ಹಲ್ಲೆ ಪ್ರಕರಣ : ಇಬ್ಬರು ವಿದ್ಯಾರ್ಥಿಗಳು ಪೊಲೀಸ್ ವಶಕ್ಕೆ
ಕುಂದಾಪುರ, ಮಾ.8: ಕೋಟ ಸಮೀಪದ ಅಚ್ಲಾಡಿ ಎಂಬಲ್ಲಿನ ಈಸಿಆರ್ ಇನ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡಿ ಕಾಲೇಜಿಗೆ ಸಂಬಂಧಪಟ್ಟ ವಕ್ವಾಡಿಯಲ್ಲಿರುವ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಮೇಲಿನ ಹಲ್ಲೆಗೆ ಸಂಬಂಧಿಸಿ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹಿರಿಯ ವಿದ್ಯಾರ್ಥಿಗಳಾದ ದಿಲ್ಶಾದ್ ಮತ್ತು ಶಿಂಟೊ ಎಂಬವರು ದುರ್ಗಾ ದಾಸ್ ಎಂಬ ಕಿರಿಯ ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದಾರೆಂದು ದೂರಲಾಗಿದೆ. ಇದರಿಂದ ಗಾಯಗೊಂಡಿರುವ ದುರ್ಗಾದಾಸ್, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Next Story