ದ.ಕ.ಜಿಲ್ಲಾ ಮಟ್ಟದ ಎಸ್ಸಿ-ಎಸ್ಟಿ ಕ್ರೀಡಾಕೂಟ

ಮಂಗಳೂರು, ಮಾ.6: ದ.ಕ ಜಿಲ್ಲಾಡಳಿತ, ಜಿಪಂ., ಮಂಗಳೂರು ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕ್ರೀಡಾಕೂಟವು ರವಿವಾರ ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರ ದೈನಂದಿನ ಕೆಲಸಗಳ ಒತ್ತಡದ ನಡುವೆ ದೈಹಿಕ ಚಟುವಟಿಕೆಗೆ ಸಮಯ ಮೀಸಲಿಡುವುದು ಅತ್ಯಗತ್ಯ.ದೇಶ ಸದೃಢವಾಗಿರಬೇಕಾದರೆ ಆರೋಗ್ಯವಂತರಾದ ಸದೃಢ ಜನರು ಕೂಡ ಅಗತ್ಯವಿದೆ. ಬುದ್ಧಿ ಚುರುಕಾಗಿರಬೇಕಾದರೆ ದೈಹಿಕ ಆರೋಗ್ಯವೂ ಅಗತ್ಯ ಎಂದರು.
ನಿವೃತ್ತ ದೈ.ಶಿ.ನಿರ್ದೇಶಕ ಪುರುಷೋತ್ತಮ ಪದಕಣ್ಣಾಯ, ರಾಷ್ಟ್ರೀಯ ಹಾಕಿ ಆಟಗಾರ್ತಿ ನಿಹಾ, ಕ್ರೀಡಾಪಟು ಶೋಭಾರಾಣಿ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, ಕಾರ್ಪೊರೇಟರ್ ಸಂಧ್ಯಾ ಆಚಾರ್, ಕ್ರೀಡಾಂಗಣ ಸಮಿತಿಯ ಸದಸ್ಯೆ ಸಂಧ್ಯಾ ವೆಂಕಟೇಶ್, ಮಂಗಳೂರು ವಿವಿ ದೈ.ಶಿ.ನಿರ್ದೇಶಕ ಹರಿದಾಸ್ ಕೂಳೂರು, ಎಸ್ಸಿ-ಎಸ್ಟಿ ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಮೋಹನಾಂಗಯ್ಯ ಸ್ವಾಮಿ, ಸಹಾಯಕ ಕ್ರೀಡಾಧಿಕಾರಿ ವಿನೋದ್ ಕುಮಾರ್ ಉಪಸ್ಥಿತರಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಆ್ಯತ್ಲೆಟಿಕ್ ತರಬೇತುದಾರ ಡಾ. ವಸಂತ್ ಕಾರ್ಯಕ್ರಮ ನಿರೂಪಿಸಿದರು.








