ಪರಿಷತ್ತಿನಲ್ಲಿ ಪ್ರತಿಧ್ವನಿಸಿದ ಬಿಟ್ ಕಾಯಿನ್ ವಿಚಾರ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.7: ಬಿಟ್ ಕಾಯಿನ್ ಬಹುಕೋಟಿ ಹಗರಣ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ತಿನ ಕಲಾಪದಲ್ಲಿ ಸದಸ್ಯರು ಪ್ರಸ್ತಾಪಿಸಿದರು.
ಸೋಮವಾರ ವಿಧಾನ ಪರಿಷತ್ತಿನ ಕಲಾಪದ ವೇಳೆ ಸಾರ್ವಜನಿಕ ಮಹತ್ವ ವಿಷಯದಡಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಅವರು ಬಿಟ್ ಕಾಯಿನ್ ಹಗರಣ ಕುರಿತು ಆಗಿರುವ ತನಿಖೆ ಪ್ರಗತಿ ಹಾಗೂ ಬೆಳವಣಿಗೆಗಳ ಬಗ್ಗೆ ಮಾಹಿತಿ ಬಯಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಟ್ ಕಾಯಿನ್ ಹಾಗೂ ರಾಜ್ಯ ಸರಕಾರದ ಇ-ಪೆÇೀರ್ಟಲ್ ಹ್ಯಾಕ್ ಪ್ರಕರಣವನ್ನು ರಾಜ್ಯದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ನುಡಿದರು.
ಪ್ರತಿಪಕ್ಷಗಳು ಆರೋಪ ಮಾಡುವಂತೆ ಹಗರಣದಲ್ಲಿ ವಿಐಪಿಗಳು, ಐಪಿಎಸ್ ಅಧಿಕಾರಿಗಳು ಇದ್ದರೆ ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಸಭಾಪತಿ ಅವರಿಗೆ ಕೊಡಿ, ಅದನ್ನು ಆಧರಿಸಿ ನಾವು ತಕ್ಷಣ ತನಿಖೆ ಮಾಡಿಸುತ್ತೇವೆ ಎಂದರು.
ಇದೇ ವಿಚಾರವಾಗಿ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಆಡಳಿತ ಪಕ್ಷದ ಆಯನೂರು ಮಂಜುನಾಥ್, ತೇಜಶ್ವಿನಿಗೌಡ ಮತ್ತಿತರರು ಮಾತನಾಡಿದರು.
Next Story





