16 ಚಿನ್ನದ ಪದಕಗಳನ್ನು ಗೆದ್ದು ದಾಖಲೆ ಬರೆದ ಬುಶ್ರಾ ಮತೀನ್ ರನ್ನು ಅಭಿನಂದಿಸಿದ ಸ್ವರಾ ಭಾಸ್ಕರ್
" ಶೈಕ್ಷಣಿಕ ಸಾಧನೆ ಮತ್ತು ಹಿಜಾಬ್ ಪ್ರತ್ಯೇಕವಾಗಿಲ್ಲ"

Photo: Twitter
ಹೊಸದಿಲ್ಲಿ: ಎಸ್ಎಲ್ಎನ್ ಕಾಲೇಜಿನ ವಿದ್ಯಾರ್ಥಿನಿ ರಾಯಚೂರಿನ ಬುಶ್ರಾ ಮತೀನ್ ವಿಟಿಯು ಇತಿಹಾಸದಲ್ಲೇ ೧೬ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಹಿಜಾಬ್ಧಾರಿ ವಿದ್ಯಾರ್ಥಿನಿಯ ಈ ಸಾಧದನೆಗೆ ದೇಶದಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು. ಇದೀಗ ಈ ಕುರಿತು ಸಾಮಾಜಿಕ ಕಾರ್ಯಕರ್ತೆ ಹಾಗೂ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಟ್ವೀಟ್ ಮಾಡಿ, ಅಭಿನಂದಿಸಿದ್ದಾರೆ.
ತಮ್ಮ ಖಾತೆಯಲ್ಲಿ ಬುಶ್ರಾ ಮತೀನ್ ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೊವನ್ನು ಟ್ವೀಟ್ ಮಾಡಿದ ಅವರು, "ಅಭಿನಂದನೆಗಳು ಬುಶ್ರಾ... ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಸಾಧನೆ ಹಾಗೂ #ಹಿಜಾಬ್ ಪರಸ್ಪರ ಪ್ರತ್ಯೇಕವಾಗಿಲ್ಲ ಎನ್ನುವುದು ಇಲ್ಲಿ ಸ್ಪಷ್ಟವಾಗಿದೆ. ನಮ್ಮ ಪೂರ್ವಾಗ್ರಹಗಳಿಂದ ನಾವು ‘ವಿಮೋಚನೆ’ ಪಡೆಯಬೇಕೇ?" ಎಂದು ಅವರು ಟ್ವೀಟ್ ಮಾಡಿದ್ದಾರೆ.
Congratulations Bushra!
— Swara Bhasker (@ReallySwara) March 6, 2022
Apparently academic excellence & achievement and #Hijab are not mutually exclusive! Do we need to be ‘liberated’ from our prejudices https://t.co/sGWCC5UqhF