ಪಡೀಲ್ ನಲ್ಲಿ ಸಾಂತ್ವನ ಕೇಂದ್ರಕ್ಕೆ ಚಾಲನೆ

ಮಂಗಳೂರು : ಕಳೆದ 25 ವರ್ಷಗಳಿಂದ ಅರೋಗ್ಯ ಶಿಕ್ಷಣ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ ಸಂಘಟನೆ ಗಾಗಿ ದುಡಿಯುತ್ತಾ, ಅಗತ್ಯ ಇದ್ದವರಿಗೆ ಮಾಹಿತಿ, ಮಾರ್ಗದರ್ಶನ, ಮುನ್ನಡೆ, ಮನ್ನಣೆ ಕೊಡಿಸುತ್ತಿದ್ದ, ಅದಕ್ಕಾಗಿ ಸಮಾಜದಲ್ಲಿ ಗುರುತಿಸಿ ಕೊಂಡಿರುವ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಆಶ್ರಯದಲ್ಲಿ ಇಂದು ಸಾಂತ್ವನ ಕೇಂದ್ರ ವನ್ನ ಮಹಿಳಾ ದಿನಾಚರಣೆಯ ಅಂಗವಾಗಿ ಆರಂಭಿಸಲಾಯಿತು.
ಪಡೀಲ್ ಅಳಪೆ ಕಣ್ಣೂರು ಭಾಗದ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರುಗಳಾದ ರೂಪ ಶ್ರೀ ಪೂಜಾರಿ, ಮತ್ತು ಚಂದ್ರಾವತಿ ವಿಶ್ವನಾಥ್ ಅವರು ಉದ್ಘಾಟಿಸಿ ಶುಭ ಹಾರೈಸಿದರು.
ಸಾಂತ್ವನ ಕ್ಷೇತ್ರದಲ್ಲಿ ನುರಿತ ಐಕ್ಯಮ್ ಸಂಸ್ಥೆಯ ಶ್ರೀಮತಿ ಕಮಲಾಕ್ಷಿ ಯವರು ಮುಂದಿನ ದಿನಗಳಲ್ಲಿ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ವೈದ್ಯಕೀಯ ನಿರ್ದೇಶಕರಾದ ಡಾ.ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಅವರ ಮಾರ್ಗದರ್ಶನ ದಲ್ಲಿ ಮಕ್ಕಳಿಂದ ಹಿಡಿದು ಯುವಕರು, ಹಿರಿಯನಾಗರಿಕರು, ಹಾಗೂ ಇನ್ನಿತರ ಸಮಸ್ಯೆಗಳಿಂದ ಬಳಲುವವರಿಗೆ ಮಾಹಿತಿ ಮಾರ್ಗದರ್ಶನ ಹಾಗೂ ಸೂಕ್ತ ಸಾಂತ್ವನ ನೀಡಲಾಗುವುದು ಎಂದರು.
ಪ್ರತಿಷ್ಠಾನದ ಕಾರ್ಯದರ್ಶಿ ಮಮತಾ ಅಣ್ಣಯ್ಯ ಕುಲಾಲ್ ಸ್ವಾಗತಿಸಿದರು, ಪ್ರತಿಷ್ಠಾನದ ಸದಸ್ಯೆ ಅನನ್ಯ ಕುಲಾಲ್ ವಂದಿಸಿದರು.







