ಮಾ.8ರಿಂದ ಮುಹಿಮ್ಮಾತ್- ತ್ವಾಹಿರುಲ್ ಅಹ್ದಲ್ ತಂಙಳ್ ಉರೂಸ್
ಕಾಸರಗೋಡು; ಮುಹಿಮ್ಮಾತ್ ಸ್ಥಪಕರೂ ಆದ ತ್ವಾಹಿರುಲ್ ಅಹ್ದಲ್ ತಂಙಳ್‌ರವರ 16ನೇ ಉರೂಸ್ ಮಾರ್ಚ್ 8ರಂದು ಮಖಾಂನಲ್ಲಿ ನಡೆಯುವ ಝಿಯಾರತಿನೊಂದಿಗೆ ಆರಂಭವಾಗಲಿದೆ. ಮಾರ್ಚ್ 13 ಸಂಜೆ ಸನದುದಾನ ಮತ್ತು ಆಧ್ಯಾತ್ಮಿಕ ಸಮ್ಮೇಳನದೊಂದಿಗೆ ಸಮಾಪ್ತಿಗೊಳ್ಳಲಿದೆ.
6 ದಿನಗಳಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಮುಖ ವಿದ್ವಾಂಸರೂ ನೇತಾರರೂ ಭಾಗವಹಿಸುವರು. ಮಂಗಳವಾರ ಬೆಳಗ್ಗೆ ನೂರುಲ್ ಉಲಮಾ ಮಖಾಂ, ಎಟ್ಟಿಕ್ಕುಳಂ ತಾಜುಲ್ ಉಲಮಾ ಮಖಾಂ, ಮಾಟ್ಟೂಲ್ಳಿಯಾಉಲ್ ಮುಸ್ತಫಾ ಮಖಾಂಗಳ ಝಿಯಾರತ್‌ಗಳಿಗೆ ಸಯ್ಯಿದ್ ಇಬ್ರಾಹೀಂ ಹಾದಿ ಸಯ್ಯಿದ್ ಮುಹಮ್ಮದ್ ಜುನೈದ್ ಬುಖಾರಿ, ಸಯ್ಯಿದ್ ಹಾಮಿದ್ ಅನ್ವರ್ ನೇತೃತ್ವ ನೀಡಲಿದ್ದಾರೆ.
ಸಂಜೆ 3 ಗಂಟೆಗೆ ಅಹ್ದಲ್ ಮಖಾಂ ಝಿಯಾರತಿಗೆ ಸಯ್ಯಿದ್ ಪಿ ಎಸ್ ಆಟ್ಟಕ್ಕೋಯ ತಂಙಳ್ ಪಂಜಿಕ್ಕಲ್ ನೇತೃತ್ವ ನೀಡಲಿದ್ದಾರೆ. ಖತ್ಮುಲ್ ಖುರ್‌ಆನ್ ಆರಂಭಿಸುವ ಕಾರ್ಯಕ್ರಮಕ್ಕೆ ಸಯ್ಯಿದ್ ಕುಂಞಿಕ್ಕೋಯ ತಂಙಳ್ ಮುಟ್ಟಂ ನೇತೃತ್ವ ನೀಡಲಿದ್ದಾರೆ. ಸಯ್ಯಿದ್ ಕೆ ಎಸ್ ಆಟ್ಟಕ್ಕೋಯ ತಂಙಳ್ ಕುಂಬೋಳ್ ಉರೂಸ್ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಜಲಾಲುದ್ದೀನ್ ಬುಖಾರಿ ಉದ್ಬೋದನೆ ನಡೆಸುವರು. ರಾತ್ರಿ 8ಕ್ಕೆ ಧಾರ್ಮಿಕ ಪ್ರವಚನ ಉದ್ಘಾಟನೆಯನ್ನು ಅತಾಉಲ್ಲಾ ತಂಙಳ್ ಉದ್ಯಾವರ ನಿರ್ವಹಿಸಲಿದ್ದಾರೆ. ಡಾ. ಮುಹಮ್ಮದ್ ಫಾರೂಖ್ ನಈಮಿ ಕೊಲ್ಲಂ ಪ್ರಬಾಷಣ ನಡೆಸಲಿದ್ದಾರೆ.
ಮಾರ್ಚ್ 12ರ ತನಕ ರಾತ್ರಿ 8ಕ್ಕೆ ನಡೆಯುವ ಧಾರ್ಮಿಕ ಪ್ರವಚನದಲ್ಲಿ ಕೂಟಂಬಾರ ಅಬ್ದುಲ್ ರಹ್ಮಾನ್ ದಾರಿಮಿ, ನೌಫಲ್ ಸಖಾಫಿ ಕಳಸ, ಅನಸ್ ಅಮಾನಿ ಕಾಮಿಲ್ ಸಖಾಫಿ ಪುಷ್ಪಗಿರಿ ಪ್ರಭಾಷಣ ನಡೆಸಲಿದ್ದಾರೆ.
ಆದಿತ್ಯವಾರ ಬೆಳಗ್ಗೆ ಮೌಲಿದ್ ಮಜ್ಲಿಸ್‌ಗೆ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರ ನೆತೃತ್ವ ನೀಡಲಿದ್ದಾರೆ. ಮುಹಮ್ಮದ್ ರಫೀಖ್ ಸಅದಿ ದೇಲಂಪಾಡಿ ಭಾಷಣಗೆಯ್ಯುವರು. ಮಧ್ಯಾಹ್ನ 1.30 ಕ್ಕೆ ಖತಂ ದುಆ ಮಜ್ಲಿಸಿಗೆ ಸಯ್ಯದ್ ಶಹೀರ್ ತಂಙಳ್ ಬಾಖಾರಿ, ಸ್ವಾಲಿಹ್ ಸಅದಿ ತಳಿಪರಂಬ್ ನೇತೃತ್ವ ನೀಡುವರು. ಸಂಜೆ 4:30ಕ್ಕೆ ಮಹ್ಳರತುಲ್ ಬದ್ರಿಯ್ಯಿದೊಂದಿಗೆ ಸನದುದಾನ ಆಧ್ಯಾತ್ಮಿಕ ಸಮ್ಮೇಳನ ಆರಂಭವಾಗಲಿದೆ. ಸಯ್ಯದ್ ಅಲಿ ಬಾಫಖಿ ತಂಙಳ್ ಪ್ರಾರ್ಥನೆ ನಡೆಸಲಿದ್ದಾರೆ. ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್‌ರವರ ಅಧ್ಯಕ್ಷತೆಯಲ್ಲಿ ಸಮಸ್ತ ಅಧ್ಯಕ್ಷರಾದ ರಈಸುಲ್ ಉಲಮಾ ಇ ಸುಲೈಮಾನ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ.
ಸನದುದಾನ ನಿರ್ವಹಿಸಿ ಇಂಡಿಯನ್ ಗ್ಯಾಂಡ್ ಮುಫ್ತಿ ಕಾಂತಪುರಂ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಪ್ರಭಾಷಣ ನಡೆಸಲಿದ್ದಾರೆ. ಸಯ್ಯಿದ್ ಇಬ್ರಾಹಿಂ ಖಲೀಲ್ ಬುಖಾರಿ ತಂಙಳ್ ಹಾಗು ಪೆರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.
ಸಯ್ಯಿದ್ ಮೊಹಮ್ಮದ್ ಇಬ್ರಾಹಿಂ ಪೂಕುಂಜಿ ತಂಙಳ್ ಸೈಯದ್ ತ್ವಾಹ ತಂಗಳ್, ಸೈಯದ್ ಶಿಹಾಬುದ್ದೀನ್ ತಂಙಳ್ ಮುತ್ತನ್ನೂರ್, ಸೈಯದ್ ಮುನೀರುಲ್ ಅಹ್ದಲ್ ತಂಙಳ್ ಎಪಿ ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕೋತ್, ಪಿ ಹೈದ್ರೋಸ್ ಮುಸ್ಲಿಯಾರ್ ಕೊಲ್ಲಂ, ವಿಪಿಎಂ ಫೈಝಿ ವಿಲ್ಲಾಪಲ್ಲಿ, ಹುಸೈನ್ ಸಅದಿ ಕೆ.ಸಿ.ರೋಡ್, ಅಬ್ದುಲ್ ರಶೀದ್ ಝೈನಿ ಕಕ್ಕಿಂಜೆ, ಲತ್ವೀಫ್ ಸಅದಿ ಶಿವಮೊಗ್ಗ, ನಿಝಾಮುದ್ದೀನ್ ಫಾಳಿಲಿ ಕೊಲ್ಲಂ ಹಾಗೂ ಸಿ.ಎನ್.ಜಾಫರ್ ಭಾಷಣ ಮಾಡಲಿದ್ದಾರೆ. ಯನೇಪೋಯ ಅಬ್ದುಲ್ಲಾ ಕುಂಞಿ ಹಾಜಿ ಅವರು ಉಡುಗೊರೆ ನೀಡಲಿದ್ದಾರೆ. ಈ ವರ್ಷ 116 ಹಿಮಮಿ ವಿದ್ವಾಂಸರು ಹಾಗು 27 ಹಾಫಿಳ್‌ಗಳು ಸನದ್ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸೈಯದ್ ಹಸನುಲ್ ಅಹ್ದಲ್ ತಂಙಳ್ (ಉಪಾಧ್ಯಕ್ಷರು, ಮುಹಿಮ್ಮಾತ್), ಬಿ ಎಸ್ ಅಬ್ದುಲ್ಲಾ ಫೈಝಿ (ಪ್ರಧಾನ ಕಾರ್ಯದರ್ಶಿ ಮುಹಿಮ್ಮಾತ್) ಸಿ.ಐ ಅಮೀರಲಿ (ಕೋಶಾಧಿಕಾರಿ, ಮುಹಿಮ್ಮಾತ್)
ಅಬೂಬಕ್ಕರ್ ಕಾಮಿಲ್ ಸಖಾಫಿ (ಪ್ರಧಾನ ಸಂಚಾಲಕರು, ಸ್ವಾಗತ ಸಮಿತಿ), ಸುಲೈಮಾನ್ ಕರಿವೆಲ್ಲೂರು (ಎಸ್.ಎಂ.ಎ ರಾಜ್ಯ ಕಾರ್ಯದರ್ಶಿ), ಅಬ್ದುಲ್ ಖಾದಿರ್ ಸಖಾಫಿ (ಎಸ್ ವೈ ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ), ವೈ.ಎಂ.ಅಬ್ದುಲ್ ರಹ್ಮಾನ್ ಅಹ್ಸನಿ (ಎಸ್.ಎಂ.ಎ ಜಿಲ್ಲಾ ಕಾರ್ಯದರ್ಶಿ), ಅಬ್ದುಲ್ ಖಾದಿರ್ ಸಖಾಫಿ ಮೊಗ್ರಾಲ್ (ಪಿ.ಆರ್ ಕಾರ್ಯದರ್ಶಿ ಮುಹಿಮ್ಮಾತ್), ಮೂಸಾ ಸಖಾಫಿ ಕಳತ್ತೂರು (ಸಂಚಾಲಕರು, ಪ್ರಚಾರ ಸಮಿತಿ) ಉಪಸ್ಥಿತರಿದ್ದರು.







