ಮಂಗಳೂರು: ಹೆಲ್ತ್ ಮಾರ್ಟ್ ಮೆಡಿಕಲ್ ಶುಭಾರಂಭ

ಮಂಗಳೂರು, ಮಾ.6: ನಗರದ ಬಂದರ್ ಕಂದಕ್ ಸಮೀಪದ ನೀರೇಶ್ವಾಲ್ಯ ರಸ್ತೆಯಲ್ಲಿ ನೂತನವಾಗಿ ತೆರೆಯಲ್ಪಟ್ಟ ಹೆಲ್ತ್ ಮಾರ್ಟ್ ಮೆಡಿಕಲ್ ರವಿವಾರ ಶುಭಾರಂಭಗೊಂಡಿತು.
ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ದುಆಗೈದರು. ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಮತ್ತು ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವಾ ಮೆಡಿಕಲ್ ಉದ್ಘಾಟಿಸಿದರು.
ಮೆಡಿಕಲ್‌ನ ಮಾಲಕ ಶರೀಫ್ ಕಂದಕ್ ಮಾತನಾಡಿ, ಈಗಾಗಲೆ ಹಳೆಯಂಗಡಿಯಲ್ಲಿ ಹೆಲ್ತ್ ಮಾರ್ಟ್ ಮೆಡಿಕಲ್ ತೆರೆದಿರುವೆ. ಆದರೆ ನಾನು ಹುಟ್ಟಿದ ಈ ಊರಲ್ಲಿ ಒಂದೇ ಒಂದು ಮೆಡಿಕಲ್ ಇಲ್ಲದ್ದನ್ನು ಮನಗಂಡು ಇದೀಗ ಸಮಾಜ ಸೇವೆಯ ಉದ್ದೇಶದಿಂದ ಹೆಲ್ತ್ ಮಾರ್ಟ್ ಮೆಡಿಕಲ್‌ನ ಎರಡನೆ ಬ್ರಾಂಚ್ ತೆರೆಯಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ಅಬ್ದುಲ್ಲತೀಫ್ ಕಂದಕ್, ಮಿಸ್ಬಾಹ್ ನಾಲೆಡ್ಜ್ ಫೌಂಡೇಶನ್‌ನ ಅಧ್ಯಕ್ಷ ಹಾಜಿ ಮುಮ್ತಾಝ್ ಅಲಿ, ಕೃಷ್ಣಾಪುರ ಬದ್ರಿಯಾ ಜುಮಾ ಮಸ್ಜಿದ್‌ನ ಮುದರ್ರಿಸ್ ಮೌಲಾನಾ ಫಾರೂಕ್ ಸಖಾಫಿ, ಬೋಳಾರ ರೊಝಾರಿಯೊ ಕೆಥಡ್ರಾಲ್‌ನ ಧರ್ಮಗುರು ಫಾ. ಆಲ್ಫ್ರೆಡ್ ಜೆ.ಪಿಂಟೋ, ಕಂದಕ್ ಬದ್ರಿಯಾ ಜುಮಾ ಮಸ್ಜಿದ್‌ನ ಖತೀಬ್ ವೌಲಾನಾ ಶೇಖ್ ಅಬ್ದುಲ್ಲಾ ಮುಸ್ಲಿಯಾರ್, ಅಲ್ ಅಝ್ಹರಿಯಾ ಮದ್ರಸದ ಮುದರ್ರಿಸ್ ವೌಲಾನಾ ಹೈದರ್ ಮದನಿ, ಡಾ. ನಿಹಾಲ್ ದಲ್ಕಜೆ, ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಹನುಮಂತ ಕಾಮತ್, ಬೆಂಗರೆ ಮಹಾಜನ ಸಭಾದ ಮಾಜಿ ಅಧ್ಯಕ್ಷ ಮೋಹನ್ ಬೆಂಗರೆ, ಮೊಯ್ದಿನ್ ಉಸ್ಮಾನ್, ಯೂಸುಫ್ ಕರ್ಮಾರ್ ಉಪಸ್ಥಿತರಿದ್ದರು.













