ಅಂದರ್ ಬಾಹರ್: ಐವರ ಬಂಧನ
ಕುಂದಾಪುರ, ಮಾ.7: ಉಪ್ಪಿನಕುದ್ರು ಬಾಳೆಬೆಟ್ಟು ಎಂಬಲ್ಲಿ ಮಾ.6ರಂದು ಮಧ್ಯಾಹ್ನ ವೇಳೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಐದು ಮಂದಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬಿಜಾಪುರ ಮೂಲದ ಮಹೇಶ್ ನಾಗರಾಳ, ಕುಂದಾಪುರದ ರಾಘವೇಂದ್ರ, ಕುಮಾರ ಉಪ್ಪಿನಕುದ್ರು, ಕನ್ಯಾನದ ರಾಘವೇಂದ್ರ, ರಾಜೇಶ್ ಉಪ್ಪಿನಕುದ್ರು ಬಂಧಿತ ಆರೋಪಿಗಳು. ಇವರಿಂದ 950ರೂ. ನಗದು ವಶಪಡಿಸಿ ಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story