ಮಹಿಳಾ ಆರೋಗ್ಯ ತಪಾಸಣಾ ಶಿಬಿರ, ಸಾಧಕಿಯರಿಗೆ ಸನ್ಮಾನ

ಉಡುಪಿ, ಮಾ.8: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಹಯೋಗದೊಂದಿಗೆ ನುರಿತ ಸ್ತ್ರೀ ರೋಗ ತಜ್ಞ ವೈದ್ಯರಿಂದ ಉಚಿತ ಮಹಿಳಾ ಆರೋಗ್ಯ ತಪಾಸಣಾ ಶಿಬಿರವು ಬುಧವಾರ ಬಿಜೆಪಿ ಜಿಲ್ಲಾ ಕಛೇರಿ ಯಲ್ಲಿ ಜರಗಿತು.
ಶಿಬಿರವನ್ನು ಕೋಟೇಶ್ವರ ನವಮಾಸ ವುಮನ್ಸ್ ಸ್ಪೆಷಾಲಿಟಿ ಕ್ಲಿನಿಕ್‌ನ ಸ್ತ್ರೀರೋಗ ತಜ್ಞೆ ಡಾ.ಪ್ರಿಯಾಂಕ ಜೋಗಿ, ಉಡುಪಿ ಸುನಾಗ್ ಆಸ್ಪತ್ರೆಯ ಅರವಳಿಕೆ ತಜ್ಞೆ ಡಾ.ವೀಣಾ ನರೇಂದ್ರ ಮತ್ತು ಶಿಲ್ಪಾ ರಘುಪತಿ ಭಟ್ ಉದ್ಘಾಟಿಸಿದರು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಬಿಜೆಪಿ ಹಿಂದುಳಿದ ವರ್ಗಗಳ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಮಿತಿ ಸದಸ್ಯ ಡಾ. ವಿಜಯೇಂದ್ರ ರಾವ್ ಮಾತನಾಡಿದರು.
ಸಾಧಕಿಯರಾದ ವಿದ್ಯಾ ಸರಸ್ವತಿ ಉಡುಪಿ, ಉಜ್ವಲ ಕಿರಣ್ ಉಡುಪಿ ಮತ್ತು ವಿದ್ಯಾ ಪೈ ಕಾರ್ಕಳ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಶಿಲ್ಪಾ ಜಿ.ಸುವರ್ಣ, ಡಾ.ವಿದ್ಯಾಧರ್ ಶೆಟ್ಟಿ, ಡಾ.ಶಿಲ್ಪಾ ಕುಂದಾಪುರ, ಪ್ರಸನ್ನ ಕಾರಂತ್, ಸುಮಾ ಶೆಟ್ಟಿ, ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಶಿವಕುಮಾರ್ ಅಂಬಲಪಾಡಿ, ದಯಾಶಿನಿ, ಸುಜಾಲ ಸತೀಶ್, ಸುಧಾ ಪೈ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಕೇಸರಿ ಯುವರಾಜ್ ವಂದಿಸಿದರು.