ಬೆಳ್ಳಿಯ ಆಭರಣ ಕಳವು
ಮಂಗಳೂರು, ಮಾ.8: ನಗರದ ಭವಂತಿ ಸ್ಟ್ರೀಟ್‌ನ ಪ್ರಭಾಕರ್ ಶೇಟ್ ಜ್ಯುವೆಲ್ಲರಿಯ ಅಂಗಡಿಯಿಂದ 60,000 ರೂ. ಮೌಲ್ಯದ ಬೆಳ್ಳಿಯ ಆಭರಣಗಳನ್ನು ಕಳವು ಮಾಡಲಾಗಿದ್ದು, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ್ಯುವೆಲ್ಲರಿ ಮಾಲಕ ರಾಜೇಶ್ ಆಚಾರ್ಯ ಮಾ.5ರಂದು ಬೆಳಗ್ಗೆ ಅಂಗಡಿಗೆ ತೆರಳಿ ರಾತ್ರಿ ಮನೆಗೆ ಮರಳಿದ್ದರು. ಬಳಿಕ ಎರಡು ದಿನ ಅಂಗಡಿ ತೆರೆಯದೆ ಮನೆಯಲ್ಲಿದ್ದರು. ಮಂಗಳವಾರ ಮುಂಜಾವ ಮತ್ತೊಂದು ಜ್ಯುವೆಲರಿ ಅಂಗಡಿಯ ಸೆಕ್ಯೂರಿಟಿ ಗಾರ್ಡ್ ಕರೆ ಮಾಡಿ ತಿಳಿಸಿದ ಮೇರೆಗೆ ರಾಜೇಶ್ ತನ್ನ ಅಂಗಡಿಗೆ ತೆರಳಿದಾಗ ಮೇಲ್ಚಾವಣಿಯ ಹೆಂಚು ತೆಗೆದು ಒಳಪ್ರವೇಶಿಸಿ ಶೋಕೇಸ್‌ನಲ್ಲಿದ್ದ ಬೆಳ್ಳಿಯ ಆಭರಣ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
Next Story