ಮಂಗಳೂರು, ಮಾ.7: ನಗರದ ದಕ್ಕೆಯಲ್ಲಿ ಪಾರ್ಕ್ ಮಾಡಲಾದ ಬೈಕನ್ನು ಕಳವುಗೈದ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂದರು ಪೇರಿ ಪ್ಯಾಯಿಂಟ್ ಬಳಿಯ ಟಿಕೆಟ್ ಕೌಂಟರ್ ಮುಂದೆ ಮೋಹನ್ ಕುಮಾರ್ ಬೈಕನ್ನು ಪಾರ್ಕ್ ಮಾಡಿ ಹ್ಯಾಂಡ್ ಲಾಕ್ ಮಾಡಿ ಹೋಗಿದ್ದರು. ಮರಳಿ ಬಂದಾಗ ಬೈಕ್ ಕಳವಾಗಿತ್ತು. ಇದರ ಮೌಲ್ಯ 42 ಸಾವಿರ ರೂ. ಎಂದು ಅಂದಾಜಿಸಲಾಗಿದೆ.