Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಗಾಂಧಿ, ನೆಹರೂ, ಪಟೇಲ್ ಬಾಂಧವ್ಯದ ಕುರಿತು...

ಗಾಂಧಿ, ನೆಹರೂ, ಪಟೇಲ್ ಬಾಂಧವ್ಯದ ಕುರಿತು ಸುಳ್ಳು ಹೇಳುವವರಿಗೆ...

ಎಚ್. ಎಸ್. ದೊರೆಸ್ವಾಮಿಎಚ್. ಎಸ್. ದೊರೆಸ್ವಾಮಿ9 March 2022 12:05 AM IST
share
ಗಾಂಧಿ, ನೆಹರೂ, ಪಟೇಲ್ ಬಾಂಧವ್ಯದ ಕುರಿತು ಸುಳ್ಳು ಹೇಳುವವರಿಗೆ...

ಪ್ರಧಾನಿ ಮೋದಿ ಗುಜರಾತಿನ ನಾಯಕರತ್ನಗಳಾದ ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಇಬ್ಬರಲ್ಲಿ ಒಬ್ಬರನ್ನು ಮರೆಸುವ ಕುತಂತ್ರ ಮಾಡುತ್ತಿರುವುದು ಮತ್ತೊಬ್ಬರನ್ನು ತಮ್ಮ ಪ್ರತಿಷ್ಠೆ ಬೆಳೆಸಿಕೊಳ್ಳಲು ದುರುಪ ಯೋಗಪಡಿಸಿಕೊಳ್ಳುತ್ತಿರುವುದು ನಿಜಕ್ಕೂ ಹೇಯವಾದ ಕೆಲಸ.

ಮಹಾತ್ಮ ಗಾಂಧಿಯವರು ಜವಾಹರ್‌ಲಾಲ್‌ರನ್ನು ಬೆಳೆಯಲು ಅವಕಾಶ ಮಾಡಿಕೊಟ್ಟು ಸರ್ದಾರ್ ಪಟೇಲರನ್ನು ಕಡೆಗಣಿಸಿದರು ಎಂಬ ಸುಳ್ಳು ಆಪಾದನೆಯ ಮೂಲಕ ಭಾವನಾತ್ಮಕ ರಾಜಕಾರಣದ ಲಾಭ ಪಡೆಯುವ ಯತ್ನಗಳು ನಡೆಯುತ್ತಿವೆ. ಗುಜರಾತ್‌ನಲ್ಲಿ ಪಟೇಲರ ಎತ್ತರ ಪ್ರತಿಮೆ ಸ್ಥಾಪಿಸಿದ್ದು ಕೂಡಾ ಇದರದೇ ಒಂದು ಭಾಗ.
ಇತಿಹಾಸದ ಕುರಿತು ಮೋದಿಯ ಹುಸಿಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ ನಾವು ಮೊದಲು ಗಾಂಧೀಜಿ, ನೆಹರೂ, ಪಟೇಲರ ಸಂಬಂಧ ಹೇಗಿತ್ತು ಎಂಬುದನ್ನು ಅರಿಯಬೇಕು. ಗಾಂಧೀಜಿ ಸೆರೆಮನೆಗೆ ಹೋದಾಗಲೆಲ್ಲ ವಲ್ಲಭಭಾಯಿ ಅವರ ಜೊತೆಗೆ ಇರುತ್ತಿದ್ದರು. ಸೆರೆಮನೆಯಲ್ಲಿ ಗಾಂಧೀಜಿಯವರ ನೆರವಿಗೆಂದು ಹಾಗೆ ಮಾಡುತ್ತಿದ್ದರು. ಹೀಗಾಗಿ ಅವರಿಬ್ಬರ ಸ್ನೇಹ-ಸಂಬಂಧ ಗಾಢವಾಗಿತ್ತು. ಸರ್ದಾರ್ ಪಟೇಲರ ಧೈರ್ಯ, ಸಾಹಸ, ರಾಜಕೀಯ ಚಾಣಾಕ್ಷತನ, ಹಿಡಿದ ಕೆಲಸ ಮುಗಿಸುವ ಛಲ ಎಲ್ಲದರ ಬಗ್ಗೆ ಗಾಂಧೀಜಿಗೆ ಅಪಾರ ಮೆಚ್ಚುಗೆಯಿತ್ತು.
ಸ್ವಾತಂತ್ರ್ಯ ಪ್ರಾಪ್ತವಾದ ಕೂಡಲೇ ಸ್ವತಂತ್ರ ಭಾರತದ ಆಡಳಿತ ನಡೆಸಲು ದಕ್ಷರಾದ ನಾಯಕರನ್ನು ಗಾಂಧೀಜಿಯವರು ಹುಡುಕಿಕೊಳ್ಳಬೇಕಾಗಿತ್ತು. ಜವಾಹರ್‌ಲಾಲ್ ನೆಹರೂ ಸ್ವಾತಂತ್ರ್ಯ ಪೂರ್ವದಲ್ಲೇ ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುತ್ತಿದ್ದ ಅಂತರ್‌ರಾಷ್ಟ್ರೀಯ ಸಮಾರಂಭಗಳಲ್ಲಿ, ಸೆಮಿನಾರ್‌ಗಳಲ್ಲಿ ಭಾಗವಹಿಸುತ್ತಿದ್ದರು. ಅಂದಿನ ವಿಶ್ವದ ಅನೇಕ ರಾಷ್ಟ್ರಗಳ ನಾಯಕರ ಸ್ನೇಹವನ್ನು ಬೆಳೆಸಿಕೊಂಡಿದ್ದರು. ಅಲ್ಲದೆ ನೆಹರೂ ಅಂತರ್‌ರಾಷ್ಟ್ರೀಯ ಸಮಸ್ಯೆಗಳ ಅಧ್ಯಯನ ಮಾಡಿದ್ದರು. ಇವೆಲ್ಲವನ್ನೂ ತಿಳಿದ ಗಾಂಧೀಜಿ ನೆಹರೂ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಬಯಸಿದರು, ಬಿಗಿಯಾಗಿ ಆಡಳಿತ ನಡೆಸುವ ಸರ್ದಾರ್ ಪಟೇಲರ ದಕ್ಷತೆಯು ಹೊಸದಾಗಿ ರೂಪುಗೊಳ್ಳುತ್ತಿರುವ ಸ್ವದೇಶಿ ಸರಕಾರದ ಕೈಬಲಗೊಳಿಸಲು ಅನಿವಾರ್ಯ ಎಂಬುದನ್ನರಿತೇ ಪಟೇಲರನ್ನು ಗೃಹಮಂತ್ರಿಯಾಗಿಸಬೇಕೆಂದು ಇಚ್ಛಿಸಿದರು.
ಅದಕ್ಕೆ ಕಾರಣವೂ ಇತ್ತು. ಭಾರತದಿಂದ ಟಿಸಿಲೊಡೆದು ಪಾಕಿಸ್ತಾನ ಎಂಬ ಹೊಸ ದೇಶ ಅಸ್ತಿತ್ವಕ್ಕೆ ಬಂದೊಡನೆ ಅಲ್ಲಿದ್ದ ಮುಸ್ಲಿಮೇತರರನ್ನು ಹೊರಗಟ್ಟುವ ಪ್ರಯತ್ನ ವ್ಯವಸ್ಥಿತವಾಗಿ ಆಯಿತು, ಹಿಂದೂಗಳು, ಸಿಖ್ಖರು ಮುಂತಾದವರ ಆಸ್ತಿಗಳನ್ನು ವಶಪಡಿಸಿಕೊಳ್ಳುವುದು ಅವರ ಮೇಲೆ ದೌರ್ಜನ್ಯ ಮಾಡುವುದು, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುವುದು ಕ್ರೂರವಾಗಿ ನಡೆದುಕೊಳ್ಳುವುದು ಒಂದೇ ಸಮನೆ ನಡೆಯಿತು. ಇತ್ತ ಭಾರತದಲ್ಲೂ ಅಂತಹದ್ದೇ ಸನ್ನಿವೇಶಗಳು ಪ್ರತಿಫಲನಗೊಂಡವು. ದೌರ್ಜನ್ಯಕ್ಕೊಳಗಾದ ಈ ಜನ ಸಹಸ್ರಾರು ಸಂಖ್ಯೆಯಲ್ಲಿ ಜೀವ ಉಳಿಸಿಕೊಳ್ಳುವ ಏಕೈಕ ಕಾರಣಕ್ಕಾಗಿ ಪಾಕಿಸ್ತಾನದಿಂದ ಭಾರತದ ಕಡೆಗೆ, ಭಾರತದಿಂದ ಪಾಕಿಸ್ತಾನದ ಕಡೆಗೆ ಹರಿದಾಡಿದರು. ಹೀಗೆ ಭಾರತಕ್ಕೆ ಪ್ರವಾಹದೋಪಾದಿಯಲ್ಲಿ ಧಾವಿಸಿ ಬಂದ ಈ ನತದೃಷ್ಟರನ್ನು ಸಾಂತ್ವನಗೊಳಿಸುವುದು, ಅವರಿಗೆ ನಿಲ್ಲಲು ನೆಲೆ ಕಲ್ಪಿಸುವುದು, ಊಟ ಉಪಚಾರಗಳ ಏರ್ಪಾಟು ಮಾಡುವುದು ಒಂದು ಕಡೆಗಾದರೆ, ಭಾರತದಲ್ಲಿ ಹೊತ್ತಿ ಉರಿಯುತ್ತಿದ್ದ ಕೋಮುದಳ್ಳುರಿ ನಂದಿಸುವ ಕೆಲಸ ಮತ್ತೊಂದು ಕಡೆ ಏಕಕಾಲದಲ್ಲಿ ನಡೆಯಬೇಕಿತ್ತು. ನಿರಾಶ್ರಿತರೆಲ್ಲ ಬೆಂದು ಬೆಂಡಾದ ಜ್ವಾಲೆಯ ತುಣುಕುಗಳಂತೆ ಕಾಣುತ್ತಿದ್ದರು. ಅವರಲ್ಲಿ ಶಾಂತಿ ಮೂಡಿಸಿ ಅವರ ಉದ್ರೇಕ, ಉನ್ಮಾದಗಳನ್ನು ಸಹಿಸಿಕೊಂಡು ಅವರಿಗೆ ಸಾಂತ್ವನ ಹೇಳಿ ನಿಜ ಜೀವನಕ್ಕೆ ಅವರನ್ನು ತೊಡಗಿಸುವ ಮಹತ್ಕಾರ್ಯವನ್ನು ಜವಾಹರ್‌ಲಾಲ್ ನೆಹರೂ ಮತ್ತು ಸರ್ದಾರ್ ಪಟೇಲರು ಬಹಳ ಯಶಸ್ವಿಯಾಗಿ ನಿರ್ವಹಿಸಿದರು. ಕುರುಕ್ಷೇತ್ರದಲ್ಲಿ ಈ ನಿರಾಶ್ರಿತರಿಗೆಲ್ಲ ಊಟ, ವಸತಿ, ವೈದ್ಯಕೀಯ ಸಹಾಯ, ರಕ್ಷಣೆ ಎಲ್ಲವನ್ನೂ ಒದಗಿಸಿಕೊಟ್ಟ ಕೀರ್ತಿ ಇವರಿಬ್ಬರು ಮಹಾನುಭಾವರಿಗೆ ಸಂದಾಯವಾಗಬೇಕು.
ಇಂಗ್ಲಿಷರು ಸ್ವಾತಂತ್ರ್ಯ ಘೋಷಿಸಿ ಹೋಗುವ ಮುನ್ನ ಭಾರತದಲ್ಲಿರುವ 562 ರಾಜ ಮಹಾರಾಜರು, ನವಾಬರು ಸ್ವತಂತ್ರ ರಾಜ್ಯಗಳನ್ನು ರಚಿಸಿಕೊಂಡು ಇರಬಹುದು ಎಂದು ಘೋಷಿಸಿ ಹೋಗಿದ್ದರು. ಸರ್ದಾರ್ ಪಟೇಲರು ಗೃಹ ಸಚಿವರಾಗಿ ಮಾಡಿದ ಮಹತ್ತರವಾದ ಕೆಲಸ ಎಂದರೆ ಈ 562 ಸಂಸ್ಥಾನಗಳನ್ನೂ ಸ್ವತಂತ್ರ ಭಾರತದೊಳಗೆ ವಿಲೀನಮಾಡಿದ್ದು, ಆ ಮೂಲಕ ಸಾವಿರಾರು ವರ್ಷಗಳಿಂದ ಹೋಳುಹೋಳಾಗಿದ್ದ ಭಾರತವನ್ನು ಒಂದು ಆಡಳಿತ ಘಟಕವನ್ನಾಗಿ ರೂಪಿಸಿದರು. ಪ್ರಧಾನಿ ಜೊತೆ ಅವರಿಗೆ ಸಮನ್ವಯ ಇರದೇ ಹೋಗಿದ್ದರೆ ಇದು ಸಾಧ್ಯವಾಗುತ್ತಿತ್ತೇ?
ಜವಾಹರ್‌ಲಾಲ್ ನೆಹರೂ ವಿಶ್ವಶಾಂತಿ ಹಾಗೂ ನಿರ್ಲಿಪ್ತ ನೀತಿಗಳಿಗೆ ಹೆಸರಾದವರು. ವಿಶ್ವಶಾಂತಿ ನೆಲೆಸಬೇಕಾದರೆ ಎಲ್ಲ ರಾಷ್ಟ್ರಗಳೂ ಯುದ್ಧಗಳನ್ನು ನಿಷೇಧಿಸಬೇಕು, ರಾಷ್ಟ್ರರಾಷ್ಟ್ರಗಳಲ್ಲಿ ಸಖ್ಯ ಬೆಳೆಯಬೇಕು, ಒಂದು ರಾಷ್ಟ್ರದ ಕೊರತೆಯನ್ನು ಮತ್ತೊಂದು ರಾಷ್ಟ್ರ ನೀಗಬೇಕು ಎಂಬುದು ಜವಹರ್‌ಲಾಲ್‌ರ ಧ್ಯೇಯವಾಗಿತ್ತು. ಅಮೆರಿಕ ಮುಂತಾದ ಎಲ್ಲ ಪ್ರಬಲ ರಾಷ್ಟ್ರಗಳೂ ಬಾಂಬುಗಳನ್ನು ತಯಾರಿಸಿ ಪೇರಿಸಿಡುವ ಕೆಲಸದಲ್ಲಿ ತೊಡಗಿದ್ದಾಗ ಭಾರತ ಬಾಂಬು ತಯಾರಿಕೆಗೆ ವಿರೋಧ ವ್ಯಕ್ತಪಡಿಸಿದ ಏಕೈಕ ರಾಷ್ಟ್ರ, ಆಟಞಚಿ ಜಿ ್ಞಟ ಛಿಠಿಠಿಛ್ಟ್ಟಿಚ್ಞಠಿ ಎಂದು ನೆಹರೂ ಘೋಷಣೆ ಮಾಡಿದರು.
ಜವಾಹರ್‌ಲಾಲ್ ನೆಹರೂರವರ ಅಲಿಪ್ತ ನೀತಿ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮನ್ನಣೆ ತಂದುಕೊಟ್ಟಿತು. ಅವರ ಆಡಳಿತ ಕಾಲದಲ್ಲಿ ಅಮೆರಿಕ ಮತ್ತು ರಶ್ಯ ಎರಡು ಪ್ರತ್ಯೇಕ ಶಕ್ತಿ ಕೇಂದ್ರಗಳಾಗಿದ್ದವು. ಯಾವುದೇ ರಾಷ್ಟ್ರದ ನೆರವಿಗೆ ಯುದ್ಧದಲ್ಲಿ ಅಮೆರಿಕ ಕೈ ಜೋಡಿಸಿದರೆ ಅದರ ವಿರುದ್ಧ ಹೋರಾಡುವ ರಾಷ್ಟ್ರದ ನೆರೆವಿಗೆ ರಶ್ಯ ಧಾವಿಸುತ್ತಿತ್ತು. ಯುದ್ಧದಾಹಿ ರಾಷ್ಟ್ರಗಳು ಈ ಬಲಿಷ್ಠ ರಾಷ್ಟ್ರಗಳ ಬೆಂಬಲ ಕೋರುತ್ತಿದ್ದವು. ಜವಾಹರ್‌ಲಾಲ್ ನೆಹರೂರವರು ಈ ಸಂದರ್ಭದಲ್ಲಿ ಭಾರತ, ಅಮೆರಿಕ ಅಥವಾ ರಶ್ಯದ ಜೊತೆಗೆ ಸೇರಿಕೊಳ್ಳದೆ ತಟಸ್ಥ ರಾಷ್ಟ್ರವಾಗಿ ಉಳಿಯುವಂತೆ ನೋಡಿಕೊಂಡರು.
ಮೋದಿಯವರು ನೆಹರೂ, ಪಟೇಲರ ಅಧಿಕಾರದ ಅವಧಿಯ ಇತಿಹಾಸವನ್ನು ಓದಿಲ್ಲ. ಮನಸೋ ಇಚ್ಛೆ ಮಾತನಾಡಿ ನೆಹರೂ-ಪಟೇಲ್ ಇಬ್ಬರೂ ಶತ್ರುಗಳು; ಗಾಂಧೀಜಿಯವರು ಪಟೇಲರನ್ನು ಕಡೆಗಣಿಸಿದರು ಎನ್ನುವ ಸುಳ್ಳು ಆಪಾದನೆ ಮೂಲಕ ಈಗ ತಾವು ಸರ್ದಾರ್ ಪಟೇಲರಿಗೆ ಸಲ್ಲಬೇಕಾದ ಸ್ಥಾನವನ್ನು ಕೊಡಿಸಲು ಹೊರಟವರಂತೆ ನಡೆದುಕೊಳ್ಳುತ್ತಿದ್ದಾರೆ.
ಅವತ್ತಿನ ಪ್ರಧಾನಿ ಮತ್ತು ಗೃಹಮಂತ್ರಿಯ ನಡುವೆ ತಾಳಮೇಳ ಇಲ್ಲದೆ ಹೋಗಿದ್ದರೆ, ವೈರತ್ವ ಮನೆ ಮಾಡಿಕೊಂಡಿದ್ದರೆ ಬ್ರಿಟಿಷರು ಕೋಮು ಬಾಣಲೆಯಲ್ಲಿ ಎಸೆದುಹೋಗಿದ್ದ ಭಾರತವನ್ನು ಮೇಲಕ್ಕೆತ್ತಿ ಪರಿಸ್ಥಿತಿಯನ್ನು ನಿಭಾಯಿಸಲು ಒಂದು ಅನನುಭವಿ ಸರಕಾರಕ್ಕೆ ಸಾಧ್ಯವಾಗುತ್ತಿತ್ತೇ? ಸರಕಾರದ ಒಳಗೇ ಆಂತರಿಕ ಸಂಘರ್ಷವಿದ್ದಿದ್ದರೆ 562 ಪ್ರಾಂತಗಳ ಮೇಲೆ ಹಿಡಿತ ಸಾಧಿಸಿ, ಭಾರತದಲ್ಲಿ ವಿಲೀನ ಮಾಡಿಸಲು ಸಾಧ್ಯವಿತ್ತೆ? ಇಂತಹ ಸಾಮಾನ್ಯ ಜ್ಞಾನವೂ ಪ್ರಧಾನಿ ಮೋದಿಯವರಿಗಿಲ್ಲವೇ ಅಥವಾ ಇದ್ದೂ ಇಲ್ಲದಂತೆ ವರ್ತಿಸುತ್ತಿದ್ದಾರೆಯೇ..

(12 ಡಿಸೆಂಬರ್ 2018)
‘ಸ್ವಾತಂತ್ರ ಸೇನಾನಿ ಎಚ್. ಎಸ್. ದೊರೆಸ್ವಾಮಿ ನೂರರ ನೋಟ’ ಪುಸ್ತಕದಿಂದ

share
ಎಚ್. ಎಸ್. ದೊರೆಸ್ವಾಮಿ
ಎಚ್. ಎಸ್. ದೊರೆಸ್ವಾಮಿ
Next Story
X