ಉಡುಪಿ ಜಿಲ್ಲೆಯಲ್ಲಿ ಒಂದಕ್ಕಿಳಿದ ಕೋವಿಡ್ ಪಾಸಿಟಿವ್
![ಉಡುಪಿ ಜಿಲ್ಲೆಯಲ್ಲಿ ಒಂದಕ್ಕಿಳಿದ ಕೋವಿಡ್ ಪಾಸಿಟಿವ್ ಉಡುಪಿ ಜಿಲ್ಲೆಯಲ್ಲಿ ಒಂದಕ್ಕಿಳಿದ ಕೋವಿಡ್ ಪಾಸಿಟಿವ್](https://www.varthabharati.in/sites/default/files/images/articles/2022/03/7/327254-1646660498.jpg)
ಉಡುಪಿ, ಮಾ.7: ಜಿಲ್ಲೆಯಲ್ಲಿ ಇಂದು ಪರೀಕ್ಷೆಗೊಳಪಟ್ಟ 799 ಮಂದಿ ಯಲ್ಲಿ ಕೇವಲ ಒಬ್ಬರಲ್ಲಿ ಮಾತ್ರ ಸೋಂಕು ಪತ್ತೆಯಾಗಿದೆ. ದಿನದಲ್ಲಿ ಏಳು ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದರೆ, ಚಿಕಿತ್ಸೆಯಲ್ಲಿರುವವರ ಸಂಖ್ಯೆ 42ಕ್ಕಿಳಿದಿದೆ.
ಇಂದು ಪಾಸಿಟಿವ್ ಬಂದವರು ಮಹಿಳೆಯಾಗಿದ್ದು, ಇವರು ಉಡುಪಿ ಯವರು. ಅವರು ತಮ್ಮ ಮನೆಯಲ್ಲೇ ಚಿಕಿತ್ಸೆ ಪಡೆಯುತಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲಿ ಒಬ್ಬರು ಮಾತ್ರ ಸದ್ಯ ಆಸ್ಪತ್ರೆಯಲ್ಲಿದ್ದು, ಅವರಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ದಿನದಲ್ಲಿ ಏಳು ಮಂದಿ ರೋಗಮುಕ್ತರಾಗಿದ್ದು, ಕೊರೋನದಿಂದ ಜ.1ರ ನಂತರ ಚೇತರಿಸಿಕೊಂಡವರ ಸಂಖ್ಯೆ 18467ಕ್ಕೇರಿದೆ. ಜಿಲ್ಲೆಯ ಒಟ್ಟು 799 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜ.1ರ ಬಳಿಕ ಜಿಲ್ಲೆಯಲ್ಲಿ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 18,419ಕ್ಕೇರಿದೆ.
2027 ಮಂದಿಗೆ ಲಸಿಕೆ : ಜಿಲ್ಲೆಯಲ್ಲಿ ಇಂದು ಒಟ್ಟು 2027 ಮಂದಿ ಕೋವಿಡ್ಗಿರುವ ಲಸಿಕೆಯನ್ನು ಪಡೆದಿದ್ದಾರೆ. 60 ವರ್ಷ ಮೇಲಿನ ಹಿರಿಯ ನಾಗರಿಕರು 368 ಮಂದಿ ಸೇರಿದಂತೆ ಒಟ್ಟು 399 ಮಂದಿ ಮುನ್ನೆಚ್ಚರಿಕೆ ಒಂದು ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಉಳಿದಂತೆ 74 ಮಂದಿ ಮೊದಲ ಡೋಸ್ ಹಾಗೂ 1554 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. 15-18 ವರ್ಷದೊಳಗಿನ 29 ಮಂದಿ ಮೊದಲ ಡೋಸ್ ಹಾಗೂ 573 ಮಂದಿ ಎರಡನೇ ಡೋಸ್ ಪಡೆದಿದ್ದಾರೆ.