ಎರಡು ವರ್ಷಗಳ ಬಳಿಕ ಅಂತರಾಷ್ಟ್ರೀಯ ವಿಮಾನಗಳ ಮೇಲಿನ ನಿಷೇಧ ಹಿಂಪಡೆದ ಕೇಂದ್ರ ಸರ್ಕಾರ

ಹೊಸದಿಲ್ಲಿ: ಎರಡು ವರ್ಷಗಳ ದೀರ್ಘ ಅಂತರದ ನಂತರ ಭಾರತ ಮಂಗಳವಾರ ಅಂತರಾಷ್ಟ್ರೀಯ ವಿಮಾನಗಳ ಮೇಲಿನ ನಿಷೇಧವನ್ನು ತೆಗೆದುಹಾಕಿದೆ. ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತಗೊಂಡಿದ್ದ ಸಾಗರೋತ್ತರ ವಿಮಾನಗಳು ಮಾರ್ಚ್ 27 ರಿಂದ ಲಭ್ಯವಿರುತ್ತವೆ ಎಂದು ndtv.com ವರದಿ ಮಾಡಿದೆ.
ಜಗತ್ತಿನಾದ್ಯಂತ ವ್ಯಾಕ್ಸಿನೇಷನ್ ವ್ಯಾಪ್ತಿ ಹೆಚ್ಚಾಗಿರುವುದನ್ನು ಗುರುತಿಸಿದ ನಂತರ ಹಾಗೂ ತಜ್ಞರೊಡನೆ ಸಮಾಲೋಚಿಸಿದ ನಂತರ, ಭಾರತ ಸರ್ಕಾರವು 27.03.2022 ರಿಂದ ಭಾರತಕ್ಕೆ ಬರುವ ಹಾಗೂ ಭಾರತದಿಂದ ಹೊರಡುವ ನಿಗದಿತ ವಾಣಿಜ್ಯ ಅಂತರರಾಷ್ಟ್ರೀಯ ಪ್ರಯಾಣಿಕ ಸೇವೆಗಳನ್ನು ಪುನರಾರಂಭಿಸಲು ನಿರ್ಧರಿಸಿದೆ ಎಂದು ವಿಮಾನಯಾನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
Next Story





