ಉಳ್ಳಾಲ ಉರೂಸ್; ರಾಜಕೀಯ, ಸಾಮಾಜಿಕ ನಾಯಕರ ಸಮಾಗಮ

ಉಳ್ಳಾಲ : ಉಳ್ಳಾಲ ಉರೂಸ್ ಪ್ರಯುಕ್ತ ಏರ್ಪಡಿಸಿದ ರಾಜಕೀಯ-ಸಾಮಾಜಿಕ ನಾಯಕರ ಸಭೆಯನ್ನು ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಂಸದ ಬಿ.ಇಬ್ರಾಹಿಂ ಉದ್ಘಾಟಿಸಿ ಸಮಯೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಎಸ್.ಡಿ.ಪಿ.ಐ.ರಾಜ್ಯಧ್ಯಕ್ಷ ಅಬ್ದುಲ್ ಮಜೀದ್ ಸಭೆಯನ್ನುದ್ದೇಶಿಸಿ ಮಾತನಾಡಿ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಎದೆಗುಂದ ಬಾರದು. ಅಲ್ಲಾಹನ ಅಗ್ನಿ ಪರೀಕ್ಷೆಯಲ್ಲಿ ಉತ್ತೀರ್ಣರಾಗ ಬೇಕೆಂಬ ಛಲ ನಮ್ಮದಾಗಲಿ ಎಂದು ಹೇಳಿದರು.
ರಾಜ್ಯ ವೆಲ್ಫೇರ್ ಪಾರ್ಟಿಯ ಅಧ್ಯಕ್ಷ ನ್ಯಾಯವಾದಿ ತಾಹೀರ್ ಹುಸೈನ್ ಮಾತನಾಡಿ, ಸಾಮರಸ್ಯ -ಭಾವೈಕ್ಯತೆಗೆ ಧಕ್ಕೆ ತರುವ ವ್ಯವಸ್ಥಿತ ಸಂಚು ಇಂದು ಭಾರತದಲ್ಲೂ ನಡೆಯುತ್ತಿರುವುದು ನಿಜಕ್ಕೂ ಕಳವಳಕಾರಿ, ಇಂತಹ ಸಂದರ್ಭದಲ್ಲಿ ಸೌಹಾರ್ದ ಸಭೆಗಳು ಹೆಚ್ಚು ಪ್ರಯೋಜನಕಾರಿಯಾಗ ಬಲ್ಲುದು. ಉಳ್ಳಾಲ ಉರೂಸ್ ಪ್ರಯುಕ್ತ ಹಮ್ಮಿಕೊಂಡ ಈ ಸಮಾವೇಶ ಶ್ಲಾಘನಾರ್ಹ ಎಂದರು.
ಖ್ಯಾತ ನ್ಯಾಯವಾದಿ ಮುಝಫರ್ ಅಹ್ಮದ್ ಮಾತನಾಡಿ ಮುಸ್ಲಿಂ ಸಮಾಜ ಶೈಕ್ಷಣಿಕವಾಗಿ ಪ್ರಬಲರಾಗುವ ಈ ದಿನಗಳಲ್ಲಿ ಎದುರಾಗುವ ಅಡ್ಡಿ ,ಆತಂಕ, ಸಮಸ್ಯೆ ಗಳನ್ನು ಸಂಯಮ ಮತ್ತು ವಿವೇಕಯುತವಾಗಿ ನಿಭಾಯಿಸ ಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಕಾಂಗ್ರೆಸ್ ನಾಯಕ ಹಾಜಿ ಯು.ಕೆ.ಮೋನು ಕಣಚೂರು, ಮುಸ್ಲಿಂ ಲೀಗ್ ಹಿರಿಯ ನಾಯಕ ನ್ಯಾಯವಾದಿ ಸುಲೈಮಾನ್ ಸುರೈಬೈಲ್, ಮಾಜೀ ಮೇಯರ್ . ಕೆ.ಅಶ್ರಫ್, ಎಸ್ .ಡಿ.ಪಿ.ಐ ಪಕ್ಷದ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ರಾಜ್ಯ ಮುಖಂಡ ಅಕ್ರಮ್ ಹಸನ್, ಕಾಂಗ್ರೆಸ್ ಜಿಲ್ಲಾ ನಾಯಕರಾದ ಎನ್. ಎಸ್.ಕರೀಮ್, ಮುಸ್ತಫ ಹರೇಕಳ, ಎಸ್ ಡಿ ಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಜಿಲ್ಲಾ ಮುಖಂಡ ಝಾಕೀರ್ ಉಳ್ಳಾಲ್, ಅಶ್ರಫ್ ಕೆ.ಸಿ.ರೋಡ್, ಪಿಎಫ್ ಐ ಮುಖಂಡ ಎ.ಆರ್ ಅಬ್ಬಾಸ್ ಕೌನ್ಸಿಲರ್ ರಮೀಝ್ , ನಿಝಾಂ ಮೇಲಂಗಡಿ,ವೆಲ್ಫೇರ್ ಪಾರ್ಟಿ ರಾಜ್ಯ ಉಪಾಧ್ಯಕ್ಷ, ಶ್ರೀ ಕಾಂತ್ ಸಾಲಿಯಾನ್, ರಾಜ್ಯ ಮಾಧ್ಯಮ ಕಾರ್ಯದರ್ಶಿ ಅಝೀಝ್ ಜಾಗಿರ್ದಾರ್, ಜಿಲ್ಲಾಧ್ಯಕ್ಷ ಅಡ್ವೋಕೇಟ್ ಸರ್ಫರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸೈಫ್ ಉಳ್ಳಾಲ, ಜಿಲ್ಲಾ ವಕ್ತಾರ ಸಲಾಂ ಸಿ ಎಚ್. ತೌಸೀಫ್ , ಇಸ್ಮಾಯಿಲ್ ಬೆಂಗ್ರೆ, ಹುಸೈನ್ ತೊಕ್ಕೋಟ್ಟು, ಬೆಂಗಳೂರಿನ ಫೀಲ್ಡ್ ಸ್ಟಾರ್ ಫರ್ಮ್ ಮಾಲ್ಹಕ ಮಕ್ಸೂದ್ ಖಾನ್, ದರ್ಗಾ ಅರಬಿಕ್ ಟ್ರಸ್ಟ್ ಪ್ರ. ಕಾರ್ಯದರ್ಶಿ ಅಮೀರ್ ಹಾಜಿ, ಕಾರ್ಯ ದರ್ಶಿ ಆಸಿಫ್ ಅಬ್ದುಲ್ಲ, ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಎ.ಕೆ.ಮೊಯ್ದಿನ್ ಹಾಜಿ, ಚೆರಿಯೋನು ಜಪ್ಪು, ಜಮಾಲ್ ಬಾರ್ಲಿ, ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್ ಡಿಪಿಐ ರಾಜ್ಯಾಧ್ಯಕ್ಷ ಮಜೀದ್ ಖಾನ್ ಕೊಡ್ಲಿ ಪೇಟೆ, ವೆಲ್ಫರ್ ಪಾರ್ಟಿ ರಾಜ್ಯಾಧ್ಯಕ್ಷ ನ್ಯಾಯವಾದಿ ತಾಹೀರ್ ಹುಸೈನ್, ಎಸ್.ಡಿ.ಪಿ.ಐ.ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಮಾಜೀ ಮೇಯರ್ ಅಶ್ರಫ್ ರನ್ನು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಶಾಲು ಹೊದಿಸಿ ಸನ್ಮಾನಿಸಿದರು.
ಉಳ್ಳಾಲ ದರ್ಗಾ ಮಾಧ್ಯಮ ಉಸ್ತುವಾರಿ ಫಾರೂಕ್ ಉಳ್ಳಾಲ್ ಕಾರ್ಯ ಕ್ರಮವನ್ನು ನಿರೂಪಿಸಿದರು.