ಕಾರ್ಕಳ ಉತ್ಸವದಲ್ಲಿ ಸಿದ್ಧಗೊಳ್ಳುತ್ತಿದೆ ಮಾದರಿ ಅರಣ್ಯ

ಕಾರ್ಕಳ: ಕಾರ್ಕಳ ಉತ್ಸವದಲ್ಲಿ ಅರಣ್ಯ ಇಲಾಖೆಯಿಂದ ಆಕರ್ಷಕ ಮಾದರಿಯಲ್ಲಿ ಅರಣ್ಯ ಸಿದ್ಧಗೊಳ್ಳುತ್ತಿದೆ.
ಇದರಲ್ಲಿ ನರ್ಸರಿ, ಮಾದರಿ ರೇಂಜ್ ಆಫೀಸ್, ಶಾಲೆ, ಮನೆ, ಬುಟ್ಟಿ ನೇಯುವ ಹಳ್ಳಿ ಮನೆ ನಿರ್ಮಾಣವಾಗಿದ್ದು, ಜೊತೆಗೆ ಕರಕುಶಲ, ಗದ್ದೆ, ಕಂಬಳ ಗದ್ದೆ, ನವಗ್ರಹ ವನ, ರಾಶಿ ವನ, ನಾಗಬನ, ಕೆರೆಯ ಮೇಲೆ ತೂಗು ಸೇತುವೆ, ಜಲಪಾತ, ಗುಹೆ, ವೀಕ್ಷಣಾ ಗೋಪುರ, ಎಲೆ ಉದುರುವ ಕಾಡು, ಟಿಂಬರ್ ಡಿಪೋ, ಹೊಳೆ, ಗಂಗಾಮೂಲ ಮುಂತಾದ ಮಾದರಿಗಳು ಸಿದ್ಧಗೊಳ್ಳುತ್ತಿವೆ.
ಇದಕ್ಕಾಗಿ ಕಳೆದ 10 ದಿನಗಳಿಂದ 60 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಇಲಾಖೆಯ 30 ಸಿಬ್ಬಂದಿ ಮಾರ್ಗದರ್ಶನ ನೀಡುತ್ತಿದ್ದಾರೆ.