“ಯುದ್ಧದಲ್ಲಿ ಒಳಗೊಂಡಿರುವವರನ್ನು ನಾವು ಮರೆಯುವುದಿಲ್ಲ, ಕ್ಷಮಿಸುವುದಿಲ್ಲ": ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ

ಕೀವ್: ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ನೂರಾರು ಜನರನ್ನು ಬಲಿತೆಗೆದುಕೊಂಡ ಯುದ್ಧದಲ್ಲಿ "ದುಷ್ಕೃತ್ಯಗಳನ್ನು ಎಸಗಿದ" ಪ್ರತಿಯೊಬ್ಬರನ್ನು ಶಿಕ್ಷಿಸುವುದಾಗಿ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರತಿಜ್ಞೆ ಮಾಡಿದ್ದಾರೆ.
ಯುದ್ಧದಲ್ಲಿ ಒಳಗೊಂಡಿರುವವರನ್ನು "ನಾವು ಮರೆಯುವುದಿಲ್ಲ, ಕ್ಷಮಿಸುವುದಿಲ್ಲ" ಎಂದು ಝೆಲೆನ್ಸ್ಕಿ ಹೇಳಿದರು.
"ಇದು ಕೊಲೆ, ಉದ್ದೇಶಪೂರ್ವಕ ಕೊಲೆ’’ ಎಂದ ಝೆಲೆನ್ಸ್ಕಿ ಸೋಮವಾರದಿಂದ ಹೆಚ್ಚಿನ ಶೆಲ್ ದಾಳಿ ನಡೆಯಲಿದೆ ಎಂಬ ಎಚ್ಚರಿಕೆಯನ್ನು ನೀಡಿದರು.
"ನಾವು ಕ್ಷಮಿಸುವುದಿಲ್ಲ, ನಾವು ಮರೆಯುವುದಿಲ್ಲ, ನಮ್ಮ ನೆಲದ ಮೇಲೆ ನಡೆದ ಈ ಯುದ್ಧದಲ್ಲಿ ದೌರ್ಜನ್ಯ ಎಸಗಿದ ಪ್ರತಿಯೊಬ್ಬರನ್ನು ಶಿಕ್ಷಿಸುತ್ತೇವೆ. ಸಮಾಧಿಯನ್ನು ಹೊರತುಪಡಿಸಿ ಈ ಭೂಮಿಯ ಮೇಲೆ ಯಾವುದೇ ಶಾಂತ ಸ್ಥಳವಿಲ್ಲ’’ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
Next Story





