ಶಿವಮೊಗ್ಗ : ಕ್ಷುಲ್ಲಕ ವಿಚಾರಕ್ಕೆ ಜಗಳ; ಯುವಕನಿಗೆ ಚೂರಿ ಇರಿತ

ಶಿವಮೊಗ್ಗ : ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿ ಯುವಕನಿಗೆ ಚಾಕು ಇರಿದ ಘಟನೆ ಶಂಕರಮಠ ರಸ್ತೆಯ ಟಾಟಾ ಶೋ ರೂಂ ಬಳಿ ನಡೆದಿದೆ.
ಬಾಪೂಜಿನಗರದ ಪಾಚಾ ಖಾನ್ (40) ಚಾಕು ಇರಿತಕ್ಕೆ ಒಳಗಾದವರು. ದೇಹದ ವಿವಿಧೆಡೆ ಚಾಕು ಇರಿತದಿಂದ ಗಾಯವಾಗಿದೆ ಎಂದು ತಿಳಿದುಬಂದಿದೆ.
ಪಾಚಾ ಸಾಬ್ ಮತ್ತು ಆರ್‌ಎಂಎಲ್ ನಗರದ ದಸ್ತಗೀರ್ ಎಂಬಾತನ ಮಧ್ಯೆ ಹಣಕಾಸು ವಿಚಾರವಾಗಿ ಜಗಳ ಆಗಿದ್ದು, ಈ ವೇಳೆ ಚೂರಿ ಇರಿತವಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಈ ಬಗ್ಗೆ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Next Story





