ಕೊಡಗಿನ ವಿವಿಧೆಡೆ ಮೊದಲ ವರ್ಷಧಾರೆ

ಮಡಿಕೇರಿ ಮಾ.8 : ಕೊಡಗು ಜಿಲ್ಲೆಯ ವಿವಿಧೆಡೆ ಮೊದಲ ವರ್ಷಧಾರೆಯಾಗಿದೆ. ಉರಿ ಬಿಸಿಲಿನ ನಡುವೆ ಮಳೆಗಾಗಿ ಎದುರು ನೋಡುತ್ತಿದ್ದ ಕಾಫಿ ಬೆಳೆಗಾರರು ಹರ್ಷಗೊಂಡಿದ್ದಾರೆ.
ನಾಪೋಕ್ಲು, ಎಮ್ಮೆಮಾಡು, ಹಾಕತ್ತೂರು ಮೊದಲಾದೆಡೆ ಉತ್ತಮ ಮಳೆಯಾಗಿದ್ದು, ತಂಪಿನ ವಾತಾವರಣ ಮೂಡಿದೆ. ವಿದ್ಯುತ್ ಕಣ್ಣಾಮುಚ್ಚಾಲೆಯ ನಡುವೆ ತೋಟಗಳಿಗೆ ನೀರು ಹಾಯಿಸಲು ಸಾಧ್ಯವಾಗದೆ ಪರದಾಡುತ್ತಿದ್ದ ಬೆಳೆಗಾರರು ಮೊದಲ ಮಳೆಯಿಂದ ಖುಷಿಯಾಗಿದ್ದಾರೆ.
ಹೂಮಳೆ ಕಾಫಿ ಇಳುವರಿಗೆ ಅವಶ್ಯಕವಾಗಿದ್ದು, ಮತ್ತಷ್ಟು ಮಳೆ ಸುರಿಯುವ ನಿರೀಕ್ಷೆಯಲ್ಲಿ ಜನ ಇದ್ದಾರೆ.
Next Story





