಂಧಿಸಿದ್ದಾರೆ.
‘ದಿ ಕಾಶ್ಮೀರವಾಲಾ’ ಸುದ್ದಿ ಜಾಲತಾಣದ ಮುಖ್ಯ ಸಂಪಾದಕರಾಗಿರುವ ಶಾ ಒಂದು ತಿಂಗಳ ಅವಧಿಯಲ್ಲಿ ಮೂರನೇ ಬಾರಿ ಬಂಧನಕ್ಕೊಳಗಾಗಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ದೇಶವಿರೋಧಿ ವಿಷಯವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಈ ಹಿಂದೆ ಫೆ.4ರಂದು ಫುಲ್ವಾಮಾ ಪೊಲೀಸರು ಶಾ ಅವರನ್ನು ಬಂಧಿಸಿದ್ದರು. 22 ದಿನಗಳ ಬಳಿಕ ಎನ್ಐಎ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತ್ತು. ಆದರೆ ಜಾಮೀನು ಪಡೆದುಕೊಂಡ ಕೆಲವೇ ಗಂಟೆಗಳಲ್ಲಿ ಫೆ.26ರಂದು ಪ್ರತ್ಯೇಕ ಪ್ರಕರಣವೊಂದರಲ್ಲಿ ಅವರನ್ನು ಶೋಪಿಯಾನ್ ಪೊಲೀಸರು ಮತ್ತೆ ಬಂಧಿಸಿದ್ದರು.
ಮೇ 2020ರಲ್ಲಿ ಪ್ರಕಟಿಸಿದ್ದ ವರದಿಗೆ ಸಂಬಂಧಿಸಿದಂತೆ ಶ್ರೀನಗರ ಪೊಲೀಸರು ಶಾ ಅವರನ್ನು ಮತ್ತೆ ಬಂಧಿಸಿದ್ದಾರೆ ಎಂದು ‘ದಿ ಕಾಶ್ಮೀರವಾಲಾ’ ರವಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ. ಪ್ರಸ್ತುತ ಅವರನ್ನು ಸಫದ್ಕಲ್ ಪೊಲೀಸ್ ಠಾಣೆಯಲ್ಲಿರಿಸಲಾಗಿದೆ.
ಶಾ ವಿರುದ್ಧ ಐಪಿಸಿಯ 147(ಗಲಭೆ),307(ಕೊಲೆಯತ್ನ),109 (ಪ್ರಚೋದನೆ),501( ಮಾನಹಾನಿಕರ ವಿಷಯದ ಮುದ್ರಣ) ಮತ್ತು 505(ಸಾರ್ವಜನಿಕ ಕುಚೇಷ್ಟೆ) ಕಲಮ್ಗಳಡಿ ಆರೋಪಗಳನ್ನು ಹೊರಿಸಲಾಗಿದೆ.
ಶಾ ಅವರಿಗೆ ಜಾಮೀನು ನೀಡುವಾಗ ಶೋಪಿಯಾನ್ ನ್ಯಾಯಾಲಯವು,ಜಾಮೀನು ಮಂಜೂರು ಮಾಡುವುದು ನಿಯಮವಾಗಿದೆ ಮತ್ತು ಅದನ್ನು ನಿರಾಕರಿಸುವುದು ಅಪವಾದವಾಗಿದೆ ಎನ್ನುವುದನ್ನು ಗಮನಿಸಿದೆ ಎಂದು ದಿ ಕಾಶ್ಮೀರವಾಲಾ ಹೇಳಿಕೆಯಲ್ಲಿ ತಿಳಿಸಿದೆ.
ಅನಾಗರಿಕ ಸಮಾಜದಲ್ಲಿ ನೀವು ಜಾಮೀನು ಕೋರುವಂತಿಲ್ಲ. ನಾಗರಿಕ ಸಮಾಜದಲ್ಲಿ ನೀವು ಅದನ್ನು ನಿರಾಕರಿಸುವಂತಿಲ್ಲ ಎಂದು ನ್ಯಾ.ಸಯೀಮ್ ಕಯ್ಯೂಮ್ ಹೇಳಿದ್ದನ್ನು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಶಾ ಅವರಿಗೆ ಜಾಮೀನು ಕೋರಿ ಅವರ ವಕೀಲರು ಶೀಘ್ರವೇ ಹೊಸ ಅರ್ಜಿಯನ್ನು ಸಲ್ಲಿಸಲಿದ್ದಾರೆ ಎಂದು ಹೇಳಿಕೆಯು ತಿಳಿಸಿದೆ.