ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜಿನಿಂದ ಸ್ವಚ್ಛತಾ ಕಾರ್ಯಕ್ರಮ
ಮಂಗಳೂರು, ಮಾ.7: ನಗರದ ಫಾದರ್ ಮುಲ್ಲರ್ ನಸಿರ್ಂಗ್ ಕಾಲೇಜಿನ ಸ್ವಚ್ಛ ಭಾರತ ಘಟಕವು, ಸಮುದಾಯ ಆರೋಗ್ಯ ಶುಶ್ರೂಷ ವಿಭಾಗ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ವನ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಸಹಯೋಗದಲ್ಲಿ ಸ್ವಚ್ಛ ಮಂಗಳೂರು ಪ್ರಚಾರ ಹಾಗೂ ಶ್ರಮದಾನವು ರವಿವಾರ ನಡೆಯುತು.
ಸ್ವಚ್ಛ ಭಾರತ ಘಟಕದ ಅಧ್ಯಕ್ಷೆ ಪ್ರಿಯಾ ಪಿರೇರಾ, ವನ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕ ಜೀತ್ ಮಿಲಾನ್ ರೊಚ್ ಅವರ ಸಹಾಯದೊಂದಿಗೆ ನಗರದ ಪುರಭವನದ ಸುತ್ತಮುತ್ತ ಶ್ರಮದಾನ ಮತ್ತು ಪ್ರಚಾರ ಕಾರ್ಯಕ್ರಮ ನಡೆಸಲಾಯಿತು. ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸಿಮ ರಸ್ತೆ ಬದಿಯ ವ್ಯಾಪಾರಿಗಳಿಗೆ ಕಸ ವಿಲೇವಾರಿಯ ಬಗ್ಗೆ ಮಾಹಿತಿ ನೀಡಿದರು.
Next Story





