ಮಾ.16-20: ಮಲಾರ್ ಅರಸ್ತಾನ ಮಖಾಂ ಉರೂಸ್
ಮಂಗಳೂರು, ಮಾ.6: ಪಾವೂರು ಗ್ರಾಮದ ಅಲ್-ಮುಬಾರಕ್ ಜುಮಾ ಮಸ್ಜಿದ್ ಹಾಗೂ ಅರ್ರಿಫಾಯಿಯಾ ನುಸ್ರತುಲ್ ಮುಸ್ಲಿಮೀನ್ ಅಸೋಸಿಯೇಶನ್ (ರಿ) ಅರಸ್ತಾನ ಮಲಾರ್ ಇದರ 46ನೇ ವಾರ್ಷಿಕೋತ್ಸವದ ಅಂಗವಾಗಿ ಸ್ವಲಾತ್ ಮಜ್ಲಿಸ್, ರಿಫಾಯಿ ರಾತೀಬ್, ಮಜ್ಲಿಸುನ್ನೂರು ಆಧ್ಯಾತ್ಮಿಕ ಮಜ್ಲಿಸ್ ಹಾಗೂ 4 ದಿವಸಗಳ ಧಾರ್ಮಿಕ ಉಪನ್ಯಾಸ ಮತ್ತು ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮವು ಮಾ.16ರಿಂದ 20ರವರೆಗೆ ಅಲ್-ಮುಬಾರಕ್ ಜುಮಾ ಮಸೀದಿಯ ವಠಾರದಲ್ಲಿ ಜಮಾಅತ್ ಅಧ್ಯಕ್ಷ ಹಾಮದ್ ಅಲ್ತಾಫ್‌ರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮದ ಉದ್ಘಾಟನೆಯು ಮಾ.16ರಂದು ಇಶಾ ನಮಾಝಿನ ಬಳಿಕ ನಡೆಯಲಿದ್ದು, ದ.ಕ. ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಸಲಾಲ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಶರಫುದ್ಧೀನ್ ತಂಙಳ್ ಫರೀದ್ ನಗರ ದುಆಗೈಯುವರು. ಮಸೀದಿಯ ಖತೀಬ್ ಅಹ್ಮದ್ ನಾಸಿರಿ ಅಝ್ಹರಿ ಕುಂಜತ್ತೂರು ಮತಪ್ರವಚನ ನೀಡಲಿದ್ದಾರೆ. ಮಾ.17ರಂದು ಯು.ಕೆ ಮುಹಮ್ಮದ್ ಹನೀಫ್ ನಿಝಾಮಿ ಕಾಸರಗೋಡು, ಮಾ.18ರಂದು ಅಬ್ದುಲ್ ಹಕೀಮ್ ಮದನಿ ಪಾಂಡವರಕಲ್ಲು, ಮಾ. 19ರಂದು ಅಶ್ರಫ್ ರಹ್ಮಾನಿ ಚೌಕಿ ಮತಪ್ರವಚನ ನೀಡಲಿದ್ದಾರೆ.
ಮಾ.20ರಂದು ಅಸರ್ ನಮಾಝಿನ ಬಳಿಕ ಸ್ವಲಾತ್ ಮಜ್ಲಿಸ್, ಮಗ್ರಿಬ್ ನಮಾಝಿನ ಬಳಿಕ ರಿಫಾಯಿ ರಾತೀಬ್ ನಡೆಯಲಿದೆ. ಇಶಾ ನಮಾಝಿನ ಬಳಿಕ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಯ್ಯಿದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಮಲಪ್ಪುರಂ ದುಆ ಹಾಗೂ ಅಶ್ಛಾಖ್ ಫೈಝಿ ನಂದಾವರ ಮತಪ್ರವಚನ ನೀಡಲಿದ್ದಾರೆ.
ಅತಿಥಿಗಳಾಗಿ ರಾಜ್ಯ ವಿಧಾನ ಸಭೆಯ ವಿಪಕ್ಷ ಉಪ ನಾಯಕ ಯು.ಟಿ ಖಾದರ್, ಅಲ್-ಮುಬಾರಕ್ ಜುಮಾ ಮಸ್ಜಿದ್‌ಮ ಮಾಜಿ ಅಧ್ಯಕ್ಷರಾದ ಮುಹಮ್ಮದ್ ಮೋನು ಮತ್ತು ಹಂಝ ಮಲಾರ್, ಗ್ರಾಪಂ ಉಪಾಧ್ಯಕ್ಷ ಅನ್ಸಾರ್ ಇನೋಳಿ, ಗ್ರಾಪಂ ಸದಸ್ಯರಾದ ರಿಝ್ವಾನ್ ಟಿ, ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಜಮಾಅತ್ ಪ್ರಧಾನ ಕಾರ್ಯದರ್ಶಿ ಶಮೀರ್ ಟಿಪ್ಪುನಗರ ತಿಳಿಸಿದ್ದಾರೆ.