ಶೆಲ್ ದಾಳಿ, ಸಾರಿಗೆ ಕೊರತೆಯಿಂದ ತೆರವು ಕಾರ್ಯಾಚರಣೆಗೆ ಅಡ್ಡಿಯಾಗುತ್ತದೆ: ವಿದೇಶಾಂಗ ವ್ಯವಹಾರ ಸಚಿವಾಲಯ

ಹೊಸದಿಲ್ಲಿ, ಮಾ.6: ಮುಂದುವರಿದ ಶೆಲ್ ದಾಳಿ ಹಾಗೂ ಸಾರಿಗೆ ಸೌಲಭ್ಯದ ಕೊರತೆ ಉಕ್ರೇನ್‌ನ ಸುಮಿ ವಲಯದಿಂದ ಭಾರತೀಯ ವಿದ್ಯಾರ್ಥಿಗಳನ್ನು ತೆರವು ಗೊಳಿಸಲು ತೀವ್ರ ಅಡ್ಡಿ ಉಂಟು ಮಾಡುತ್ತಿದೆ ಎಂದು ವಿದೇಶಾಂಗ ವ್ಯವಹಾ ರಗಳಸಚಿವಾಲಯ (ಎಂಇಎ) ಶನಿವಾರ ತಿಳಿಸಿದೆ.
ಯುದ್ಧಗ್ರಸ್ತ ಉಕ್ರೇನ್‌ನಿಂದ ಇದುವರೆಗೆ 63 ವಿಮಾನಗಳಲ್ಲಿ 13,300 ಭಾರತೀಯರನ್ನು ಭಾರತಕ್ಕೆ ಹಿಂದೆ ರೆ ತರಲಾಗಿದೆ ಎಂದು ಅದು ತಿಳಿಸಿದೆ.
‘‘ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಭಾರತಕ್ಕೆ ವಾಪಸ್ ಕರೆ ತರಲು ಮುಂದಿನ 24 ಗಂಟೆಗಳಲ್ಲಿ 13 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಈಗ ಮುಖ್ಯವಾಗಿ ಸುಮಿಯಿಂದ ಭಾರತೀಯ ವಿದ್ಯಾರ್ಥಿಗಳನ್ನು ತೆರವುಗೊಳಿಸಲು ಗಮನ ಕೇಂದ್ರೀಕರಿಸಲಾಗಿದೆ. ಇದಕ್ಕೆ ಹಲವು ಮಾರ್ಗಗಳನ್ನು ಕಂಡುಕೊಳ್ಳಲಾಗುತ್ತಿದೆ ಎಂದು ಅದು ಹೇಳಿದೆ.
‘‘ಉಕ್ರೇನ್‌ನ ಸುಮಿಯಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳ ಕುರಿತು ನಾವು ತೀವ್ರ ಆತಂಕಗೊಂಡಿದ್ದೇವೆ. ನಮ್ಮ ವಿದ್ಯಾರ್ಥಿಗಳಿಗೆ ಸುರಕ್ಷಿತ ಕಾರಿಡಾರ್ ರೂಪಿಸಲು ಕೂಡಲೇ ಕದನ ವಿರಾಮ ಘೋಷಿಸುವಂತೆ ನಾವು ಹಲವು ವಿಧಾನದಲ್ಲಿ ರಶ್ಯ ಹಾಗೂ ಉಕ್ರೇನ್ಸರಕಾರವನ್ನು ಒತ್ತಾಯಿಸಿದ್ದೇವೆ’’ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಈ ಹಿಂದೆ ಟ್ವೀಟ್ ಮಾಡಿದ್ದರು.
ಈ ನಡುವೆ, ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಪಿಸೋಚಿನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ನೆರವು ನೀಡಲು ಭಾರತ ಸರಕಾರ ನಿಯೋಜಿಸಿದ 3 ಬಸ್‌ಗಳು ಈಗಾಗಲೇ ಅಲ್ಲಿಗೆ ತಲುಪಿವೆ. ಅವು ಶೀಘ್ರದಲ್ಲಿ ಪಶ್ಚಿಮಕ್ಕೆ ಸಾಗಲಿವೆ. ಇನ್ನೂ ಎರಡು ಬಸ್‌ಗಳು ಶೀಘ್ರದಲ್ಲಿ ಕಾರ್ಯಾಚರಣೆಯಲ್ಲಿ ಸೇರಿಕೊಳ್ಳಲಿವೆ. ನಮ್ಮ ಎಲ್ಲ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದೊಯ್ಯಲಾಗುವುದು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಶನಿವಾರ ಸುಮಿಯಲ್ಲಿರುವ ಸುಮಿ ಸರಕಾರಿ ವಿಶ್ವವಿದ್ಯಾನಿಲಯದಲ್ಲಿ ಸಿಲುಕಿಕೊಂಡಿರುವ 800 ವಿದ್ಯಾರ್ಥಿಗಳ ದೊಡ್ಡ ಗುಂಪೊಂದು ಭಾರತ ಸರಕಾರ ನಮ್ಮನ್ನು ಸುರಕ್ಷಿತವಾಗಿ ತೆರವುಗೊಳಿಸುತ್ತದೆ ಎಂದು ನಾವು ದೀರ್ಘ ಕಾಲ ಕಾಯುವ ಸ್ಥಿತಿಯಲ್ಲಿ ಇರಲಿಲ್ಲ. ಆದುದರಿಂದ ನಾವು ಜೀವವನ್ನು ಅಪಾಯಕ್ಕೆ ಒಡ್ಡಿ ರಶ್ಯದತ್ತ ನಡೆದುಕೊಂಡು ಹೋಗಲಿದ್ದೇವೆ ಎಂದು ತಿಳಿಸಿದೆ. ವೀಡಿಯೊವೊಂದರಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ನಿಂತ ವಿದ್ಯಾರ್ಥಿನಿಯೊಬ್ಬರು, ‘‘ನಾವು ಸುಮಿ ಸರಕಾರಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು.
ಇದು 10ನೇ ದಿನದ ಯುದ್ಧ. ಎರಡು ನಗರಗಳಲ್ಲಿ ಮಾನವೀಯ ಕಾರಿಡಾರ್ ತೆರೆಯಲು ರಶ್ಯ ಕದನ ವಿರಾಮ ಘೋಷಿಸಿದೆ ಎಂಬ ಸುದ್ದಿಯನ್ನು ನಾವು ತಿಳಿದಿದ್ದೇವೆ. ಇಂದು ಬೆಳಗ್ಗಿನಿಂದ ನಾವು ಬಾಂಬ್, ಶೆಲ್ ದಾಳಿ ಹಾಗೂ ವಿಮಾನಗಳ ಹಾರಾಟದ ಶಬ್ದವನ್ನೇ ನಿರಂತರ ಕೇಳುತ್ತಿದ್ದೇವೆ. ನಮಗೆ ಭಯವಾಗುತ್ತಿದೆ. ನಾವು ಸಾಕಷ್ಟು ಕಾದಿದ್ದೇವೆ. ಇನ್ನು ಕಾಯಲು ಸಾಧ್ಯವಿಲ್ಲ.
ನಾವು ಜೀವ ಒತ್ತೆ ಇರಿಸಿ ಗಡಿಯತ್ತ ತೆರಳುತ್ತಿದ್ದೇವೆ. ಒಂದು ವೇಳೆ ನಮಗೆ ಏನಾದರೂ ಆದರೆ, ಸಂಪೂರ್ಣ ಜವಾಬ್ದಾರಿ ಸರಕಾರ ಹಾಗೂ ರಾಯಭಾರ ಕಚೇರಿಯದ್ದು. ಒಂದು ವೇಳೆ ನಮ್ಮಲ್ಲಿ ಯಾರಿಗಾದರೂ ಒಬ್ಬರಿಗೆ ಏನಾದರೂ ಆದರೆ, ಮಿಷನ್ ಗಂಗಾ ಅತಿ ದೊಡ್ಡ ವಿಫಲತೆ ಎಂದು ಹೇಳಬೇಕಾಗುತ್ತದೆ’’ ಎಂದು ಹೇಳುವುದು ಕಂಡು ಬಂದಿದೆ.
ಭಾರತೀಯರಿಗೆ ನೆರವಾಗದ ‘ಮಾನವೀಯ ಕಾರಿಡಾರ್’
ರಶ್ಯ ಶನಿವಾರ ಎರಡು ನಗರಗಳಲ್ಲಿ ಕದನ ವಿರಾಮ ಘೋಷಿಸಿದೆ. ಅಲ್ಲದೆ, ಮರಿವುಪೋಲ್ ಹಾಗೂ ವೋಲ್ನೊನಾಖಾ ನಗರದಿಂದ ನಾಗರಿಕರು ತೆರಳಲು ‘ಮಾನವೀಯ ಕಾರಿಡರ್’ ಆರಂಭಿಸಲಾಗಿದೆ ಎಂದು ಹೇಳಿದೆ. ಆದರೆ, ಪೂರ್ವ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದ ಭಾರತೀಯರು ಈ ‘ಮಾನವೀಯ ಕಾರಿಡಾರ್’ ಅನ್ನು ಬಳಸಲು ಸಾಧ್ಯವಾಗುತ್ತಿಲ್ಲ.
ರಶ್ಯ ಕದನ ವಿರಾಮ ಉಲ್ಲಂಘಿಸಿದೆ ಹಾಗೂ ಶೆಲ್ ದಾಳಿ ಮುಂದುವರಿಸಿದೆ. ಆದುದರಿಂದ ನಾಗರಿಕರನ್ನು ಸುರಕ್ಷಿತವಾಗಿ ತೆರವುಗೊಳಿಸಲು ‘ಮಾನವೀಯ ಕಾರಿಡರ್’ ಆರಂಭಿಸಲುಸಾಧ್ಯವಿಲ್ಲ ಎಂದು ಉಕ್ರೇನ್ ಹೇಳಿದೆ.
ಕೆಲವು ಭಾರತೀಯರು ಮಾತ್ರ ಉಕ್ರೇನ್‌ನ ಪಶ್ಚಿಮ ಗಡಿಗೆ ತೆರಳಲು ಸಾಧ್ಯವಾಗಿದೆ. ರಶ್ಯದೊಂದಿಗಿನ ಪೂರ್ವ ಗಡಿಗೆ ತೆರಳಲು ಸಾಧ್ಯವಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ.







