Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಸುಮಿಯಲ್ಲಿ ರಶ್ಯ ಸೇನೆಯ ಭೀಕರ ವಾಯುದಾಳಿ:...

ಸುಮಿಯಲ್ಲಿ ರಶ್ಯ ಸೇನೆಯ ಭೀಕರ ವಾಯುದಾಳಿ: ಇಬ್ಬರು ಮಕ್ಕಳು ಸಹಿತ ಕನಿಷ್ಠ 21 ಮಂದಿ ಮೃತ್ಯು

ತಾತ್ಕಾಲಿಕ ಕದನ ವಿರಾಮದ ಕೆಲವೇ ತಾಸುಗಳ ಮೊದಲು ನಡೆದ ವೈಮಾನಿಕ ದಾಳಿ

ವಾರ್ತಾಭಾರತಿವಾರ್ತಾಭಾರತಿ9 March 2022 12:15 AM IST
share
ಸುಮಿಯಲ್ಲಿ ರಶ್ಯ ಸೇನೆಯ ಭೀಕರ ವಾಯುದಾಳಿ: ಇಬ್ಬರು ಮಕ್ಕಳು ಸಹಿತ ಕನಿಷ್ಠ 21 ಮಂದಿ ಮೃತ್ಯು

ಕೀವ್,ಮಾ.8: ಯುದ್ಧಪೀಡಿತ ಉಕ್ರೇನ್ ನಗರ ಸುಮಿಯಲ್ಲಿ ಸೋಮವಾರ ರಾತ್ರಿ ರಶ್ಯನ್ ಸೇನೆ ನಡೆಸಿದ ಭೀಕರ ವಾಯುದಾಳಿಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ.

ಉಕ್ರೇನ್ ರಾಜಧಾನಿ ಕೀವ್‌ನ ಪೂವದಲ್ಲಿರುವ ರಶ್ಯ ಗಡಿ ಸಮೀಪದ ನಗರವಾದ ಸುಮಿಯಲ್ಲಿ ವಾಯುದಾಳಿ ನಡೆದಿರುವುದಾಗಿ ಉಕ್ರೇನ್‌ನ ರಕ್ಷಣಾ ಸೇವೆಗಳ ಇಲಾಖೆ ತಿಳಿಸಿದೆ.
‘‘ಶತ್ರು ವಿಮಾನಗಳು ಸೋಮವಾರ ರಾತ್ರಿ 11:00 ಕಪಟತನದೊಂದಿಗೆ ವಸತಿ ಕಟ್ಟಡಗಳ ಮೇಲೆ ದಾಳಿ ನಡೆಸಿವೆ’’ ಎಂದು ಅವರು ತಿಳಿಸಿದ್ದಾರೆ. ಉಕ್ರೇನ್ ರಾಜಧಾನಿ ಕೀವ್ನಿಂದ 350 ಕಿ.ಮೀ. ದೂರದಲ್ಲಿರುವ ಸುಮಿ ನಗರವು ಹಲವು ದಿನಗಳಿಂದ ಭೀಕರ ಕಾಳಗಕ್ಕೆ ಸಾಕ್ಷಿಯಾಗಿದೆ .

ಉಕ್ರೇನ್ ರಾಜಧಾನಿ ಕೀವ್‌ನಿಂದ 350 ಕಿ.ಮೀ. ದೂರದಲ್ಲಿರುವ ಸುಮಿಯಲ್ಲಿ ಕಳೆದ ಕೆಲವು ದಿನಗಳಿಂದ ರಶ್ಯ ಹಾಗೂ ಉಕ್ರೇನ್ ಸೈನಿಕರ ನಡುವೆ ಭೀಕರ ಸಂಘರ್ಷ ನಡೆಯುತ್ತಿದೆ.

  ಭಾರತೀಯರು, ಚೀನಿಯರು ಹಾಗೂ ಇತರ ವಿದೇಶೀಯರು ಮತ್ತು ನಾಗರಿಕರನ್ನು ತೆರವುಗೊಳಿಸುವ ಉದ್ದೇಶದಿಂದ ಸುಮಿ ನಗರದಿಂದ ಪೊಲ್ಟಾವಾ ನಗರದವರೆಗೆ ಮಾನವೀಯ ಕಾರಿಡರ್ತೆರೆಯಲಾಗಿದೆ. ಆದರೆ ರಶ್ಯವು ಈ ದಾರಿಗೆ ಅಡ್ಡಿಪಡಿಸುವ ಸಾಧ್ಯತೆಯಿದೆಯೆಂದು ಉಕ್ರೇನ್ ಪ್ರಧಾನಿ ಆರೋಪಿಸಿದ್ದಾರೆ.
ರಶ್ಯದ ರಕ್ಷಣಾ ಸಚಿವಾಲಯವು ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಗೆ ಬರೆದ ಪತ್ರದಲ್ಲಿ ಮಂಗಳವಾರ ಬೆಳಗ್ಗಿನಿಂದ ಮಾನವೀಯ ಕಾರಿಡಾರ್ ಆರಂಭಿಸಲು ಒಪ್ಪಿಕೊಂಡಿರುವುದಾಗಿ ತಿಳಿಸಿದೆಯೆಂದು ಉಕ್ರೇನ್ನ ಉಪ ಪ್ರಧಾನಿ ಇರಿನಾ ವೆರೆಶ್ಚುಕ್ ತಿಳಿಸಿದ್ದಾರೆ. ಸಮನ್ವಯತೆಯಿಲ್ಲದ ಹಾಗೂ ಅಪಾಯಕಾರಿಯಾಗಿರುವ ಇನ್ನೊಂದು ದಾರಿಯಾಗಿ ನಾಗರಿಕರು ನಗರವನ್ನು ತೊರೆಯುವಂತೆ ಮಾಡಲು ರಶ್ಯ ಸಂಚುರೂಪಿಸಿದೆ ಎಂದು ಇರಿನಾ ಆರೋಪಿಸಿದ್ದಾರೆ. ಆಹಾರ ಹಾಗೂ ಔಷಧಿಗಳ ಪೂರೈಕೆಯ ಉದ್ದೇಶದಿಂದಲೂ ಮಾನವೀಯ ಕಾರಿಡಾರ್ ತೆರೆಯಲಾಗಿದೆಯೆಂದು ಆಕೆ ಹೇಳಿದ್ದಾರೆ.


ಉಕ್ರೇನ್ ತೊರೆದ 20 ಲಕ್ಷಕ್ಕೂ ಅಧಿಕ ನಾಗರಿಕರು: ಸುಮಿ,ಲಿವ್ ಸಹಿತ ಮೂರು ನಗರಗಳಲ್ಲಿ ಸುರಕ್ಷಿತ ಕಾರಿಡಾರ್ ಮೂಲಕ ನಾಗರಿಕರ ಸ್ಥಳಾಂತರ

ಉಕ್ರೇನ್ ಮೇಲೆ ರಶ್ಯದ ಆಕ್ರಮಣದ ಹಿನ್ನೆಲೆಯಲ್ಲಿ ಮಂಗಳವಾರ ಜನರಿಂದ ಕಿಕ್ಕಿರಿದ ತುಂಬಿದ ಬಸ್‌ಗಳು, ಸುರಕ್ಷಿತ ಮಾರ್ಗಗಳ ಮೂಲಕ ಯುದ್ಧಪೀಡಿತ ನಗರಗಳಾದ ಮಾರಿಯಾಪೊಲ್ ಹಾಗೂ ಲಿವ್,ಸುಮಿ ನಗರಗಳಿಂದ ಹೊರಹೋಗಿದ್ದು, ಈವರೆಗೆ ಈ ಯುದ್ಧಪೀಡಿತ ದೇಶವನ್ನು ತೊರೆದ ನಿರಾಶ್ರಿತರ ಸಂಖ್ಯೆ 20 ಲಕ್ಷವನ್ನು ತಲುಪಿದೆ.
      
ಎರಡನೆ ಮಹಾಯುದ್ಧದ ಬಳಿಕ ಯುರೋಪ್ ಕಂಡಿರುವ ಅತ್ಯಂತ ಭಯಾನಕವಾದ ಈ ಯುದ್ಧದಿಂದ ತತ್ತರಿಸಿರುವ ನಗರಗಳಾದ ಕೀವ್, ಖಾರ್ಕೊಮ್, ಸುಮಿ ಹಾಗೂ ಲಿವಿವ್ ನಗರಗಳಲ್ಲಿ ಸಿಲುಕಿಕೊಂಡಿರುವ ಜನರು ಆಹಾರ, ನೀರು ಹಾಗೂ ಔಷಧಿಗಳಿಲ್ಲದೆ ಪರದಾಡುತ್ತಿದ್ದಾರೆ.ಆದರೆ ಮಂಗಳವಾರ ಉಕ್ರೇನ್‌ನ ದಕ್ಷಿಣ ಭಾಗದ ಬಂದರು ನಗರವಾದ ಮಾರಿಯುಪೊಲ್ ಹಾಗೂ ಪೂರ್ವ ಭಾಗದ ನಗರವಾದ ಸುಮಿಯಿಂದ ಜನರು ಹಿಮಾವೃತ ರಸ್ತೆಗಳ ಮೂಲಕ ಬಸ್‌ಗಳಲ್ಲಿ ತೆರಳುತ್ತಿರುವುದನ್ನು ಉಕ್ರೇನ್ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
   
ಉಕ್ರೇನ್‌ನ ಸುಮಿ ನಗರದಲ್ಲಿ ಗ್ರೀನ್ ಕಾರಿಡಾರ್ಗೆ ಅನುಮತಿ ನೀಡಲಾಗಿದೆ. ಮೊದಲ ಹಂತದ ತೆರವು ‘‘ಕಾರ್ಯಾಚರಣೆ ಆರಂಭಗೊಂಡಿದೆ’’ ಎಂದು ಉಕ್ರೇನ್ ಸರಕಾರದ ಸಂವಹನ ಇಲಾಖೆ ತಿಳಿಸಿದೆ. ಈ ಬಸ್‌ಗಳು ಉಕ್ರೇನ್‌ನ ಇತರ ನಗರಗಳಲ್ಲಿ ತೆರಳುತ್ತಿವೆ. ಆದರೆ ಬಹುತೇಕ ಜನರು ಈ ಕಾರಿಡಾರ್ ಬಳಸಿಕೊಂಡು ದೇಶವನ್ನೇ ತೊರೆಯುತ್ತಿದ್ದಾರೆ ಎಂದು ಮೂಲಗಳು ತಿಳಸಿವೆ.
  
ಈವರೆಗೆ ಉಕ್ರೇನ್ನಿಂದ 20 ಲಕ್ಷ ಮಂದಿ ದೇಶಬಿಟ್ಟು ತೆರಳಿದ್ದು, ಅವರಲ್ಲಿ 1 ಲಕ್ಷಮಂದಿ ಉಕ್ರೇನ್ ದೇಶದ ಪ್ರಜೆಗಳಲ್ಲವೆಂದು ವಿಶ್ವಸಂಸ್ಥೆಯ ವಲಸೆ ಸಂಘಟನೆಯ ವಕ್ತಾರೆ ಸಫಾ ಮಶೆಲಿ ತಿಳಿಸಿದ್ದಾರೆ.

ರಶ್ಯದಿಂದ 2482 ಉಕ್ರೇನ್ ಸೇನಾ ಸೌಕರ್ಯಗಳ ಧ್ವಂಸ

ಉಕ್ರೇನ್ನಲ್ಲಿ ತಾನು ಸೇನಾ ಕಾರ್ಯಾಚರಣೆಯನ್ನು ಆರಂಭಿಸಿದಾಗಿನಿಂದ ಆ ದೇಶದ ಸುಮಾರು 2482ರಷ್ಟು ಉಕ್ರೇನಿಯನ್ ಮಿಲಿಟರಿ ಗುರಿಗಳನ್ನು ನಾಶಪಡಿಸಿರುವುದಾಗಿ ರಶ್ಯದ ರಕ್ಷಣಾ ಸಚಿವಾಲಯವು ತಿಳಿಸಿರುವುದಾಗಿ ಸ್ಪುಟ್ನಿಕ್ ವರದಿ ಮಾಡಿದೆ.
 
ಈ ಕಾರ್ಯಾಚರಣೆಯಲ್ಲಿ ಒಟ್ಟಾರೆಯಾಗಿ ಉಕ್ರೇನ್ ಸೇನೆಯ 87 ಕಮಾಂಡ್ ಪೋಸ್ಟ್ಗಳು ಹಾಗೂ ಸಂವಹನ ಕೇಂದ್ರಗಳು, 124 ಎಸ್-300, ಬಕ್ ಎಂ. ಹಾಗೂ ಒಸಾ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳು, 79 ರಾಡಾರ್ ಠಾಣೆಗಳು ಸೇರಿದಂತೆ 2482 ಸೇನಾ ಗುರಿಗಳನ್ನು ನಾಶಪಡಿಸಲಾಗಿದೆ. ನಾಶಪಡಿಸಲಾದ ಯುಕ್ರೇನಿಯನ್ಸೇನಾ ಸೌಕರ್ಯಗಳಲ್ಲಿ 866 ಟ್ಯಾಂಕ್ಗಳು ಹಾಗೂ ಇತರ ಕವಚಾವೃತ ಸಮರ ವಾಹನಗಳು, 91 ಮಲ್ಟಿಪಲ್ ರಾಕೆಟ್ ಲಾಂಚರ್ಗಳು, 317 ಫಿರಂಗಿಗಳು ಹಾಗೂ ಮೋರ್ಟಾರ್ಗಳು, 634 ವಿಶೇಷ ಮಿಲಿಟರಿ ವಾಹನಗಳು ಕೂಡಾ ಸೇರಿವೆಯೆಂದು ರಶ್ಯದ ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆನ್ಕೊವ್ ತಿಳಿಸಿದ್ದಾರೆ.

ಕಳೆದ ಒಂದು ದಿನದೊಳಗೆ ರಶ್ಯದ ವಾಯುಪಡೆ ಉಕ್ರೇನ್ನಲ್ಲಿ 158 ಮಿಲಿಟರಿ ಸೌಕರ್ಯಗಳನ್ನು ನಾಶಪಡಿಸಿದೆಯೆಂದು ರಶ್ಯದ ಸೇನಾ ಮೂಲಗಳು ಹೇಳಿಕೊಂಡಿವೆ. ಅವು ಉಕ್ರೇನ್ ಸೇನೆಗೆ ಸೇರಿದ ಎರಡು ಮಿಗ್ 29 ಹಾಗೂ ಒಂದು ಎಸ್ಯು-27 ಜೆಟ್ ವಿಮಾನಗಳನ್ನು ಕೂಡಾ ಪತನಗೊಳಿಸಿದೆ ಹಾಗೂ ಎರಡು ಎಸ್-300 ವೈಮಾನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆಗಳನ್ನು ನಾಸಪಡಿಸಿದೆ.

ನಿರ್ಬಂಧಕ್ಕೆ ಪ್ರತೀಕಾರವಾಗಿ ರಶ್ಯದಿಂದ ಅನಿಲ ಪೈಪ್ಲೈನ್ ಮುಚ್ಚುವ ಬೆದರಿಕೆ

ಉಕ್ರೇನ್ ಮೇಲಿನ ಆಕ್ರಮಣವನ್ನು ಖಂಡಿಸಿ ತನ್ನ ವಿರುದ್ಧ ಹೇರಲಾದ ನಿರ್ಬಂಧಗಳಿಗೆ ಪ್ರತೀಕಾರವಾಗಿ ರಶ್ಯವು  ನೊರ್ಡ್ ಸ್ಟ್ರೀಮ್ 1 ಮಾರ್ಗವಾಗಿ ಯುರೋಪ್ಗೆ ಹಾದುಹೋಗುವ ತನ್ನ ಮುಖ್ಯ ಅನಿಲ ಕೊಳವೆ ಮಾರ್ಗವನ್ನು ಮುಚ್ಚುಗಡೆಗೊಳಿಸುವ ಬೆದರಿಕೆಯನ್ನು ಹಾಕಿದೆ. ರಶ್ಯದ ಈ ನಿರ್ಧಾರವನ್ನು ಕಾರ್ಯಗತಗೊಳಿಸಿದಲ್ಲಿ ಜಾಗತಿಕ ತೈಲ ಹಾಗೂ ಅನಿಲ ಮಾರುಕಟ್ಟೆಯಲ್ಲಿ ಭಾರೀತಲ್ಲಣವುಂಟಾಗುವ ಸಾಧ್ಯತೆಯಿದೆ. ಯುರೋಪ್ನ ಕಚ್ಛಾ ತೈಲ ಮಾರುಕಟ್ಟೆಗಳಲ್ಲಿ ಇದೇ ಮೊದಲ ಬಾರಿಗೆ ತೈಲ ದರಗಳು 14 ವರ್ಷಗಳಲ್ಲೇ ಗರಿಷ್ಠ ಏರಿಕೆಯನ್ನು ಕಂಡಿದೆ. ಆದರೆ ಅನಿಲ ಪೈಪ್ಲೈನ್ ಮುಚ್ಚುಗಡೆಗೊಂಡಲ್ಲಿ ತೈಲ ಬೆಲೆಯಲ್ಲಿ ಭಾರೀ ಹೆಚ್ಚಳವಾಗುವ ಭೀತಿ ವ್ಯಕ್ತವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X