ಮಂಗಳೂರು: ಮಾ.11ರಂದು ಮಿನಿ ಉದ್ಯೋಗ ಮೇಳ
ಮಂಗಳೂರು, ಮಾ.8:ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮಾ.11ರಂದು ಮನಪಾ ಕಟ್ಟಡದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ ನಡೆಯಲಿದೆ.
ಬೆಳಗ್ಗೆ 10.30ರಿಂದ ಅಪರಾಹ್ನ 3ರವರೆಗೆ ನಡೆಯುವ ಮೇಳದಲ್ಲಿ ಹಲವು ಪ್ರಮುಖ ಕಂಪೆನಿಗಳು ಪಾಲ್ಗೊಳ್ಳಲಿದೆ. ಎಸ್ಸೆಸ್ಸೆಲ್ಸಿ, ಬಿಸಿಎ, ಬಿಎಸ್ಸಿ,ಎಂಬಿಎ, ಎಂಸಿಎ, ಎಂಎಸ್ಸಿ, ಬಿಇ, ಎಂಟೆಕ್, ವಿದ್ಯಾರ್ಹತೆ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





